Updated on: Jan 07, 2024 | 11:30 AM
ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್ ಅವರ ಸಹೋದರಿ ಸಾಕ್ಷಿ ಪಂತ್ ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾಗುತ್ತಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸಾಕ್ಷಿ ಪಂತ್ ತನ್ನ ಬಹುಕಾಲದ ಗೆಳೆಯ ಅಂಕಿತ್ ಚೌಧರಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಶುಭಘಳಿಗೆಯ ಫೋಟೋವನ್ನು ಪಂತ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ರಿಷಬ್ ಪಂತ್ ತನ್ನ ಸಹೋದರಿಯ ನಿಶ್ಚಿತಾರ್ಥದ ಸಂದರ್ಭದಲ್ಲಿ ಕಪ್ಪು ಬಣ್ಣದ ಕೋಟ್ ಮತ್ತು ಪ್ಯಾಂಟ್ ಧರಿಸಿದ್ದರೆ, ಅವರ ಸಹೋದರಿ ತಿಳಿ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ. ಹಾಗೆಯೇ ಅಂಕಿತ್ ಚೌಧರಿ ಕುರ್ತಾ ಪೈಜಾಮದಲ್ಲಿ ಕಾಣಿಸಿಕೊಂಡಿದ್ದಾರೆ.
ಅಂಕಿತ್ ಚೌಧರಿ ಜೊತೆಗಿನ ನಿಶ್ಚಿತಾರ್ಥದ ಫೋಟೋವನ್ನು ಪೋಸ್ಟ್ ಮಾಡಿರುವ ಸಾಕ್ಷಿ, 'ನಮ್ಮ ಪ್ರೇಮಕಥೆಯ ಹೊಸ ಅಧ್ಯಾಯ ಇಲ್ಲಿದೆ...' ಎಂದು ಖುಷಿ ಹಂಚಿಕೊಂಡಿದ್ದಾರೆ.
ಸಾಕ್ಷಿ ಪಂತ್ ಮತ್ತು ಅಂಕಿತ್ ಚೌಧರಿ 9 ವರ್ಷಗಳಿಂದ ಪರಿಚಿತರು. ಇಬ್ಬರೂ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅಂಕಿತ್ ಲಂಡನ್‌ಗೆ ಹೋಗುವ ಮೊದಲು ಅಮಿಟಿ ವಿಶ್ವವಿದ್ಯಾಲಯದಲ್ಲಿ ಓದಿದ್ದರು. ಹಾಗೆಯೇ ಸಾಕ್ಷಿ ಪಂತ್ ಕೂಡ ಯುಕೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು.
ಇದೀಗ ಅಂಕಿತ್ ಹಾಗೂ ಸಾಕ್ಷಿ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಅದರಂತೆ ಇದೀಗ ನಿಶ್ಚಿತಾರ್ಥ ಮುಗಿಸಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ತಿಳಿದು ಬಂದಿದೆ.
ಅಂದಹಾಗೆ ಸಾಕ್ಷಿ ಪಂತ್ ರಿಷಬ್ಗಿಂತ ಎರಡು ವರ್ಷ ದೊಡ್ಡವಳು. ಅದರಂತೆ ಅಕ್ಕನ ಮದುವೆ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಪ.ಂತ್ ನಿಶ್ಚಿತಾರ್ಥ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಈ ಶುಭ ಸಮಾರಂಭದಲ್ಲಿ ರಿಷಭ್ ಪಂತ್ ಅವರ ಕುಟುಂಬದ ಆಪ್ತರಷ್ಟೇ ಕಾಣಿಸಿಕೊಂಡಿದ್ದಾರೆ.