IND vs ENG: ಐತಿಹಾಸಿಕ ಪಂದ್ಯದಲ್ಲಿ ಬೇಡದ ದಾಖಲೆ ಬರೆದ ಆರ್ ಅಶ್ವಿನ್
Ravichandran Ashwin: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ಗೆ ಐತಿಹಾಸಿಕ ಪಂದ್ಯವಾಗಿದೆ. ಈ ಪಂದ್ಯದೊಂದಿಗೆ ಲೆಜೆಂಡರಿ ಸ್ಪಿನ್ನರ್ ಅಶ್ವಿನ್ ಟೆಸ್ಟ್ ಮಾದರಿಯಲ್ಲಿ 100 ಪಂದ್ಯಗಳನ್ನಾಡಿದ ದಾಖಲೆ ಬರೆದಿದ್ದಾರೆ. ಆದರೆ ಇದೇ ಪಂದ್ಯದಲ್ಲಿ ಬೇಡದ ದಾಖಲೆಯನ್ನೂ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
1 / 8
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ಗೆ ಐತಿಹಾಸಿಕ ಪಂದ್ಯವಾಗಿದೆ. ಈ ಪಂದ್ಯದೊಂದಿಗೆ ಲೆಜೆಂಡರಿ ಸ್ಪಿನ್ನರ್ ಅಶ್ವಿನ್ ಟೆಸ್ಟ್ ಮಾದರಿಯಲ್ಲಿ 100 ಪಂದ್ಯಗಳನ್ನಾಡಿದ ದಾಖಲೆ ಬರೆದಿದ್ದಾರೆ.
2 / 8
ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ನಲ್ಲಿ ಮ್ಯಾಜಿಕ್ ಮಾಡಿದ್ದ ಅಶ್ವಿನ್ 11.4 ಓವರ್ ಬೌಲ್ ಮಾಡಿ 51 ರನ್ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್ ಕಬಳಿಸಿದ್ದರು. ಈ ಮೂಲಕ ತಂಡದ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದರು.
3 / 8
ಆದರೆ ಬ್ಯಾಟಿಂಗ್ ವೇಳೆ ಈ ಮ್ಯಾಜಿಕ್ ತೊರದ ಅಶ್ವಿನ್ 5 ಎಸೆತಗಳನ್ನು ಎದುರಿಸಿ ಖಾತೆ ತೆರೆಯಲಾಗದೆ ಟಾಮ್ ಹಾರ್ಟ್ಲಿಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ ಮೂರನೇ ಆಟಗಾರನೆಂಬ ಬೇಡದ ದಾಖಲೆಯನ್ನು ಅಶ್ವಿನ್ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
4 / 8
ಇಲ್ಲಿಯವರೆಗೆ, ಒಟ್ಟು 14 ಆಟಗಾರರು ಭಾರತದ ಪರ 100 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆ ಆಟಗಾರರಲ್ಲಿ ಅಶ್ವಿನ್ ಕೂಡ ಒಬ್ಬರು, ಆದರೆ 14 ಆಟಗಾರರ ಪೈಕಿ ಮೂವರು ಆಟಗಾರರು ಮಾತ್ರ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಖಾತೆ ತೆರೆಯದೆ ಡಕ್‌ನಲ್ಲಿ ಔಟಾಗಿದ್ದಾರೆ.
5 / 8
ಅಶ್ವಿನ್ಗೂ ಮೊದಲು ಇಬ್ಬರು ಭಾರತೀಯ ಆಟಗಾರರು ತಮ್ಮ ಶತಕದ ಪಂದ್ಯದಲ್ಲಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದರು. ಅದರಲ್ಲಿ ಒಬ್ಬರು ಚೇತೇಶ್ವರ ಪೂಜಾರ ಆದರೆ, ಇನ್ನೊಬ್ಬರು ದಿಲೀಪ್ ವೆಂಗ್‌ಸರ್ಕರ್.
6 / 8
ಚೇತೇಶ್ವರ ಪೂಜಾರ ಅವರು 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ 100 ನೇ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆಯನ್ನು ತೆರೆಯದೆ ಪೂಜಾರ ಔಟಾಗಿದ್ದರು. ಆದಾಗ್ಯೂ, ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 31 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು.
7 / 8
ಮತ್ತೊಂದೆಡೆ, ದಿಲೀಪ್ ವೆಂಗ್‌ಸರ್ಕರ್ 1988 ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ 100 ನೇ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅದರಲ್ಲಿ ಅವರು ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದರು.
8 / 8
ಭಾರತ ಪರ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅಶ್ವಿನ್ ಈ ಅವಧಿಯಲ್ಲಿ 511 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ನಲ್ಲೂ ಕಮಾಲ್ ಮಾಡಿರುವ ಅಶ್ವಿನ್ 3309 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಹೆಸರಿನಲ್ಲಿ ಐದು ಶತಕಗಳು ಸೇರಿವೆ. ಈ ಸ್ವರೂಪದಲ್ಲಿ 500+ ವಿಕೆಟ್‌ಗಳು ಮತ್ತು 5 ಶತಕಗಳನ್ನು ಗಳಿಸಿದ ವಿಶ್ವದ ಏಕೈಕ ಆಟಗಾರ ನಮ್ಮ ಅಶ್ವಿನ್.