IND vs ENG: ಟೆಸ್ಟ್ ಸರಣಿಯಲ್ಲಿ ಅಧಿಕ ರನ್ ಬಾರಿಸಿದ ಟಾಪ್ 5 ಬ್ಯಾಟರ್ಸ್​ಗಳಿವರು

|

Updated on: Mar 10, 2024 | 9:47 PM

IND vs ENG: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಅಂತ್ಯಗೊಂಡಿದೆ. ಈ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಳ್ಳುವಲ್ಲಿ ಆತಿಥೇಯ ಭಾರತ ಯಶಸ್ವಿಯಾಗಿದೆ. ಇನ್ನು ಈ ಸರಣಿಯಲ್ಲಿ ಉಭಯ ತಂಡಗಳ ಕೆಲವು ಆಟಗಾರರು ತಮ್ಮ ಬ್ಯಾಟ್​ನಿಂದ ಅದ್ಭುತ ಪ್ರದರ್ಶನ ನೀಡಿದರು. ಅಂತಹ ಐವರು ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

1 / 6
ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಅಂತ್ಯಗೊಂಡಿದೆ. ಈ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಳ್ಳುವಲ್ಲಿ ಆತಿಥೇಯ ಭಾರತ ಯಶಸ್ವಿಯಾಗಿದೆ. ಇನ್ನು ಈ ಸರಣಿಯಲ್ಲಿ ಉಭಯ ತಂಡಗಳ ಕೆಲವು ಆಟಗಾರರು ತಮ್ಮ ಬ್ಯಾಟ್​ನಿಂದ ಅದ್ಭುತ ಪ್ರದರ್ಶನ ನೀಡಿದರು. ಅಂತಹ ಐವರು ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

2 / 6
ಯಶಸ್ವಿ ಜೈಸ್ವಾಲ್: ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಜೈಸ್ವಾಲ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 5 ಪಂದ್ಯಗಳಲ್ಲಿ 712 ರನ್ ಗಳಿಸಿದ್ದಾರೆ. ಜೈಸ್ವಾಲ್ 3 ಅರ್ಧಶತಕ ಮತ್ತು 2 ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ ಈ ಸರಣಿಯಲ್ಲಿ ಅವರು 26 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

3 / 6
ಶುಭ್‌ಮನ್ ಗಿಲ್: ಭಾರತ ತಂಡದ ಅದ್ಭುತ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಹೆಸರು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಸರಣಿಯಲ್ಲಿ 5 ಪಂದ್ಯಗಳನ್ನು ಆಡಿದ ಗಿಲ್ 452 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ 2 ಶತಕ ಮತ್ತು 2 ಅರ್ಧ ಶತಕಗಳು ಸಿಡಿದಿವೆ.

4 / 6
ಜ್ಯಾಕ್ ಕ್ರಾಲಿ: 400ರ ಗಡಿ ದಾಟಿದ ಇಂಗ್ಲೆಂಡ್‌ನ ಏಕೈಕ ಬ್ಯಾಟ್ಸ್‌ಮನ್ ಜಾಕ್ ಕ್ರಾಲಿ. ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಜಾಕ್ ಕ್ರಾಲಿ ಬಹುತೇಕ ಪ್ರತಿ ಬಾರಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಕ್ರಾಲಿ 5 ಪಂದ್ಯಗಳಲ್ಲಿ 4 ಅರ್ಧಶತಕಗಳ ಸಹಾಯದಿಂದ 407 ರನ್ ಗಳಿಸಿದರು.

5 / 6
ರೋಹಿತ್ ಶರ್ಮಾ: ಈ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಸೇರಿದ್ದಾರೆ. ರೋಹಿತ್ ಶರ್ಮಾ ಆಡಿದ 5 ಪಂದ್ಯಗಳಲ್ಲಿ ಒಟ್ಟು 400 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು ತಮ್ಮ ಬ್ಯಾಟ್‌ನಿಂದ 2 ಶತಕ ಮತ್ತು 1 ಅರ್ಧಶತಕವನ್ನೂ ಬಾರಿಸಿದ್ದರು.

6 / 6
ಬೆನ್ ಡಕೆಟ್: ಇಂಗ್ಲೆಂಡ್ ತಂಡದ ಈ ಆರಂಭಿಕ ಆಟಗಾರ ಸರಣಿಯಲ್ಲಿ ಶತಕವನ್ನೂ ಸಿಡಿಸಿದರು. ಆದರೆ ನಂತರ ಅವರ ಬ್ಯಾಟ್​ನಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ. ಬೆನ್ ಡಕೆಟ್ 5 ಪಂದ್ಯಗಳನ್ನು ಆಡಿ 343 ರನ್ ಗಳಿಸಿದರು. ಒಮ್ಮೆ ಮಾತ್ರ 153 ರನ್‌ಗಳ ಇನ್ನಿಂಗ್ಸ್‌ ಆಡಿದ ಅವರು ಆ ನಂತರ ಒಮ್ಮೆಯೂ 50ರನ್​ಗಳ ಗಡಿ ದಾಟಲಿಲ್ಲ.