IND vs ENG: ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ ಭರತ್; 3ನೇ ಟೆಸ್ಟ್​ಗೆ ಧೃವ್ ಜುರೇಲ್ ಆಯ್ಕೆ?

|

Updated on: Feb 04, 2024 | 8:18 PM

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪಿಂಗ್ ಜವಬ್ದಾರಿ ಹೊತ್ತಿರುವ ಯುವ ವಿಕೆಟ್​ಕೀಪರ್ ಬ್ಯಾಟ್ಸ್​ಮನ್ ಕೆಎಸ್​ ಭರತ್, ಕೀಪಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲೂ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ.

1 / 6
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪಿಂಗ್ ಜವಬ್ದಾರಿ ಹೊತ್ತಿರುವ ಯುವ ವಿಕೆಟ್​ಕೀಪರ್ ಬ್ಯಾಟ್ಸ್​ಮನ್ ಕೆಎಸ್​ ಭರತ್, ಕೀಪಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲೂ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ.

2 / 6
ಸರಣಿಯಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಇಲ್ಲಿಯವರೆಗೂ ವಿಕೆಟ್ ಕೀಪಿಂಗ್ ವಿಚಾರದಲ್ಲಿ ಭರತ್ ಬಗ್ಗೆ ಪರಿಣಿತರಿಂದ ಒಳ್ಳೆಯ ಅಭಿಪ್ರಾಯ ಮೂಡಿಬಂದಿಲ್ಲ. ಇದಕ್ಕೆ ಕಾರಣವೂ ಇದ್ದು, ಭರತ್ ಕೆಲವು ಸುಲಭ ಸ್ಟಂಪಿಂಗ್ ಅವಕಾಶಗಳನ್ನು ಕೈಚೆಲ್ಲಿದಲ್ಲದೆ, ವಿಕೆಟ್ ಹಿಂದೆ ಬೈ ರೂಪದಲ್ಲಿ ಹಲವು ರನ್ ಬಿಟ್ಟುಕೊಟ್ಟಿದ್ದಾರೆ

3 / 6
ಇತ್ತ ಬ್ಯಾಟಿಂಗ್​ನಲ್ಲೂ ಭರತ್ ಪ್ರದರ್ಶನ ತೀರ ಸಪ್ಪೆಯಾಗಿದೆ. ಭಾರತ ಟೆಸ್ಟ್​ ತಂಡದಲ್ಲಿ ಇದುವರೆಗೆ 7 ಟೆಸ್ಟ್ ಪಂದ್ಯಗಳನ್ನು ಆಡಿರುವ ಭರತ್, 12 ಇನ್ನಿಂಗ್ಸ್​ಗಳಲ್ಲಿ ಕೇವಲ 20 ರ ಸರಾಸರಿಯಲ್ಲಿ 221 ರನ್ ಕಲೆಹಾಕಿದ್ದಾರೆ. ಇದರಲ್ಲಿ 44 ರನ್ ಅವರ ಅತ್ಯಧಿಕ ಗರಿಷ್ಠ ಸ್ಕೋರ್ ಆಗಿದೆ.

4 / 6
ರಿಷಭ್ ಪಂತ್ ಅಲಭ್ಯತೆಯ ನಡುವೆ ಹಾಗೂ ಕೆಎಲ್ ರಾಹುಲ್ ಬದಲಿಯಾಗಿ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಸ್ಥಾನವನ್ನು ತುಂಬುತ್ತಿರುವ ಭರತ್ ಮೇಲೆ ಆರಂಭದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಇಡಲಾಗಿತ್ತು. ಆದರೆ ಭರತ್ ಇದುವರೆಗೆ ಒಂದೇ ಒಂದು ಪಂದ್ಯದಲ್ಲೂ ಅರ್ಧಶತಕ ಇನ್ನಿಂಗ್ಸ್ ಆಗಲಿ ಅಥವಾ ಗೆಲುವಿನ ಇನ್ನಿಂಗ್ಸ್ ಆಗಲಿ ಆಡಿಲ್ಲ.

5 / 6
ಇದು ಆಯ್ಕೆಗಾರರ ಅಸಮಾಧಾನಕ್ಕೆ ಕಾರಣವಾಗಿದ್ದು, ಸತತ ವೈಫಲ್ಯಗಳನ್ನು ಅನುಭವಿಸುತ್ತಿರುವ ಭರತ್​ರನ್ನು ಮೂರನೇ ಟೆಸ್ಟ್​ ಪಂದ್ಯದಿಂದ ಹೊರಗಿಡುವ ಸಾಧ್ಯತೆ ಇದೆ. ಅವರ ಬದಲು ತಂಡಕ್ಕೆ ಆಯ್ಕೆಯಾಗಿರುವ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಧೃವ್ ಜುರೇಲ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

6 / 6
ಇನ್ನು ಈ ಸರಣಿಯಲ್ಲಿ 4 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಭರತ್, ಕ್ರಮವಾಗಿ 41, 28, 17, 6 ರನ್ ಸಿಡಿಸಿದ್ದಾರೆ. ಅಲ್ಲದೆ ಮೊದಲ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ನಿರ್ಣಾಯಕ ಹಂತದಲ್ಲಿ ವಿಕೆಟ್ ಕೈಚೆಲ್ಲಿದ್ದ ಭರತ್ ತಂಡದ ಸೋಲಿಗೆ ಕಾರಣರಾಗಿದ್ದರು. ಹೀಗಾಗಿ 3ನೇ ಟೆಸ್ಟ್​ನಲ್ಲಿ ಭರತ್ ಆಡುವುದು ಭಾಗಶಃ ಅನುಮಾನವಾಗಿದೆ.