IND vs ENG 2nd Test: ಇಂಗ್ಲೆಂಡ್ ಗೆಲುವಿಗೆ ಬೇಕು 332 ರನ್ಸ್: ರೋಚಕತೆ ಸೃಷ್ಟಿಸಿದ ಇಂದಿನ ನಾಲ್ಕನೇ ದಿನದಾಟ

|

Updated on: Feb 05, 2024 | 7:04 AM

India vs England Second Test: ಗೆಲುವಿಗೆ 399 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿರುವ ಇಂಗ್ಲೆಂಡ್ ಪರ ಜ್ಯಾಖ್ ಕ್ರಾವ್ಲೆ 29 ಹಾಗೂ ರೆಹಾನ್ ಅಹ್ಮದ್ 9 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಗೆಲುವಿಗೆ 332 ರನ್ಸ್ ಬೇಕಾಗಿದೆ. ಹೀಗಾಗಿ ಇಂದಿನ ನಾಲ್ಕನೇ ದಿನದಾಟ ಕುತೂಹಲ ಕೆರಳಿಸಿದೆ.

1 / 6
ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 67 ರನ್​ಗೆ 1 ವಿಕೆಟ್ ಕಳೆದುಕೊಂಡಿದ್ದು, ಗೆಲುವಿಗೆ 332 ರನ್ಸ್ ಬೇಕಾಗಿದೆ. ಹೀಗಾಗಿ ಇಂದಿನ ನಾಲ್ಕನೇ ದಿನದಾಟ ಕುತೂಹಲ ಕೆರಳಿಸಿದೆ.

2 / 6
ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 253 ರನ್‌ಗಳಿಗೆ ಆಲೌಟ್ ಮಾಡಿದ ಟೀಮ್ ಇಂಡಿಯಾ ಆ ಬಳಿಕ ಎರಡನೇ ದಿನದಾಟದಂತ್ಯಕ್ಕೆ ಎರಡನೇ ಇನ್ನಿಂಗ್ಸ್​ನಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿತ್ತು. ಆದರೆ ಮೂರನೇ ದಿನ ಭಾರತ ತನ್ನೇಲ್ಲ ವಿಕೆಟ್ ಕಳೆದುಕೊಂಡು 227 ರನ್ ಗಳಿಸಲಷ್ಟೇ ಶಕ್ತವಾಯಿತು.

3 / 6
ಈ 227 ರನ್‌ಗಳ ಪೈಕಿ ಶುಭ್​ಮನ್ ಗಿಲ್ ಒಬ್ಬರೆ 104 ರನ್‌ಗಳ ಕೊಡುಗೆ ನೀಡಿದರು. ಶುಭ್‌ಮನ್ ಬಿಟ್ಟರೆ ಭಾರತದ ಯಾವ ಬ್ಯಾಟರ್​ನಿಂದ ಕೂಡ ದೊಡ್ಡ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಗಿಲ್ ಒತ್ತಡದ ನಡುವೆ ಗಿಲ್ 147 ಎಸೆತಗಳಲ್ಲಿ 11 ಫೋರ್, 2 ಸಿಕ್ಸರ್​ನೊಂದಿಗೆ 104 ರನ್ ಗಳಿಸಿದರು.

4 / 6
ಶುಭ್‌ಮನ್ ಹೊರತುಪಡಿಸಿ ಅಕ್ಷರ್ ಪಟೇಲ್ 45 ರನ್​ಗಳ ಇನ್ನಿಂಗ್ಸ್ ಆಡಿದರೆ, ಶ್ರೇಯಸ್ ಅಯ್ಯರ್ ಮತ್ತು ಆರ್ ಅಶ್ವಿನ್ ತಲಾ 29 ರನ್​ಗಳ ಕಾಣಿಕೆ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ 17 ರನ್​ಗಳಿಗೆ ಸುಸ್ತಾದರೆ. ಇಡೀ ಸರಣಿಯಲ್ಲಿ ರನ್ ಬರ ಎದುರಿಸುತ್ತಿರುವ ನಾಯಕ ರೋಹಿತ್ ಶರ್ಮಾ ಕೂಡ 13 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು.

5 / 6
ಉಳಿದಂತೆ ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಶೂನ್ಯಕ್ಕೆ ಔಟಾದರೆ, ಉಳಿದ ಮೂವರಿಗೆ ಎರಡಂಕಿಯನ್ನೂ ತಲುಪಲು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ಪರ ಟಾಮ್ ಹಾರ್ಟ್ಲಿ 4 ವಿಕೆಟ್ ಪಡೆದು ಮಿಂಚಿದರೆ, ರೆಹಾನ್ ಅಹ್ಮದ್ 3 ಹಾಗೂ ಜೇಮ್ಸ್ ಅಂಡರ್ಸನ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

6 / 6
ಗೆಲುವಿಗೆ 399 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿರುವ ಇಂಗ್ಲೆಂಡ್ ಪರ ಬೆನ್ ಡಕ್ಲೆಟ್ 27 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು. ಆದರೆ, ಜ್ಯಾಖ್ ಕ್ರಾವ್ಲೆ 29 ಹಾಗೂ ರೆಹಾನ್ ಅಹ್ಮದ್ 9 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಆರ್. ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.