R Ashwin: ಭಾರತದ ಪಿಚ್ ಬಗ್ಗೆ ಕಮೆಂಟ್ ಮಾಡಿದ ಆಸ್ಟ್ರೇಲಿಯಾ ಪ್ಲೇಯರ್ಗೆ ಖಡಕ್ ಉತ್ತರ ಕೊಟ್ಟ ಆರ್. ಅಶ್ವಿನ್
TV9 Web | Updated By: Vinay Bhat
Updated on:
Feb 04, 2023 | 1:46 PM
India vs Australia Test: ಆರ್. ಅಶ್ವಿನ್, ಆಸ್ಟ್ರೇಲಿಯಾನ್ನರು ಸರಣಿ ಆರಂಭಕ್ಕೂ ಮೊದಲೇ ಮೈಂಡ್ ಗೇಮ್ಸ್ ಶುರು ಮಾಡಿರುತ್ತಾರೆ. ಮೈಂಡ್ ಗೇಮ್ಸ್ ಎಂದರೆ ಆಸೀಸ್ ಆಟಗಾರರಿಗೆ ಬಲು ಪ್ರೀತಿ. ಅವರ ಕ್ರಿಕೆಟ್ ಶೈಲಿಯೇ ಅದು ಎಂದು ಖಡಕ್ ಆಗಿ ಹೇಳಿದ್ದಾರೆ.
1 / 8
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಫೆಬ್ರವರಿ 9 ರಿಂದ ಆರಂಭವಾಗಲಿದೆ. ಈಗಾಗಲೇ ಈ ಟೆಸ್ಟ್ ಸರಣಿಯ ಕಾವು ಹೆಚ್ಚಿದ್ದು ಹಾಲಿ, ಮಾಜಿ ಆಟಗಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೊನ್ನೆಯಷ್ಟೆ ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್ ಕೀಪರ್ ಇಯಾನ್ ಹೀಲಿ ಭಾರತದ ಪಿಚ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೀಗ ಆರ್. ಅಶ್ವಿನ್ ಸರಿಯಾಗಿ ತಿರುಗೇಟು ನೀಡಿದ್ದಾರೆ.
2 / 8
ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಭಾರತ ತಂಡ ನ್ಯಾಯಯುತ ಪಿಚ್‌ಗಳನ್ನು ಸಿದ್ಧಪಡಿಸಿದರೆ, ಉತ್ತಮ ಬ್ಯಾಟಿಂಗ್ ಪಿಚ್ ಆಗಿದ್ದರೆ, ಪಂದ್ಯವು ಕೊನೆಯ ದಿನದವರೆಗೂ ಸಾಗುತ್ತದೆ. ಆಗ ಆಸ್ಟ್ರೇಲಿಯಾ ಪಂದ್ಯಗಳನ್ನು ಗೆಲ್ಲುತ್ತದೆ. ಕಳೆದ ಸರಣಿಯಲ್ಲಿ ಅನ್ಯಾಯದ ಪಿಚ್ ತಯಾರಿಸಲಾಗಿತ್ತು. ಚೆಂಡುಗಳು ಪುಟಿಯುತ್ತಿದ್ದವು ಮತ್ತು ಮೊದಲ ದಿನದಿಂದ ಪಂದ್ಯ ಕುತೂಹಲ ಕಳೆದುಕೊಳ್ಳುತ್ತಿತ್ತು ಎಂದು ಹೀಲಿ ಹೇಳಿದ್ದರು.
3 / 8
ಅಲ್ಲದೆ ಆಸ್ಟ್ರೇಲಿಯಾ ಆಟಗಾರರು, ಭಾರತದಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಿ ಲಾಭವಿಲ್ಲ, ಅಭ್ಯಾಸಕ್ಕೆ ಸಿಗುವ ಪಿಚ್‌ಗಳಿಗೂ ಪಂದ್ಯದಲ್ಲಿ ಸಿಗುವ ಪಿಚ್‌ಗಳಿಗೂ ಸಂಬಂಧವೇ ಇರುವುದಿಲ್ಲ ಎಂದೆಲ್ಲಾ ಚಾಡಿ ಹೇಳಲು ಶುರು ಮಾಡಿದ್ದಾರೆ. ಆತಿಥೇಯ ತಂಡವೂ ಒತ್ತಡದಲ್ಲಿ ಆಡಬೇಕು ಮತ್ತು ನ್ಯಾಯಯುತ ಪಿಚ್‌ಗಳನ್ನು ತಯಾರಿಸಬೇಕು ಎಂದು ಹೇಳಿದ್ದರು.
4 / 8
ಈ ಹೇಳಿಕೆಗೆ ತಿರುಗೇಟು ನೀಡಿರುವ ಆರ್. ಅಶ್ವಿನ್, ಆಸ್ಟ್ರೇಲಿಯಾನ್ನರು ಸರಣಿ ಆರಂಭಕ್ಕೂ ಮೊದಲೇ ಮೈಂಡ್ ಗೇಮ್ಸ್ ಶುರು ಮಾಡಿರುತ್ತಾರೆ. ಮೈಂಡ್ ಗೇಮ್ಸ್ ಎಂದರೆ ಆಸೀಸ್ ಆಟಗಾರರಿಗೆ ಬಲು ಪ್ರೀತಿ. ಅವರ ಕ್ರಿಕೆಟ್ ಶೈಲಿಯೇ ಅದು ಎಂದು ಖಡಕ್ ಆಗಿ ಹೇಳಿದ್ದಾರೆ.
5 / 8
ಸರಣಿ ಆರಂಭಕ್ಕೂ ಮುನ್ನ ಇಂಥಹ ಒಂದು ಕಿಡಿಯ ಅಗತ್ಯವಿರುತ್ತದೆ. ಆಸ್ಟ್ರೇಲಿಯಾ ಬ್ಯಾಟರ್ಗಳು ನಮಗಾಗಿ ಯಾವುದೇ ವಿಕೆಟ್ಗಳನ್ನು ನೀಡುವುದಿಲ್ಲ. ಅದು ಪಂದ್ಯ ಸ್ಥಿತಿಯ ಮೇಲೆ, ನಮ್ಮ ಸಾಮರ್ಥ್ಯದ ಮೇಲಷ್ಟೆ ನಿರ್ಧಾರವಾಗುತ್ತದೆ. ಪಂದ್ಯ ಆರಂಭಕ್ಕೂ ಮುನ್ನ ಆಸೀಸ್ ಆಟಗಾರರು ಈರೀತಿಯ ಕಮೆಂಟ್ ಮಾಡುವುದು ವಾಡಿಕೆ ಎಂದು ಅಶ್ವಿನ್ ಹೇಳಿದ್ದಾರೆ.
6 / 8
ಇನ್ನು ಈ ಪಂದ್ಯದಲ್ಲಿ ಆರ್. ಅಶ್ವಿನ್ ನೂತನ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ. ಅಶ್ವಿನ್ 1 ವಿಕೆಟ್ ಪಡೆದರೆ ಅನಿಲ್ ಕುಂಬ್ಳೆ ಅವರ ಶ್ರೇಷ್ಠ ದಾಖಲೆಯನ್ನು ಮುರಿಯಲಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 450 ವಿಕೆಟ್ ಪಡೆದ ಮೊದಲ ಭಾರತೀಯ ಮತ್ತು ವಿಶ್ವದ ಎರಡನೇ ಬೌಲರ್ ಆಗಲಿದ್ದಾರೆ. ಅನಿಲ್ ಕುಂಬ್ಳೆ 93 ಟೆಸ್ಟ್ ಪಂದ್ಯಗಳಲ್ಲಿ 450 ವಿಕೆಟ್‌ಗಳ ದಾಖಲೆಯನ್ನು ಮುಟ್ಟಿದ್ದಾರೆ.
7 / 8
ಭಾರತ ಮತ್ತು ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಫೆಬ್ರವರಿ 9 ರಿಂದ ಪ್ರಾರಂಭವಾಗಲಿದೆ. ಈಗಾಗಲೇ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಸೇರಿದಂತೆ ಟೀಮ್ ಇಂಡಿಯಾದ ಕೆಲ ಆಟಗಾರರು ನಾಗ್ಪುರಕ್ಕೆ ತಲುಪಿದ್ದಾರೆ ಮತ್ತು ಮೈದಾನದಲ್ಲಿ ಪ್ರ್ಯಾಕ್ಟೀಸ್ ಕೂಡ ಶುರು ಮಾಡಿಕೊಂಡಿದ್ದಾರೆ.
8 / 8
ಮೊದಲೆರಡು ಟೆಸ್ಟ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.