IND vs AUS: ಟೀಂ ಇಂಡಿಯಾ ನಾಯಕನಾಗಿ ಯಾರೂ ಮಾಡದ ಸಾಧನೆ ಮಾಡಿದ ರೋಹಿತ್ ಶರ್ಮಾ..!

Updated By: ಪೃಥ್ವಿಶಂಕರ

Updated on: Feb 10, 2023 | 1:51 PM

Rohit Sharma: ರೋಹಿತ್ ಶರ್ಮಾ ಈ ಹಿಂದೆ ಟೆಸ್ಟ್ ಕ್ರಿಕೆಟ್‌ನಲ್ಲಿ 8 ಶತಕಗಳನ್ನು ದಾಖಲಿಸಿದ್ದರು. ಆದರೆ ಅವರು ಟೆಸ್ಟ್ ನಾಯಕನಾಗಿ ಗಳಿಸಿದ ಮೊದಲ ಶತಕ ಇದಾಗಿದೆ.

1 / 5
ನಾಗ್ಪುರ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಶತಕ ಬಾರಿಸುವ ಮೂಲಕ ಹಲವು ಅದ್ಭುತಗಳನ್ನು ಮಾಡಿದ್ದಾರೆ. ಅದರಲ್ಲಿ ಒಂದು, ರೋಹಿತ್ ತಮ್ಮ ಶತಕಗಳ ದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದರೆ, ಎರಡನೇದಾಗಿ ಕಾಂಗರೂ ತಂಡದ ವಿರುದ್ಧ ತಮ್ಮ ಮೊದಲ ಟೆಸ್ಟ್ ಶತಕವನ್ನು ಬಾರಿಸಿದ್ದಾರೆ. ಅಲ್ಲದೆ ರೋಹಿತ್ ಈಗ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕ ಗಳಿಸಿದ ಏಕೈಕ ಭಾರತೀಯ ನಾಯಕ ಎಂಬ ಮಹತ್ವದ ದಾಖಲೆಯನ್ನು ಬರೆದಿದ್ದಾರೆ.

2 / 5
ರೋಹಿತ್ ಶರ್ಮಾ ಈ ಹಿಂದೆ ಟೆಸ್ಟ್ ಕ್ರಿಕೆಟ್‌ನಲ್ಲಿ 8 ಶತಕಗಳನ್ನು ದಾಖಲಿಸಿದ್ದರು. ಆದರೆ ಅವರು ಟೆಸ್ಟ್ ನಾಯಕನಾಗಿ ಗಳಿಸಿದ ಮೊದಲ ಶತಕ ಇದಾಗಿದೆ. ಇದು ರೋಹಿತ್ ಅವರ ಟೆಸ್ಟ್ ವೃತ್ತಿಜೀವನದ 9 ನೇ ಶತಕವಾಗಿದೆ.

3 / 5
ರೋಹಿತ್ ಶರ್ಮಾ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ 30 ಶತಕಗಳನ್ನು ಬಾರಿಸಿದ್ದು, ಇದರಲ್ಲಿ ನಾಯಕತ್ವವಹಿಸಿಕೊಂಡ ಬಳಿಕ ರೋಹಿತ್ 3 ಶತಕ ಬಾರಿಸಿದ್ದಾರೆ.

4 / 5
ಅದೇ ರೀತಿ ಟಿ20 ಕ್ರಿಕೆಟ್‌ನಲ್ಲಿ 4 ಶತಕ ಸಿಡಿಸಿರುವ ರೋಹಿತ್, ಇಲ್ಲಿಯೂ ನಾಯಕತ್ವದ ಇನ್ನಿಂಗ್ಸ್ ಆಡುವಾಗ 2 ಶತಕಗಳನ್ನು ಬಾರಿಸಿದ್ದಾರೆ.

5 / 5
ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಪೂರೈಸಿರುವ ರೋಹಿತ್ ಪ್ರಸ್ತುತ ಅಜೇಯರಾಗಿ ಬ್ಯಾಟ್ ಬೀಸುತ್ತಿದ್ದಾರೆ. ಅವರ ಇನ್ನಿಂಗ್ಸ್‌ ಎಲ್ಲಿಗೆ ಕೊನೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Published On - 1:48 pm, Fri, 10 February 23