ಆಸ್ಟ್ರೇಲಿಯಾ ಬೌಲರ್ಗಿಂತ ಕಡೆಯಾದ ರೋಹಿತ್ ಶರ್ಮಾ ಬ್ಯಾಟಿಂಗ್
Australia vs India: ಈ ವರ್ಷ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ 26 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 619 ರನ್ಗಳು ಮಾತ್ರ. ಅಂದರೆ ಹಿಟ್ಮ್ಯಾನ್ 24.76ರ ಸರಾಸರಿಯಲ್ಲಿ ಮಾತ್ರ ರನ್ಗಳಿಸಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಈವರೆಗೆ ಗಳಿಸಿದ ಒಟ್ಟು ಮೊತ್ತ ಕೇವಲ 31 ರನ್ಗಳು ಮಾತ್ರ.
1 / 5
ಮೂರು ಪಂದ್ಯಗಳು... ಐದು ಇನಿಂಗ್ಸ್... ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಈವರೆಗೆ ಕಲೆಹಾಕಿರುವುದು ಕೇವಲ 31 ರನ್ಗಳು. ಇದರಲ್ಲಿ ಮೂಡಿಬಂದ ಗರಿಷ್ಠ ಸ್ಕೋರ್ 10. ಇನ್ನುಳಿದ ಎಲ್ಲಾ ಇನಿಂಗ್ಸ್ಗಳಲ್ಲೂ ಒಂದಂಕಿ ಮೊತ್ತವನ್ನು ದಾಟಿಲ್ಲ.
2 / 5
ಅದರಲ್ಲೂ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದ್ದ ಮೆಲ್ಬೋರ್ನ್ ಟೆಸ್ಟ್ನಲ್ಲಿ ಇನಿಂಗ್ಸ್ ಆರಂಭಿಸಿದ ಹಿಟ್ಮ್ಯಾನ್ ಮೊದಲ ಇನಿಂಗ್ಸ್ನಲ್ಲಿ 3 ರನ್ಗಳಿಸಿದರೆ, ದ್ವಿತೀಯ ಇನಿಂಗ್ಸ್ನಲ್ಲಿ 9 ರನ್ ಬಾರಿಸಿ ಔಟಾಗಿದ್ದಾರೆ. ಈ ಮೂಲಕ 5 ಇನಿಂಗ್ಸ್ಗಳಿಂದ 31 ರನ್ಗಳಿಸಿದ್ದಾರೆ.
3 / 5
ಇಂಟ್ರೆಸ್ಟಿಂಗ್ ವಿಷಯ ಎಂದರೆ, ಇದೇ ಮೆಲ್ಬೋರ್ನ್ ಮೈದಾನದಲ್ಲಿ ಆಡಿದ ದ್ವಿತೀಯ ಇನಿಂಗ್ಸ್ವೊಂದರಲ್ಲೇ ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್ 41 ರನ್ ಕಲೆಹಾಕಿದ್ದಾರೆ. ಅದು ಕೂಡ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಹಾಗೂ ಅನುಭವಿ ಬೌಲರ್ಗಳಾದ ರವೀಂದ್ರ ಜಡೇಜಾ ಹಾಗೂ ಸಿರಾಜ್ ವಿರುದ್ಧ ಸೆಟೆದು ನಿಲ್ಲುವ ಮೂಲಕ.
4 / 5
ಅಂದರೆ ಇಲ್ಲಿ ರೋಹಿತ್ ಶರ್ಮಾ ಐದು ಇನಿಂಗ್ಸ್ಗಳಲ್ಲಿ ಕಲೆಹಾಕಿದ ಒಟ್ಟು ಸ್ಕೋರ್ಗಿಂತ ನಾಥನ್ ಲಿಯಾನ್ ಒಂದೇ ಪಂದ್ಯದಲ್ಲಿ ಗಳಿಸಿದ ಸ್ಕೋರ್ ಹೆಚ್ಚಿದೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾದ ಮತ್ತೋರ್ವ ಬೌಲರ್ ಸ್ಕಾಟ್ ಬೋಲ್ಯಾಂಡ್ ಮೆಲ್ಬೋರ್ನ್ನಲ್ಲೇ 21 ರನ್ ಕಲೆಹಾಕಿದ್ದಾರೆ.
5 / 5
ಆದರೆ ಭಾರತ ತಂಡದ ನಾಯಕ ಕಳೆದ 5 ಇನಿಂಗ್ಸ್ಗಳಲ್ಲಿ ಗಳಿಸಿರುವುದು ಕೇವಲ 31 ರನ್ಗಳು ಮಾತ್ರ. ಅದು ಕೂಡ 6.20 ಸರಾಸರಿಯಲ್ಲಿ ಎಂಬುದೇ ಅಚ್ಚರಿ. ಹೀಗಾಗಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ ರೋಹಿತ್ ಶರ್ಮಾ ಟೀಮ್ ಇಂಡಿಯಾದಿಂದ ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.