IND vs AUS: ಹೈವೋಲ್ಟೇಜ್ ಪಂದ್ಯಕ್ಕೆ ಭಾರತ ರೆಡಿ: ರೋಹಿತ್ ಪಡೆಯಿಂದ ಭರ್ಜರಿ ಅಭ್ಯಾಸ

| Updated By: Vinay Bhat

Updated on: Sep 25, 2022 | 11:29 AM

India vs Australia: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ನಿರ್ಣಾಯಕ ಮೂರನೇ ಟಿ20 ಪಂದ್ಯ ಇಂದು ಹೈದರಾಬಾದ್​ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

1 / 8
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ನಿರ್ಣಾಯಕ ಮೂರನೇ ಟಿ20 ಪಂದ್ಯ ಇಂದು ಹೈದರಾಬಾದ್​ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿದ್ದರೆ, ದ್ವಿತೀಯ ಸೆಣೆಸಾಟದಲ್ಲಿ ಭಾರತ 6 ವಿಕೆಟ್​ ಗಳ ಜಯ ಸಾಧಿಸಿತ್ತು. ಹೀಗಾಗಿ ಕೊನೆಯ ಟಿ20 ಮೇಲೆ ಎಲ್ಲರ ಕಣ್ಣಿದೆ.

2 / 8
ಹಿಂದಿನ ಎರಡೂ ಪಂದ್ಯಗಳಲ್ಲಿ ರೋಹಿತ್ ಪಡೆ ವೈಫಲ್ಯ ಅನುಭವಿಸಿದ್ದು ಬೌಲಿಂಗ್​ ನಲ್ಲಿ. ಅದರಲ್ಲೂ ಮುಖ್ಯವಾಗಿ ವೇಗಿಗಳು. ಪದೇ ಪದೇ ದುಬಾರಿಯಾಗುತ್ತಿರುವ ಟೀಮ್ ಇಂಡಿಯಾ ವೇಗಿಗಳು ಆದಷ್ಟು ಬೇಗ ಲಯಕಂಡುಕೊಳ್ಳಬೇಕಿದೆ. ಟಿ20 ವಿಶ್ವಕಪ್ ​ಗೂ ಮುನ್ನ ಭಾರತಕ್ಕೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಕಟ್ಟಲು ಇಂದಿನ ಪಂದ್ಯ ಮಹತ್ವದ್ದಾಗಿದೆ. ಹೀಗಾಗಿ ಭಾರತ ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ.

3 / 8
ಮೊದಲ ಟಿ20 ಪಂದ್ಯದಲ್ಲಿ ದುಬಾರಿಯಾದ ಉಮೇಶ್ ಯಾದವ್ ಎರಡನೇ ಕದನದಿಂದ ಹೊರಗುಳಿದು ಜಸ್ ​ಪ್ರೀತ್ ಬುಮ್ರಾ ಸ್ಥಾನ ಪಡೆದು ಮಾರಕವಾಗಿ ಪರಿಣಮಿಸಿದರು. ಆದರೆ, ಎರಡನೇ ಟಿ20 ಯಲ್ಲಿ ಹರ್ಷಲ್ ಪಟೇಲ್ ದುಬಾರಿ ಆದರು. ಹೀಗಾಗಿ ಹರ್ಷಲ್ ಜಾಗಕ್ಕೆ ದೀಪಕ್ ಚಹರ್ ಬರುವ ಸಾಧ್ಯತೆ ಇದೆ.

4 / 8
ಅಂತೆಯೆ ಯುಜ್ವೇಂದ್ರ ಚಹಲ್ ಸ್ಥಾನ ಕೂಡ ತುಗುಯ್ಯಾಲೆಯಲ್ಲಿದೆ. ಕಳೆದ ಏಷ್ಯಾಕಪ್ ​ನಿಂದಲೂ ಚಹಲ್ ಸ್ನಿನ್ ಮೋಡಿ ನಡೆಯುತ್ತಿಲ್ಲ. ವಿಕೆಟ್ ಕೀಳಲು ಪರದಾಡುತ್ತಿದ್ದಾರೆ. ಇವರ ಜಾಗದಲ್ಲಿ ರವಿಚಂದ್ರನ್ ಅಶ್ವಿನ್ ಕಣಕ್ಕಿಳಿದರೆ ಅಚ್ಚರಿ ಪಡಬೇಕಿಲ್ಲ. ಅತ್ತ ಅಕ್ಷರ್ ಪಟೇಲ್ ಬೊಂಬಾಟ್ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

5 / 8
ಭಾರತದ ಬ್ಯಾಟರ್​ ಗಳು ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಒಬ್ಬರು ವೈಫಲ್ಯ ಅನುಭವಿಸಿದರೂ ಮತ್ತೊಬ್ಬರು ಜವಾಬ್ದಾರಿ ವಹಿಸಿ ರನ್ ವೇಗವನ್ನು ಹೆಚ್ಚಿಸುತ್ತಿದ್ದಾರೆ. ಸೂರ್ಯಕುಮಾರ್ ಯಾದವ್, ವಿರಾಟ್​ ಕೊಹ್ಲಿ ಫೇಲ್​ ಆದರೂ, ರೋಹಿತ್​ ಶರ್ಮಾ, ಕೆ ಎಲ್​ ರಾಹುಲ್​, ಹಾರ್ದಿಕ್​ ಪಾಂಡ್ಯಾ ರನ್ ಗಳಿಸುತ್ತಾರೆ.

6 / 8
ದಿನೇಶ್ ಕಾರ್ತಿಕ್ ಫಿನಿಶಿಂಗ್ ಕೆಲಸವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ರಿಷಭ್ ಪಂತ್​ಗೆ ಇನ್ನೂ ಮಿಂಚಲು ಅವಕಾಶ ಸಿಗಲಿಲ್ಲ.

7 / 8
ಬ್ಯಾಟಿಂಗ್ ಅಭ್ಯಾಸದಲ್ಲಿ ನಿರತರಾಗಿರುವ ಕೆಎಲ್ ರಾಹುಲ್.

8 / 8
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್/ ಆರ್. ಅಶ್ವಿನ್, ದೀಪಕ್ ಚಹರ್, ಜಸ್ಪ್ರೀತ್ ಬುಮ್ರಾ.