IPL 2025: 18 ಸೀಸನ್​ಗಳಿಗೆ 11 ಕೋಚ್​ಗಳು: ಕಪ್ ಗೆಲ್ಲಲು ಮುಂದುವರೆದ ಪಂಜಾಬ್ ಕಿಂಗ್ಸ್ ಪ್ಲ್ಯಾನ್

IPL 2025: ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ನಾಯಕರಗಳನ್ನು ಪರಿಚಯಿಸಿದ ದಾಖಲೆ ಹೊಂದಿರುವ ಪಂಜಾಬ್ ಕಿಂಗ್ಸ್ ಇದೀಗ ಕೋಚ್​ಗಳ ನೇಮಕದ ವಿಷಯದಲ್ಲೂ ಮುಂಚೂಣಿಯಲ್ಲಿದೆ. ಏಕೆಂದರೆ ಕಳೆದ 17 ಸೀಸನ್​ಗಳಲ್ಲಿ 10 ಕೋಚ್​ಗಳನ್ನು ನೇಮಕ ಮಾಡಿದ್ದ ಪಂಜಾಬ್ ಫ್ರಾಂಚೈಸಿ ಇದೀಗ 11ನೇ ಕೋಚ್ ಆಗಿ ರಿಕಿ ಪಾಂಟಿಂಗ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

|

Updated on:Sep 19, 2024 | 2:53 PM

ಐಪಿಎಲ್ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಎತ್ತಿ ಹಿಡಿಯದ ನಾಲ್ಕು ತಂಡಗಳಲ್ಲಿ ಪಂಜಾಬ್ ಕಿಂಗ್ಸ್ ಕೂಡ ಒಂದು. ಕಳೆದ 17 ಸೀಸನ್​ಗಳಿಂದ ಕಣಕ್ಕಿಳಿಯುತ್ತಿದ್ದರೂ ಪಂಜಾಬ್ ಪಾಲಿಗೆ ಐಪಿಎಲ್ ಕಿರೀಟ ಮರೀಚಿಕೆಯಾಗಿಯೇ ಉಳಿದಿದೆ. ಹೀಗಾಗಿಯೇ ಕಳೆದ 17 ಸೀಸನ್​ಗಳಲ್ಲಿ ಪಂಜಾಬ್ ಕಿಂಗ್ಸ್​ 10 ಬಾರಿ ಕೋಚ್​ಗಳನ್ನು ಬದಲಿಸಿದೆ.

1 / 5
ಇದೀಗ ಪಂಜಾಬ್ ಕಿಂಗ್ಸ್ ತಂಡದ 11ನೇ ಕೋಚ್ ಆಗಿ ರಿಕಿ ಪಾಂಟಿಂಗ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಯಲ್ಲಿ ಕಾಣಿಸಿಕೊಂಡಿದ್ದ ಆಸ್ಟ್ರೇಲಿಯಾ ತಂಡ ಮಾಜಿ ನಾಯಕನನ್ನು ಈ ಬಾರಿ ಪಂಜಾಬ್ ಕಿಂಗ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈ ಮೂಲಕ ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲು ಪ್ಲ್ಯಾನ್ ರೂಪಿಸಿದೆ.

2 / 5
ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡವು 10 ಕೋಚ್​ಗಳ ಮುಂದಾಳತ್ವದಲ್ಲಿ ಕಣಕ್ಕಿಳಿದಿತ್ತು. 2008 ರಲ್ಲಿ ನಡೆದ ಚೊಚ್ಚಲ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿ ಟಾಮ್ ಮೂಡಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಮೈಕೆಲ್ ಬೆವೆನ್ (2011), ಆ್ಯಡಂ ಗಿಲ್​ಕ್ರಿಸ್ಟ್ (2012), ಡಾರೆನ್ ಲೆಹ್ಮನ್ (2013) ಹಾಗೂ ಸಂಜಯ್ ಬಂಗಾರ್ (2014-2016) ಪಂಜಾಬ್ ಪಡೆಯ ಕೋಚ್ ಹುದ್ದೆಯಲ್ಲಿ ಕಾಣಿಸಿಕೊಂಡಿದ್ದರು.

3 / 5
ಇನ್ನು 2017 ರಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಿದ್ದರು. ಆದರೆ ಅದು ಕೇವಲ ಒಂದು ಸೀಸನ್​ಗೆ ಸೀಮಿತವಾಯಿತು. 2018 ರಲ್ಲಿ ಈ ಸ್ಥಾನಕ್ಕೆ ಬ್ರಾಡ್ ಹಾಡ್ಜ್​ ನೇಮಕವಾಗಿದ್ದರು. ಆ ನಂತರ ಮೈಕ್ ಹೆಸ್ಸನ್ (2019) ಮತ್ತು ಅನಿಲ್ ಕುಂಬ್ಳೆ (2020-22) ಪಂಜಾಬ್ ಕಿಂಗ್ಸ್ ತಂಡ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇನ್ನು ಕಳೆದ ಎರಡು ಸೀಸನ್​ಗಳಲ್ಲಿ ಟ್ರೆವರ್ ಬೇಲಿಸ್ (2023-24) ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಿದರೂ ಪಂಜಾಬ್ ಕಿಂಗ್ಸ್ ತಂಡದ ಕಪ್ ಗೆಲ್ಲುವ ಕನಸು ಈಡೇರಿರಲಿಲ್ಲ. ಹೀಗಾಗಿ ಈ ಬಾರಿ ಹೊಸ ಕೋಚ್​ನ ನೇಮಕ ಮಾಡಲಾಗಿದೆ.

4 / 5
ಅದರಂತೆ ಇದೀಗ 2015 ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟ ಹಾಗೂ 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್​ಗೇರಿಸಿದ್ದ ತರಬೇತುದಾರ ರಿಕಿ ಪಾಂಟಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಹೆಡ್ ಕೋಚ್ ಆಗಿ ಆಯ್ಕೆ ಮಾಡಿದೆ. ಈ ಮೂಲಕ ಮುಂಬರುವ ಐಪಿಎಲ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಲು ಪಂಜಾಬ್ ಕಿಂಗ್ಸ್ ಈಗಲೇ ಭರ್ಜರಿ ಪ್ಲ್ಯಾನ್ ರೂಪಿಸುತ್ತಿದೆ.

5 / 5

Published On - 2:20 pm, Thu, 19 September 24

Follow us
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ

ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?

ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್

ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ

ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ

ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು

ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ

ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!

ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ