IND vs ENG: ಪಂದ್ಯ ಶ್ರೇಷ್ಠ ಗೆದ್ದ ಬುಮ್ರಾಗೆ ಅದೊಂದು ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ..!

|

Updated on: Feb 05, 2024 | 4:03 PM

Jasprit Bumrah: ಈ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಬುಮ್ರಾ ಒಟ್ಟು 9 ವಿಕೆಟ್ ಪಡೆದರು. ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದರು. ಈ ಅತ್ಯುತ್ತಮ ಪ್ರದರ್ಶನಕ್ಕಾಗಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.

1 / 6
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯವನ್ನು ಭಾರತ ತಂಡ 106 ರನ್‌ಗಳಿಂದ ಗೆದ್ದು ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿದೆ.

2 / 6
ಟೀಂ ಇಂಡಿಯಾ ಗೆಲುವಿನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರ ಕೊಡುಗೆ ದೊಡ್ಡದಿದೆ. ಜೈಸ್ವಾಲ್ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ್ದರೆ, ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕದ ಇನ್ನಿಂಗ್ಸ್ ಆಡಿದರು. ಹಾಗೆಯೇ ಇವರಿಬ್ಬರ ಜೊತೆಗೆ ಜಸ್ಪ್ರೀತ್ ಬುಮ್ರಾ ಕೂಡ ಗೆಲುವಿಗೆ ಅದ್ಭುತ ಕೊಡುಗೆ ನೀಡಿದರು.

3 / 6
ಈ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಬುಮ್ರಾ ಒಟ್ಟು 9 ವಿಕೆಟ್ ಪಡೆದರು. ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದರು. ಈ ಅತ್ಯುತ್ತಮ ಪ್ರದರ್ಶನಕ್ಕಾಗಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.

4 / 6
ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಒಟ್ಟು 91 ರನ್ ನೀಡಿ 9 ವಿಕೆಟ್ ಪಡೆದರು. ಇದು ಇಂಗ್ಲೆಂಡ್ ವಿರುದ್ಧ ಅವರ ಅತ್ಯುತ್ತಮ ಅಂಕಿ ಅಂಶಗಳಾಗಿವೆ. ಇದಕ್ಕೂ ಮುನ್ನ 2023ರಲ್ಲಿ ಇಂಗ್ಲೆಂಡ್ ವಿರುದ್ಧ ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ 110 ರನ್‌ಗಳಿಗೆ 9 ವಿಕೆಟ್‌ಗಳನ್ನು ಪಡೆದಿದ್ದರು.

5 / 6
ಆದರೆ, ಇಂತಹ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ, ಅವರು ಚೇತನ್ ಶರ್ಮಾ ಅವರ ದೊಡ್ಡ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ ಚೇತನ್ ಶರ್ಮಾ 1986 ರ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ  ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್ ಪಡೆದ ದಾಖಲೆ ನಿರ್ಮಿಸಿದ್ದರು.

6 / 6
ಇದೀಗ ಆ ದಾಖಲೆಯನ್ನು ಮುರಿಯುವ ಅವಕಾಶ ಬುಮ್ರಾಗೆ ಸಿಕ್ಕಿತ್ತು. ಆದರೆ ಒಂದು ವಿಕೆಟ್​​ ಅಂತರದಿಂದ ಬುಮ್ರಾಗೆ ಈ ಅವಕಾಶ ಕೈತಪ್ಪಿತು. ವಾಸ್ತವವಾಗಿ ಬುಮ್ರಾಗೆ ಎರಡು ಬಾರಿ ಈ ದಾಖಲೆ ಮುರಿಯುವ ಅವಕಾಶ ಸಿಕ್ಕಿತ್ತಾದರೂ ಎರಡು ಬಾರಿಯೂ ಒಂದು ವಿಕೆಟ್‌ನಿಂದ ಬುಮ್ರಾ ಈ ಅವಕಾಶವನ್ನು ಕಳೆದುಕೊಂಡಿದ್ದಾರೆ.