Rohit Sharma: ‘ಪ್ರಸ್ತುತ ನಿವೃತ್ತಿ ಅನ್ನೋದು ಜೋಕ್ ಆಗಿದೆ’; ಟಿ20 ನಿವೃತ್ತಿ ನಿರ್ಧಾರದಿಂದ ರೋಹಿತ್ ಯು- ಟರ್ನ್?
Rohit Sharma: ನಿವೃತ್ತಿಯಿಂದ ಯು-ಟರ್ನ್ ತೆಗೆದುಕೊಳ್ಳುವುದರ ಬಗ್ಗೆ ಜಿಯೋ ಸಿನಿಮಾದಲ್ಲಿ ಮಾತನಾಡಿದ ರೋಹಿತ್, ‘ಇತ್ತೀಚಿನ ದಿನಗಳಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ನಿವೃತ್ತಿ ಎನ್ನುವುದು ಒಂದು ತಮಾಷೆಯಾಗಿದೆ. ಆಟಗಾರರು ನಿವೃತ್ತಿ ಘೋಷಿಸಿ ನಂತರ ಮತ್ತೆ ಕ್ರಿಕೆಟ್ ಆಡಲು ಬರುತ್ತಾರೆ. ಭಾರತದಲ್ಲಿ ನಾವು ಈ ರೀತಿಯ ಘಟನೆಯನ್ನು ನೋಡಿಲ್ಲ ಎಂದು ರೋಹಿತ್ ಹೇಳಿದ್ದಾರೆ.
1 / 6
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಗೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಈ ಸರಣಿಗಾಗಿ ಉಭಯ ತಂಡಗಳು ಸಜ್ಜಾಗಿದೆ. ಮೊದಲ ಟೆಸ್ಟ್ ಪಂದ್ಯ ಚೆನ್ನೈನಲ್ಲಿ ನಡೆಯಲ್ಲಿದ್ದು, ಈ ಸರಣಿ ಆರಂಭಕ್ಕೂ ಮುನ್ನ ಜಿಯೋ ಸಿನಿಮಾದಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.
2 / 6
ವಾಸ್ತವವಾಗಿ 2024 ರ ಟಿ20 ವಿಶ್ವಕಪ್ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಮಾದರಿಗೆ ವಿದಾಯ ಹೇಳಿದ್ದರು. ಹೀಗಿರುವಾಗ ಮುಂದಿನ ದಿನಗಳಲ್ಲಿ ರೋಹಿತ್ ಶರ್ಮಾ ತಮ್ಮ ನಿರ್ಧಾರದಿಂದ ಯು-ಟರ್ನ್ ತೆಗೆದುಕೊಳ್ಳಬಹುದೇ ಅಥವಾ ಇಲ್ಲವೇ ಎಂಬುದರ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.
3 / 6
ನಿವೃತ್ತಿಯಿಂದ ಯು-ಟರ್ನ್ ತೆಗೆದುಕೊಳ್ಳುವುದರ ಬಗ್ಗೆ ಜಿಯೋ ಸಿನಿಮಾದಲ್ಲಿ ಮಾತನಾಡಿದ ರೋಹಿತ್, ‘ಇತ್ತೀಚಿನ ದಿನಗಳಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ನಿವೃತ್ತಿ ಎನ್ನುವುದು ಒಂದು ತಮಾಷೆಯಾಗಿದೆ. ಆಟಗಾರರು ನಿವೃತ್ತಿ ಘೋಷಿಸಿ ನಂತರ ಮತ್ತೆ ಕ್ರಿಕೆಟ್ ಆಡಲು ಬರುತ್ತಾರೆ. ಭಾರತದಲ್ಲಿ ನಾವು ಈ ರೀತಿಯ ಘಟನೆಯನ್ನು ನೋಡಿಲ್ಲ. ಆದರೂ ನಾನು ಇತರ ದೇಶಗಳ ಆಟಗಾರರನ್ನು ನೋಡುತ್ತಿದ್ದೇನೆ. ಅವರು ಮೊದಲು ನಿವೃತ್ತಿ ಘೋಷಿಸುತ್ತಾರೆ. ಆದರೆ ಆ ನಂತರ ಯು-ಟರ್ನ್ ತೆಗೆದುಕೊಳ್ಳುತ್ತಾರೆ.
4 / 6
ಆದ್ದರಿಂದ ಆಟಗಾರನು ನಿವೃತ್ತಿ ಹೊಂದಿದ್ದಾನೋ, ಇಲ್ಲವೋ ಎಂಬುದು ನಿಮಗೆ ಅರ್ಥವಾಗುವುದಿಲ್ಲ. ಆದರೆ ನನ್ನ ನಿರ್ಧಾರವೇ ಅಂತಿಮ ಮತ್ತು ನಾನು ತುಂಬಾ ಸ್ಪಷ್ಟವಾಗಿದ್ದೇನೆ. ನಾನು ತುಂಬಾ ಇಷ್ಟಪಟ್ಟು ಆಡುತ್ತಿದ್ದ ಸ್ವರೂಪಕ್ಕೆ ವಿದಾಯ ಹೇಳಲು ಇದು ಸರಿಯಾದ ಸಮಯ ಎಂದು ರೋಹಿತ್ ಹೇಳಿಕೊಂಡಿದ್ದಾರೆ.
5 / 6
ರೋಹಿತ್ ಶರ್ಮಾ ಸುಮಾರು 17 ವರ್ಷಗಳ ಕಾಲ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್ ಆಡಿದ್ದಾರೆ. ಈ ಅವಧಿಯಲ್ಲಿ, ಅವರು ಎರಡೂ ಟಿ20 ವಿಶ್ವಕಪ್ ಚಾಂಪಿಯನ್ ತಂಡಗಳ ಭಾಗವಾಗಿದ್ದರು. 2007 ರಲ್ಲಿ ಆಟಗಾರನಾಗಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿದಿದ್ದ ರೋಹಿತ್, 2024 ರಲ್ಲಿ ನಾಯಕನಾಗಿ ಈ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
6 / 6
ರೋಹಿತ್ ಟೀಂ ಇಂಡಿಯಾ ಪರ ಒಟ್ಟು 159 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 5 ಶತಕಗಳ ಸಹಾಯದಿಂದ 4231 ರನ್ ಕಲೆಹಾಕಿದ್ದಾರೆ. ಅಲ್ಲದೆ ರೋಹಿತ್ ಈ ಸ್ವರೂಪದಲ್ಲಿ 32 ಅರ್ಧ ಶತಕಗಳನ್ನು ಸಹ ಸಿಡಿಸಿದ್ದಾರೆ.