IND vs AUS: ಆಸೀಸ್ ವಿರುದ್ಧ 3 ವಿಕೆಟ್ ಉರುಳಿಸಿ ದಿಗ್ಗಜರ ದಾಖಲೆ ಮುರಿದ ಅಶ್ವಿನ್..!
R Ashwin: ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ 20 ತಿಂಗಳ ಬಳಿಕ ಏಕದಿನ ಕ್ರಿಕೆಟ್‌ಗೆ ಪುನರಾಗಮನ ಮಾಡಿದ ಆರ್.ಅಶ್ವಿನ್ ಈ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿ, 7 ಓವರ್‌ಗಳಲ್ಲಿ 41 ರನ್ ನೀಡಿ 3 ವಿಕೆಟ್ ಪಡೆದರು.
1 / 7
ಸೆಪ್ಟೆಂಬರ್ 24 ರಂದು ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 99 ರನ್‌ಗಳ ಜಯ ಸಾಧಿಸಿದೆ. ಮಳೆಯಿಂದಾಗಿ ಆಸ್ಟ್ರೇಲಿಯಾ 33 ಓವರ್‌ಗಳಲ್ಲಿ 317 ರನ್‌ಗಳ ಗೆಲುವಿನ ಗುರಿ ಪಡೆಯಿತು. ಆದರೆ ಟೀಂ ಇಂಡಿಯಾದ ಬೌಲರ್‌ಗಳು ಆಸ್ಟ್ರೇಲಿಯಾವನ್ನು 28.2 ಓವರ್‌ಗಳಲ್ಲಿ 217 ರನ್‌ಗಳಿಗೆ ಆಲೌಟ್ ಮಾಡಿದರು.
2 / 7
ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ 20 ತಿಂಗಳ ಬಳಿಕ ಏಕದಿನ ಕ್ರಿಕೆಟ್‌ಗೆ ಪುನರಾಗಮನ ಮಾಡಿದ ಆರ್.ಅಶ್ವಿನ್ ಈ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿ, 7 ಓವರ್‌ಗಳಲ್ಲಿ 41 ರನ್ ನೀಡಿ 3 ವಿಕೆಟ್ ಪಡೆದರು.
3 / 7
ಆರ್ ಅಶ್ವಿನ್ ಡೇವಿಡ್ ವಾರ್ನರ್, ಮಾರ್ನಸ್ ಲಬುಶೇನ್ ಮತ್ತು ಜೋಸ್ ಇಂಗ್ಲಿಸ್ ಅವರ ವಿಕೆಟ್ ಪಡೆದರು. ಈ 3 ವಿಕೆಟ್ಗಳ ಸಹಾಯದಿಂದ ಅಶ್ವಿನ್, ಒಂದು ತಂಡದ ವಿರುದ್ಧ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
4 / 7
ಅಶ್ವಿನ್ ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಒಟ್ಟು 144 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದು, ಈ ವಿಚಾರದಲ್ಲಿ ಮಾಜಿ ಸ್ಪಿನ್ನರ್‌ಗಳಾದ ಅನಿಲ್ ಕುಂಬ್ಳೆ ಮತ್ತು ಕಪಿಲ್ ದೇವ್ ಅವರನ್ನೂ ಅಶ್ವಿನ್ ಹಿಂದಿಕ್ಕಿದ್ದಾರೆ.
5 / 7
ಕನ್ನಡಿಗ ಅನಿಲ್ ಕುಂಬ್ಳೆ ತಮ್ಮ ಕ್ರಿಕೆಟ್ ಜೀವನದಲ್ಲಿ ಆಸ್ಟ್ರೇಲಿಯಾ ವಿರುದ್ಧ 142 ವಿಕೆಟ್ ಪಡೆದಿದ್ದರು.
6 / 7
ಟೀಂ ಇಂಡಿಯಾದ ಮಾಜಿ ದಿಗ್ಗಜ ಆಲ್‌ರೌಂಡರ್ ಕಪಿಲ್ ದೇವ್ ಅವರ ಹೆಸರಿನಲ್ಲಿ 141 ವಿಕೆಟ್‌ಗಳಿವೆ. ದೇವ್ ಪಾಕಿಸ್ತಾನ ವಿರುದ್ಧ 141 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಕುಂಬ್ಳೆ ಪಾಕಿಸ್ತಾನ ವಿರುದ್ಧ 135 ವಿಕೆಟ್ ಪಡೆದಿದ್ದಾರೆ.
7 / 7
ಇನ್ನು ಏಕದಿನ ಮಾದರಿಯಲ್ಲಿ ಅತಿ ವಿಕೆಟ್ ಉರುಳಿಸಿದ ಭಾರತೀಯ ಬೌಲರ್ಗಳ ಪೈಕಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಶ್ವಿನ್ ಮುರಿದಿದ್ದಾರೆ. ಸಚಿನ್ ತಮ್ಮ ಏಕದಿನ ವೃತ್ತಿಜೀವನದಲ್ಲಿ 154 ವಿಕೆಟ್ ಪಡೆದಿದ್ದರೆ, ಪ್ರಸ್ತುತ ಅಶ್ವಿನ್ ಹೆಸರಿನಲ್ಲಿ 155 ವಿಕೆಟ್‌ಗಳಿವೆ.