ಏಕದಿನ ವಿಶ್ವಕಪ್ನಲ್ಲಿ ಧೋನಿ- ರಾಹುಲ್ರನ್ನು ಹಿಂದಿಕ್ಕಿದ ರೋಹಿತ್ ಶರ್ಮಾ..!
ODI World Cup 2023: ಪ್ರಸ್ತುತ ರೋಹಿತ್ ಶರ್ಮಾಗೆ 36 ವರ್ಷ, 161 ದಿನ ವಯಸ್ಸಾಗಿದ್ದು, ಈ ಮೂಲಕ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ಅತ್ಯಂತ ಹಿರಿಯ ನಾಯಕರ ಪೈಕಿ ಧೋನಿ ಹಾಗೂ ಮೊಹಮ್ಮದ್ ಅಜರುದ್ದೀನ್ ಅವರನ್ನು ಹಿಂದಿಕ್ಕಿದ್ದಾರೆ.
1 / 8
ಭಾನುವಾರ ನಡೆಯುತ್ತಿರುವ ಏಕದಿನ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನೂತನ ದಾಖಲೆ ನಿರ್ಮಿಸಿದ್ದಾರೆ.
2 / 8
ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ನಿರ್ಮಿಸಿದ್ದಾರೆ.
3 / 8
ಪ್ರಸ್ತುತ ರೋಹಿತ್ ಶರ್ಮಾಗೆ 36 ವರ್ಷ, 161 ದಿನ ವಯಸ್ಸಾಗಿದ್ದು, ಈ ಮೂಲಕ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ಅತ್ಯಂತ ಹಿರಿಯ ನಾಯಕರ ಪೈಕಿ ಧೋನಿ ಹಾಗೂ ಮೊಹಮ್ಮದ್ ಅಜರುದ್ದೀನ್ ಅವರನ್ನು ಹಿಂದಿಕ್ಕಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ಎಂಬುದನ್ನು ನೋಡುವುದಾದರೆ..
4 / 8
ರೋಹಿತ್ ಶರ್ಮಾಗೂ ಮೊದಲು, ಮೊಹಮ್ಮದ್ ಅಜರುದ್ದೀನ್ (36 ವರ್ಷ, 124 ದಿನ) 1999 ರ ವಿಶ್ವಕಪ್ನಲ್ಲಿ ಭಾರತವನ್ನು ಮುನ್ನಡೆಸಿದ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆ ಬರೆದಿದ್ದರು. ಆದರೀಗ ಆ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ.
5 / 8
ಮೊಹಮ್ಮದ್ ಅಜರುದ್ದೀನ್ ನಂತರ ಮೂರನೇ ಸ್ಥಾನದಲ್ಲಿರುವ ಟೀಂ ಇಂಡಿಯಾದ ಹಾಲಿ ಕೋಚ್ ರಾಹುಲ್ ದ್ರಾವಿಡ್ (34 ವರ್ಷ 71 ದಿನ) 2007 ರ ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ಹಿರಿಯ ನಾಯಕ ಎನಿಸಿಕೊಂಡಿದ್ದರು.
6 / 8
ಈ ವಿಚಾರದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಎಸ್ ವೆಂಕಟರಾಘವನ್ (34 ವರ್ಷ 56 ದಿನ) 1979 ರಲ್ಲಿ ಟೀಂ ಇಂಡಿಯಾವನ್ನು ವಿಶ್ವಕಪ್ನಲ್ಲಿ ಮುನ್ನಡೆಸಿದ್ದರು.
7 / 8
ಭಾರತಕ್ಕೆ ಎರಡೆರಡು ವಿಶ್ವಕಪ್ ಗೆದ್ದುಕೊಟ್ಟ ಮಹೇಂದ್ರ ಸಿಂಗ್ ಧೋನಿ (33 ವರ್ಷ 262) 2015 ರಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ಐದನೇ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
8 / 8
ಏತನ್ಮಧ್ಯೆ, ರೋಹಿತ್ ಶರ್ಮಾ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಅವರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಮುರಿಯುವ ಅಂಚಿನಲ್ಲಿದ್ದಾರೆ. ರೋಹಿತ್ ಪ್ರಸ್ತುತ 551 ಸಿಕ್ಸರ್ ಸಿಡಿಸಿದ್ದು, ಕ್ರಿಸ್ ಗೇಲ್ 553 ಸಿಕ್ಸರ್ ಸಿಡಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.