IND vs ENG: ರಾಂಚಿ ಟೆಸ್ಟ್ನಲ್ಲಿ ಅಪರೂಪದ ದಾಖಲೆ ಬರೆದ ರೋಹಿತ್ ಶರ್ಮಾ..!
Rohit Sharma: ರೋಹಿತ್ ಶರ್ಮಾ ರಾಂಚಿ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 55 ರನ್ ಗಳಿಸುವ ಮೂಲಕ ಎರಡು ಸಾಧನೆಗಳನ್ನು ಮಾಡಿದರು. ಅದರಲ್ಲಿ ಮೊದಲನೆಯದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ 4000 ರನ್ ಪೂರ್ಣಗೊಳಿಸಿದರೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9000 ರನ್ ಪೂರೈಸಿದ ಸಾಧನೆ ಮಾಡಿದರು.
1 / 6
ರಾಂಚಿಯಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ನಾಲ್ಕನೇ ದಿನವೇ ಅಂತ್ಯಗೊಂಡಿದೆ. ಇಂಗ್ಲೆಂಡ್ ನೀಡಿದ್ದ 192 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು ಜಯದ ನಗೆಬೀರಿದೆ. ಇದರೊಂದಿಗೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದೆ.
2 / 6
ಇದೇ ವೇಳೆ ಟೀಂ ಇಂಡಿಯಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ನಾಯಕ ರೋಹಿತ್ ಶರ್ಮಾ ಭಾರತದ ನೆಲದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 50 ಕ್ಕೂ ಅಧಿಕ ರನ್ ಕೆಲಹಾಕಿದ 6ನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
3 / 6
ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 81 ಎಸೆತಗಳನ್ನು ಎದುರಿಸಿದ ರೋಹಿತ್, 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ರೋಹಿತ್ ಶರ್ಮಾ ಅವರ ಟೆಸ್ಟ್ ವೃತ್ತಿಜೀವನದಲ್ಲಿ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದು ಇದು ಎರಡನೇ ಬಾರಿ. ಅದೇ ಸಮಯದಲ್ಲಿ ನಾಯಕನಾಗಿ ರೋಹಿತ್ಗೆ ಇದು ಮೊದಲ ಅರ್ಧಶತಕವಾಗಿತ್ತು.
4 / 6
ಇದಕ್ಕೂ ಮೊದಲು 2021ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಟಗಾರನಾಗಿ ಈ ಸಾಧನೆ ಮಾಡಿದ್ದ ರೋಹಿತ್ ಆ ಇನ್ನಿಂಗ್ಸ್‌ನಲ್ಲಿ 52 ರನ್ ಕಲೆಹಾಕಿದ್ದರು. ಇದೀಗ ನಾಯಕನಾಗಿ 55 ರನ್ ಕಲೆಹಾಕಿರುವ ರೋಹಿತ್, ನಾಲ್ಕನೇ ಇನ್ನಿಂಗ್ಸ್‌ನಲ್ಲಿ ತಮ್ಮ ವೈಯಕ್ತಿಕ ಅತ್ಯಧಿಕ ಮೊತ್ತವನ್ನು ದಾಖಲಿಸಿದ ಸಾಧನೆ ಮಾಡಿದ್ದಾರೆ.
5 / 6
ಮೇಲೆ ಹೇಳಿದಂತೆ ರೋಹಿತ್ ಶರ್ಮಾ ಭಾರತದಲ್ಲಿ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 50+ ರನ್ ಗಳಿಸಿದ ಭಾರತದ ಆರನೇ ನಾಯಕ ಎನಿಸಿಕೊಂಡಿದ್ದರೆ, ಅವರಿಗೂ ಮೊದಲು ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಸುನಿಲ್ ಗವಾಸ್ಕರ್ ಮತ್ತು ಮನ್ಸೂರ್ ಅಲಿ ಖಾನ್ ಪಟೌಡಿ ಭಾರತದ ನಾಯಕರಾಗಿ ಈ ಸಾಧನೆ ಮಾಡಿದ್ದಾರೆ. ಇದೀಗ ಈ ಪಟ್ಟಿಗೆ ರೋಹಿತ್ ಕೂಡ ಸೇರಿಕೊಂಡಿದ್ದಾರೆ.
6 / 6
ಇದರೊಂದಿಗೆ ರೋಹಿತ್ ಶರ್ಮಾ ರಾಂಚಿ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 55 ರನ್ ಗಳಿಸುವ ಮೂಲಕ ಎರಡು ಸಾಧನೆಗಳನ್ನು ಮಾಡಿದರು. ಅದರಲ್ಲಿ ಮೊದಲನೆಯದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ 4000 ರನ್ ಪೂರ್ಣಗೊಳಿಸಿದರೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9000 ರನ್ ಪೂರೈಸಿದ್ದಾರೆ.