IND vs ENG: ಶತಕ ವಂಚಿತ ರೋಹಿತ್ ಏಕಾಂಗಿ ಹೋರಾಟ; ಆಂಗ್ಲರಿಗೆ 230 ರನ್ ಟಾರ್ಗೆಟ್

|

Updated on: Oct 29, 2023 | 6:19 PM

IND vs ENG, ICC World Cup 2023: ಲಕ್ನೋದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ವಿಶ್ವಕಪ್ ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 230 ರನ್ ಕಲೆಹಾಕಿದೆ.

1 / 8
ಲಕ್ನೋದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ವಿಶ್ವಕಪ್ ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 230 ರನ್ ಕಲೆಹಾಕಿದೆ.

2 / 8
ಟೀಂ ಇಂಡಿಯಾ ಪರ ನಾಯಕನ ಆಟ ಆಡಿದ ರೋಹಿತ್ ಶರ್ಮಾ 101 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 87 ರನ್ ಕಲೆಹಾಕಿ 13 ರನ್​ಗಳಿಂದ ಶತಕ ವಂಚಿತರಾದರು.

3 / 8
ಈ ಪಂದ್ಯದಲ್ಲಿ ರೋಹಿತ್ ಶತಕ ವಂಚಿತರಾದರೂ ನಾಯಕನಾಗಿ 100ನೇ ಪಂದ್ಯವನ್ನಾಡಿದ ದಾಖಲೆಯ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 18000 ರನ್​ಗಳನ್ನು ಸಹ ಪೂರೈಸಿದರು.

4 / 8
ರೋಹಿತ್ ಹೊರತಾಗಿ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ 39 ರನ್​ಗಳ ಇನ್ನಿಂಗ್ಸ್‌ ಆಡಿದರೆ, ಸೂರ್ಯಕುಮಾರ್ ಯಾದವ್ 49 ರನ್​ಗಳ ಅವಶ್ಯಕ ಇನ್ನಿಂಗ್ಸ್‌ ಆಡಿದರು.

5 / 8
ಆದರೆ ತಂಡಕ್ಕೆ ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಗಿಲ್, ಶ್ರೇಯಸ್ ಸಿಂಗಲ್ ಡಿಜಿಟ್​ಗೆ ವಿಕೆಟ್ ಒಪ್ಪಿಸಿದರೆ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

6 / 8
ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 9 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದರು. ಡೇವಿಡ್ ವಿಲಿ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಮಿಡ್ ಆಫ್‌ನಲ್ಲಿ ಬೆನ್ ಸ್ಟೋಕ್ಸ್‌ಗೆ ಕ್ಯಾಚ್ ನೀಡಿದರು.

7 / 8
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದದ್ದು ಇದು 34ನೇ ಬಾರಿ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ಅನಗತ್ಯ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ. ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 34 ಬಾರಿ ಶೂನ್ಯಕ್ಕೆ ಔಟಾಗಿದ್ದರು.

8 / 8
ಇಂಗ್ಲೆಂಡ್ ಪರ ಮಿಂಚಿದ ವೇಗಿಗಳಾದ ಡೇವಿಡ್ ವಿಲ್ಲಿ 3 ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ ಹಾಗೂ ಸ್ಪಿನ್ನರ್ ಆದೀಲ್ ರಶೀದ್ ತಲಾ 2 ವಿಕೆಟ್ ಪಡೆದರು.

Published On - 6:02 pm, Sun, 29 October 23