IND vs AUS: ಟೀಮ್ ಇಂಡಿಯಾ ಗೆದ್ದರೆ, ಅದುವೇ ಇತಿಹಾಸ..!

Updated on: Dec 30, 2024 | 5:54 AM

Australia vs India, 4th Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಕೊನೆಯ ದಿನದಾಟಕ್ಕೆ ಕಾಲಿಟ್ಟಿದೆ. ಅಂತಿಮ ದಿನದಾಟದಲ್ಲಿ ಟೀಮ್ ಇಂಡಿಯಾ 340 ರನ್​ಗಳನ್ನು ಕಲೆಹಾಕಿದರೆ ಗೆಲುವು ದಾಖಲಿಸಬಹುದು. ಅತ್ತ ಆಸ್ಟ್ರೇಲಿಯಾ ತಂಡ ಗೆಲ್ಲಬೇಕಿದ್ದರೆ 10 ವಿಕೆಟ್​​ಗಳನ್ನು ಪಡೆಯಲೇಬೇಕು. ಹೀಗಾಗಿ ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯವು ಫೈನಲ್ ಡೇ ಫೈಟ್​ ಆಗಿ ಮಾರ್ಪಟ್ಟಿದೆ.

1 / 5
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ರಣರೋಚಕ ಘಟ್ಟಕ್ಕೆ ಬಂದು ನಿಂತಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡ 474 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 369 ರನ್​ಗಳಿಸಿತು. ಇದೀಗ ದ್ವಿತೀಯ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡವು 234 ರನ್​ಗಳಿಸಿ ಆಲೌಟ್ ಆಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ರಣರೋಚಕ ಘಟ್ಟಕ್ಕೆ ಬಂದು ನಿಂತಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡ 474 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 369 ರನ್​ಗಳಿಸಿತು. ಇದೀಗ ದ್ವಿತೀಯ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡವು 234 ರನ್​ಗಳಿಸಿ ಆಲೌಟ್ ಆಗಿದೆ.

2 / 5

ಅತ್ತ ಮೊದಲ ಇನಿಂಗ್ಸ್​ನಲ್ಲಿ 105 ರನ್​ಗಳ ಹಿನ್ನಡೆ ಹೊಂದಿದ್ದ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲ್ಲಬೇಕಿದ್ದರೆ ದ್ವಿತೀಯ ಇನಿಂಗ್ಸ್​ನಲ್ಲಿ 340 ರನ್​ಗಳನ್ನು ಕಲೆಹಾಕಬೇಕು. ಆದರೆ ಇನ್ನುಳಿದಿರುವುದು ಕೇವಲ ಒಂದು ದಿನದಾಟ ಮಾತ್ರ. ಅಂದರೆ ಸೋಮವಾರ ಭಾರತ ತಂಡವು 340 ರನ್​​ಗಳ ಗುರಿ ತಲುಪಿದರೆ ಮಾತ್ರ ಪಂದ್ಯವನ್ನು ಗೆಲ್ಲಬಹುದು.

3 / 5

ಆದರೆ ಅದು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ 4ನೇ ಇನಿಂಗ್ಸ್​ನಲ್ಲಿ 300+ ರನ್ ಚೇಸಿಂಗ್ ಮಾಡಿರುವುದು ಕೇವಲ ಒಂದು ಬಾರಿ ಮಾತ್ರ. ಅದು ಕೂಡ 1928 ರಲ್ಲಿ ಎಂದರೆ ನಂಬಲೇಬೇಕು. ಅಂದು ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧ 332 ರನ್ ಚೇಸ್ ಮಾಡಿ ಇತಿಹಾಸ ನಿರ್ಮಿಸಿತ್ತು.

4 / 5

ಇದಾದ ಬಳಿಕ ಕಳೆದ 96 ವರ್ಷಗಳಲ್ಲಿ ಯಾವುದೇ ತಂಡ ಈ ಮೈದಾನದಲ್ಲಿ ಟೆಸ್ಟ್​ನಲ್ಲಿ 300 ರನ್​ಗಳನ್ನು ಚೇಸ್ ಮಾಡಿ ಗೆದ್ದಿಲ್ಲ. ಅದರಲ್ಲೂ 2000ರ ಬಳಿಕ ಎಂಸಿಜಿ ಮೈದಾನದಲ್ಲಿ ನಾಲ್ಕನೇ ಇನಿಂಗ್ಸ್​ನಲ್ಲಿ ಚೇಸ್ ಮಾಡಿದ ಗರಿಷ್ಠ ಸ್ಕೋರ್ 231 ರನ್​ಗಳು. 2013 ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 231 ರನ್ ಬಾರಿಸಿ ಜಯ ಸಾಧಿಸಿರುವುದೇ ಶ್ರೇಷ್ಠ ಸಾಧನೆ.

5 / 5

ಇದೀಗ ಕೊನೆಯ ದಿನದಾಟದಲ್ಲಿ ಟೀಮ್ ಇಂಡಿಯಾ 340 ರನ್​ಗಳ ಕಠಿಣ ಗುರಿಯನ್ನು ಚೇಸ್ ಮಾಡಿದರೆ ಅದುವೇ ಇತಿಹಾಸವಾಗಲಿದೆ. ಈ ಮೂಲಕ ಭಾರತ ತಂಡವು ಮೆಲ್ಬೋರ್ನ್​ ಮೈದಾನದಲ್ಲಿ ಐತಿಹಾಸಿಕ ಸಾಧನೆ ಮಾಡಲಿದೆಯಾ ಕಾದು ನೋಡಬೇಕಿದೆ.

Published On - 5:53 am, Mon, 30 December 24

Loading...
Unable to load recommendations.
Follow Us