IND vs AUS: 4 ಮ್ಯಾಚ್ ವಿನ್ನರ್‌ಗಳು ಔಟ್; ಟೀಂ ಇಂಡಿಯಾ ವಿರುದ್ಧ ಕಾಂಗರೂಗಳಿಗೆ ತಂಡ ಕಟ್ಟುವುದೇ ಕಷ್ಟ..!
IND vs AUS: ಆಸ್ಟ್ರೇಲಿಯ ತಂಡ ಸರಣಿಯಲ್ಲಿ ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ ಈ ನಡುವೆ ಮೂರನೇ ಟೆಸ್ಟ್‌ಗೂ ಮುನ್ನ ತಂಡದಿಂದ 4 ಮ್ಯಾಚ್ ವಿನ್ನರ್‌ಗಳು ಹೊರಗುಳಿದಿರುವುದು ಕಾಂಗರೂಗಳಿಗೆ ತಲೆನೋವು ತಂದಿದೆ.
1 / 5
ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ರಿಂದ ಪ್ರಾರಂಭವಾಗಲಿದೆ. ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಈ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ದೆಹಲಿ ಟೆಸ್ಟ್ ಗೆದ್ದ ನಂತರ ಇದೀಗ ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿ ಗೆಲ್ಲಲು ಟೀಂ ಇಂಡಿಯಾ ಪ್ರಯತ್ನಿಸಲಿದೆ. ಆದರೆ ಇತ್ತ ಆಸ್ಟ್ರೇಲಿಯ ತಂಡ ಸರಣಿಯಲ್ಲಿ ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಈ ನಡುವೆ ಮೂರನೇ ಟೆಸ್ಟ್‌ಗೂ ಮುನ್ನ ತಂಡದಿಂದ 4 ಮ್ಯಾಚ್ ವಿನ್ನರ್‌ಗಳು ಹೊರಗುಳಿದಿರುವುದು ಕಾಂಗರೂಗಳಿಗೆ ತಲೆನೋವು ತಂದಿದೆ.
2 / 5
ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಕೊಡುಗೆ ನೀಡುತ್ತಿದ್ದ ಕಮಿನ್ಸ್ ಅಲಭ್ಯತೆ ಕಾಂಗರೂಗಳಿಗೆ ದೊಡ್ಡ ಹೊಡೆತ ನೀಡಲಿದೆ.
3 / 5
ಆಸ್ಟ್ರೇಲಿಯದ ಆಕ್ರಮಣಕಾರಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಗಾಯದಿಂದಾಗಿ ಉಳಿದ ಎರಡು ಟೆಸ್ಟ್‌ಗಳಿಂದ ಹೊರಗುಳಿಯಲಿದ್ದಾರೆ. ಆರಂಭಿಕರಾಗಿ ಬಿಗ್ ಇನ್ನಿಂಗ್ಸ್ ಕಟ್ಟುವ ಸಾಮಥ್ಯ್ರವಿದ್ದ ವಾರ್ನರ್ ಅಲಭ್ಯತೆಯೂ ಆಸೀಸ್ಗೆ ಹಿನ್ನಡೆಯುಂಟು ಮಾಡಿದೆ.
4 / 5
ಈ ಇಬ್ಬರೊಂದಿಗೆ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಕೂಡ ಸರಣಿಯಿಂದ ಹೊರಗುಳಿಯಲಿದ್ದಾರೆ. ಆಸೀಸ್ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದ ಹೇಜಲ್‌ವುಡ್ ಅಲಭ್ಯತೆ ತಂಡದ ಬೌಲಿಂಗ್ ವಿಭಾಗಕ್ಕೆ ಹೊಡೆತ ನೀಡಿದೆ.
5 / 5
ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ಆಶ್ಟನ್ ಅಗರ್ ಕೂಡ ಸರಣಿಯ ಮಧ್ಯದಲ್ಲಿ ತವರಿಗೆ ವಾಪಸ್ಸಾಗಿದ್ದಾರೆ. ಅವರ ಸ್ಥಾನಕ್ಕೆ ಈಗಾಗಲೇ ಬೇರೆ ಆಟಗಾರ ಎಂಟ್ರಿಕೊಟ್ಟಿದ್ದು, ಅವರ ಸ್ಥಾನವನ್ನು ಎಷ್ಟರ ಮಟ್ಟಿಗೆ ತುಂಬುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
Published On - 12:30 pm, Sun, 26 February 23