IND vs ENG: ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ದಾಖಲೆ ಬರೆದ ಭಾರತ..!
IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರತಿದಿನ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಪ್ರತಿ ಪಂದ್ಯದಲ್ಲೂ ಕೆಲವು ದಾಖಲೆಗಳು ನಿರ್ಮಾಣವಾಗುತ್ತವೆ. ಅದರಂತೆ ಧರ್ಮಶಾಲಾದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾದ ಬ್ಯಾಟ್ಸ್ಮನ್ಗಳು ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
1 / 7
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರತಿದಿನ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಪ್ರತಿ ಪಂದ್ಯದಲ್ಲೂ ಕೆಲವು ದಾಖಲೆಗಳು ನಿರ್ಮಾಣವಾಗುತ್ತವೆ. ಅದರಂತೆ ಧರ್ಮಶಾಲಾದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾದ ಬ್ಯಾಟ್ಸ್ಮನ್ಗಳು ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
2 / 7
ಉಭಯ ತಂಡಗಳ ನಡುವೆ ನಡೆಯುತ್ತಿರುವ ಐದನೇ ಟೆಸ್ನ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಟಾಪ್ ಐವರು ಬ್ಯಾಟರ್ಸ್ಗಳು 50ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ಇವರಲ್ಲಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಶತಕ ಸಿಡಿಸಿದ್ದರೆ, ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಮತ್ತು ದೇವದತ್ ಪಡಿಕ್ಕಲ್ ಅರ್ಧಶತಕ ಬಾರಿಸಿದ್ದಾರೆ.
3 / 7
ಈ ಮೂಲಕ ಟೀಂ ಇಂಡಿಯಾದ ಟಾಪ್ ಐವರು ಬ್ಯಾಟರ್ಸ್ಗಳು 50 ಕ್ಕೂ ಅಧಿಕ ರನ್ ಕಲೆಹಾಕಿದ ದಾಖಲೆಯನ್ನು ಮೂರನೇ ಬಾರಿಗೆ ನಿರ್ಮಿಸಿದ್ದಾರೆ. ವಿಶೇಷವೆಂದರೆ ಟೆಸ್ಟ್ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಭಾರತ ಈ ಸಾಧನೆ ಮಾಡಿದೆ.
4 / 7
1998 ರಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದ ಭಾರತ ಕೋಲ್ಕತ್ತಾದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾಗಿ ಬಂದ ವಿವಿಎಸ್ ಲಕ್ಷ್ಮಣ್ 95 ರನ್, ನವಜೋತ್ ಸಿಂಗ್ ಸಿಧು 97 ರನ್, ರಾಹುಲ್ ದ್ರಾವಿಡ್ 86 ರನ್, ಸಚಿನ್ ತೆಂಡೂಲ್ಕರ್ 79 ರನ್, ಆಗಿನ ನಾಯಕ ಮೊಹಮ್ಮದ್ ಅಜರುದ್ದೀನ್ 163 ರನ್ ಗಳ ಪ್ರಬಲ ಇನ್ನಿಂಗ್ಸ್ ಆಡಿದರು. ಇದಾದ ಬಳಿಕ 6ನೇ ಕ್ರಮಾಂಕದಲ್ಲಿ ಆಡಲು ಬಂದ ಸೌರವ್ ಗಂಗೂಲಿ ಕೂಡ 65 ರನ್ ಗಳಿಸಿದ್ದರು. ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 219 ರನ್‌ಗಳಿಂದ ಗೆದ್ದುಕೊಂಡಿತು.
5 / 7
ಇದಾದ ನಂತರ 1999ರಲ್ಲಿ ಮತ್ತೆ ಅದೇ ಸಾಧನೆ ಪುನರಾವರ್ತನೆಯಾಯಿತು. ಈ ಬಾರಿ ಮೊಹಾಲಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಈ ದಾಖಲೆ ಮಾಡಲಾಗಿತ್ತು. ತಂಡದ ಪರ ದೇವಾಂಗ್ ಗಾಂಧಿ 75, ಸಡಗೋಪನ್ ರಮೇಶ್ 73, ರಾಹುಲ್ ದ್ರಾವಿಡ್ 144, ನಾಯಕ ಸಚಿನ್ ತೆಂಡೂಲ್ಕರ್ 126 ಮತ್ತು ಸೌರವ್ ಗಂಗೂಲಿ 64 ರನ್ ಕಲೆಹಾಕಿದ್ದರು. ಆದರೆ, ಈ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.
6 / 7
ಇದಾದ ನಂತರ 2009 ರಲ್ಲಿ ಶ್ರೀಲಂಕಾ ವಿರುದ್ಧ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಮುರಳಿ ವಿಜಯ್ 87 ರನ್, ವೀರೇಂದ್ರ ಸೆಹ್ವಾಗ್ 293 ರನ್, ರಾಹುಲ್ ದ್ರಾವಿಡ್ 74 ರನ್, ಸಚಿನ್ ತೆಂಡೂಲ್ಕರ್ 53 ರನ್ ಮತ್ತು ವಿವಿಎಸ್ ಲಕ್ಷ್ಮಣ್ 62 ರನ್ ಸಿಡಿಸಿದ್ದರು. ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 24 ರನ್‌ಗಳಿಂದ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
7 / 7
ಸುಮಾರು 15 ವರ್ಷಗಳ ನಂತರ ಇದೀಗ ಮತ್ತೆ ಅದೇ ಘಟನೆ ನಡೆದಿದೆ. ಈ ಬಾರಿ ಯಶಸ್ವಿ ಜೈಸ್ವಾಲ್ 57 ರನ್, ರೋಹಿತ್ ಶರ್ಮಾ 103, ಶುಭಮನ್ ಗಿಲ್ 110, ದೇವದತ್ ಪಡಿಕ್ಕಲ್ 65 ಮತ್ತು ಸರ್ಫರಾಜ್ ಖಾನ್ 56 ರನ್‌ಗಳ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಮೇಲೆ ಹೇಳಿದಂತೆ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಭಾರತ ಈ ಸಾಧನೆ ಮಾಡಿದೆ.