IND vs AUS: ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಇತಿಹಾಸ ಸೃಷ್ಟಿಸಿ ಇಂದಿಗೆ ಭರ್ತಿ 5 ವರ್ಷ..!
IND vs AUS: ದು ವರ್ಷಗಳ ಹಿಂದೆ ಇದೇ ದಿನದಂದು ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಟೆಸ್ಟ್ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಹಿಂದೇದೂ ಮಾಡಿರದ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿತ್ತು. ಅಲ್ಲದೆ ಕಾಂಗರೂ ನಾಡಲ್ಲಿ ಈ ಸಾಧನೆ ಮಾಡಿದ ಮೊದಲ ಏಷ್ಯನ್ ತಂಡ ಎಂಬ ದಾಖಲೆಯನ್ನು ಬರೆದಿತ್ತು.
1 / 7
ಜನವರಿ 7 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಬಹಳ ವಿಶಿಷ್ಟವಾದ ದಿನ. ಏಕೆಂದರೆ ಐದು ವರ್ಷಗಳ ಹಿಂದೆ ಇದೇ ದಿನದಂದು ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಟೆಸ್ಟ್ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಹಿಂದೇದೂ ಮಾಡಿರದ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿತ್ತು. ಅಲ್ಲದೆ ಕಾಂಗರೂ ನಾಡಲ್ಲಿ ಈ ಸಾಧನೆ ಮಾಡಿದ ಮೊದಲ ಏಷ್ಯನ್ ತಂಡ ಎಂಬ ದಾಖಲೆಯನ್ನು ಬರೆದಿತ್ತು.
2 / 7
ವಾಸ್ತವವಾಗಿ ಟೀಂ ಇಂಡಿಯಾ 2018-19 ರಂದು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿತ್ತು. ಸಿಡ್ನಿಯಲ್ಲಿ ನಡೆದ ಕೊನೆಯ ಮಳೆ ಪೀಡಿತ ಟೆಸ್ಟ್ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿತ್ತು. ಈ ಮೂಲಕ 2-1 ಅಂತರದಲ್ಲಿ ಟೆಸ್ಟ್ ಸರಣಿ ವಶಪಡಿಸಿಕೊಂಡು ಇತಿಹಾಸ ನಿರ್ಮಿಸಿತ್ತು.
3 / 7
ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅವರ 194 ರನ್‌ಗಳ ಇನ್ನಿಂಗ್ಸ್ ಆಧಾರದ ಮೇಲೆ ಟೀಂ ಇಂಡಿಯಾ ಈ ಪಂದ್ಯವನ್ನು 31 ರನ್‌ಗಳಿಂದ ಗೆದ್ದುಕೊಂಡಿತು ಮತ್ತು ಇದರೊಂದಿಗೆ ತಂಡವು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
4 / 7
ಆದರೆ, ಇದಾದ ಬಳಿಕ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಿರುಗೇಟು ನೀಡಿತು. ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಸೋಲಿಸಿ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿತು.
5 / 7
ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಗೆಲುವಿನ ಲಯಕ್ಕೆ ಮರಳಿದ ಭಾರತ, ಆತಿಥೇಯ ತಂಡವನ್ನು 137 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿ ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿತು.
6 / 7
ಇನ್ನು ಸಿಡ್ನಿಯಲ್ಲಿ ನಡೆದ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ಸನಿಹದಲ್ಲಿತ್ತಾದರೂ ಮಳೆರಾಯ ಅದಕ್ಕೆ ಅವಕಾಶ ನೀಡಲಿಲ್ಲ. ಅಂತಿಮವಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಆ ಪಂದ್ಯದಲ್ಲಿ ಪೂಜಾರ ಮತ್ತು ರಿಷಬ್ ಪಂತ್ ಅವರ ಶತಕಗಳ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 622 ರನ್ ಗಳಿಸಿತ್ತು.
7 / 7
ಸರಣಿಯಲ್ಲಿ 521 ರನ್ ಕಲೆಹಾಕಿದ ಚೇತೇಶ್ವರ ಪೂಜಾರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ನಾಲ್ಕು ಪಂದ್ಯಗಳ ಸರಣಿಯಲ್ಲಿ ಬೌಲಿಂಗ್ನಲ್ಲಿ ಮಿಂಚಿದ ಜಸ್ಪ್ರೀತ್ ಬುಮ್ರಾ 21 ವಿಕೆಟ್ ಪಡೆದರು. ಅವರೊಂದಿಗೆ ಮೊಹಮ್ಮದ್ ಶಮಿ 18 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ ಮೂರು ಪಂದ್ಯಗಳನ್ನು ಆಡಿ 11 ವಿಕೆಟ್ ಪಡೆದರು.