IND vs BAN: ಶತಕದ ಸಂಭ್ರಮದ ನಡುವೆ ಜಡೇಜಾ ಸಹಾಯ ನೆನೆದ ಅಶ್ವಿನ್
Ravichandran Ashwin Century: ಕ್ರೀಸ್ನಲ್ಲಿ ಜಡೇಜಾ ಅವರಿಂದ ಸಿಕ್ಕ ಸಹಾಯವನ್ನು ನೆನೆದ ಅಶ್ವಿನ್, ‘ನಾನು ಹೆಚ್ಚಾಗಿ ಸುಸ್ತಾಗಿದ್ದ ಸಂದರ್ಭದಲ್ಲಿ ನನ್ನ ಬಳಿ ಬರುತ್ತಿದ್ದ ಜಡೇಜಾ, ಎರಡು ರನ್‌ಗಳನ್ನು ಮೂರು ರನ್‌ಗಳಾಗಿ ಪರಿವರ್ತಿಸುವ ಅಗತ್ಯವಿಲ್ಲ ಎಂದು ಹೇಳಿದರು. ಈ ಸೂತ್ರವು ನನಗೆ ಸಹಾಯ ಮಾಡಿತು ಎಂದರು.
1 / 6
ಚೆನ್ನೈ ಟೆಸ್ಟ್‌ನ ಮೊದಲ ದಿನ ಟೀಂ ಇಂಡಿಯಾದ ಇಬ್ಬರು ಆಲ್ರೌಂಡರ್ಗಳು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಕೇವಲ 144 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನೆರವಾದ ಅಶ್ವಿನ್ ಹಾಗೂ ಜಡೇಜಾ 195 ರನ್ಗಳ ಅಜೇಯ ಜೊತೆಯಾಟ ಕಟ್ಟಿದರು.
2 / 6
ಈ ಇಬ್ಬರ ಜೊತೆಯಾಟದ ನೆರವಿನಿಂದಾಗಿ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿದೆ. ಬಾಂಗ್ಲಾ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಅಶ್ವಿನ್ ಹಾಗೂ ಜಡೇಜಾ ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದಿದ್ದು, ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ವೇಳೆ ಅಶ್ವಿನ್ ಶತಕ ಸಿಡಿಸಿದರೆ, ಜಡೇಜಾ ಶತಕದಂಚಿನಲ್ಲಿದ್ದಾರೆ.
3 / 6
ಆರಂಭದಿಂದಲೂ ಸಮಯೋಜಿತ ಬ್ಯಾಟಿಂಗ್ ನಡೆಸಿದ ಅಶ್ವಿನ್ ಅಜೇಯ 102 ರನ್ ಬಾರಿಸಿದ್ದು, ಜಡೇಜಾ ಕೂಡ ಅಜೇಯ 86 ರನ್ ಸಿಡಿಸಿದ್ದಾರೆ. ದಿನದಾಟದ ಅಂತ್ಯದ ನಂತರ, ಕಾಮೆಂಟರಿ ಮಾಡುತ್ತಿದ್ದ ರವಿಶಾಸ್ತ್ರಿ ಅವರೊಂದಿಗೆ ಮಾತನಾಡಿದ ಅಶ್ವಿನ್ ತಮ್ಮ ಶತಕದ ಸಿಕ್ರೇಟ್ ರೀವಿಲ್ ಮಾಡಿದರು.
4 / 6
ಈ ವೇಳೆ ಕ್ರೀಸ್ನಲ್ಲಿ ಜಡೇಜಾ ಅವರಿಂದ ಸಿಕ್ಕ ಸಹಾಯವನ್ನು ನೆನೆದ ಅಶ್ವಿನ್, ‘ನಾನು ಹೆಚ್ಚಾಗಿ ಸುಸ್ತಾಗಿದ್ದ ಸಂದರ್ಭದಲ್ಲಿ ನನ್ನ ಬಳಿ ಬರುತ್ತಿದ್ದ ಜಡೇಜಾ, ಎರಡು ರನ್‌ಗಳನ್ನು ಮೂರು ರನ್‌ಗಳಾಗಿ ಪರಿವರ್ತಿಸುವ ಅಗತ್ಯವಿಲ್ಲ ಎಂದು ಹೇಳಿದರು. ಈ ಸೂತ್ರವು ನನಗೆ ಸಹಾಯ ಮಾಡಿತು.
5 / 6
ನಾನು ಚೆನ್ನೈನಲ್ಲಿ ಟಿಎನ್‌ಪಿಎಲ್‌ನಲ್ಲಿ ಟಿ20 ಪಂದ್ಯಗಳನ್ನು ಆಡಿದ್ದೇನೆ. ಹೀಗಾಗಿ ನನಗೆ ನನ್ನ ಬ್ಯಾಟಿಂಗ್ ಮೇಲೆ ವಿಶ್ವಾಸವಿತ್ತು. ಕ್ರೀಸ್‌ಗೆ ಬಂದ ಕೂಡಲೆ ಪಿಚ್ ನೋಡಿದ ನಾನು ರಿಷಬ್ ಪಂತ್ ಶೈಲಿಯಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ ಎಂದು ಅಶ್ವಿನ್ ಹೇಳಿದ್ದಾರೆ.
6 / 6
6 ವಿಕೆಟ್‌ಗಳ ಪತನದ ನಂತರ ಕ್ರೀಸ್‌ಗೆ ಕಾಲಿಟ್ಟ ಅಶ್ವಿನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 58 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ನಂತರ ಮುಂದಿನ 50 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಅವರ ಆರನೇ ಶತಕವಾಗಿದೆ. ಅವರು ಇದುವರೆಗೆ ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಶತಕ ಮತ್ತು ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ತಲಾ ಒಂದು ಶತಕ ಗಳಿಸಿದ್ದಾರೆ.