IND vs NZ: ಟೀಂ ಇಂಡಿಯಾಗೆ ಕನ್ನಡಿಗನೇ ವಿಲನ್; ದಾಖಲೆಯ ಶತಕ ಸಿಡಿಸಿದ ರಚಿನ್ ರವೀಂದ್ರ
Rachin Ravindra: ಬೆಂಗಳೂರು ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಅವರ ಟೆಸ್ಟ್ ವೃತ್ತಿಜೀವನದ ಎರಡನೇ ಮತ್ತು ಭಾರತದ ವಿರುದ್ಧದ ಮೊದಲ ಶತಕವಾಗಿದೆ. ರಚಿನ್ 123 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು.
1 / 6
ಬೆಂಗಳೂರಿನಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಯುವ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಇದು ರಚಿನ್ ರವೀಂದ್ರ ಅವರ ಟೆಸ್ಟ್ ವೃತ್ತಿಜೀವನದ ಎರಡನೇ ಶತಕವಾಗಿದ್ದು ನ್ಯೂಜಿಲೆಂಡ್ ಪರ ಇತಿಹಾಸ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
2 / 6
ರಚಿನ್ ಕೇವಲ 123 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು. ರಚಿನ್ ರವೀಂದ್ರ ಅವರ ಶತಕದಿಂದ ನ್ಯೂಜಿಲೆಂಡ್ ತಂಡ ಬೆಂಗಳೂರು ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಿದೆ. ಇದಲ್ಲದೆ 8ನೇ ವಿಕೆಟ್ಗೆ ಟಿಮ್ ಸೌಥಿ ಅವರೊಂದಿಗೆ ರಚಿನ್ ಅಜೇಯ ಅರ್ಧಶತಕದ ಜೊತೆಯಾವನ್ನು ನಡೆಸಿದ್ದಾರೆ.
3 / 6
24 ವರ್ಷದ ರಚಿನ್ ರವೀಂದ್ರ ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಮೊದಲ ಶತಕ ದಾಖಲಿಸಿ, ದಾಖಲೆಯ 240 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಬೆಂಗಳೂರಿನಲ್ಲಿ ಸಿಡಿಸಿದ ಟೆಸ್ಟ್ ಶತಕವು ರಚಿನ್ ರವೀಂದ್ರ ಅವರ ಭಾರತದ ವಿರುದ್ಧ ಮಾತ್ರವಲ್ಲದೆ ತವರಿನಿಂದ ಹೊರಗೆ ದಾಖಲಾದ ಮೊದಲ ಶತಕವಾಗಿದೆ.
4 / 6
ಹಾಗೆಯೇ ಭಾರತದ ನೆಲದಲ್ಲಿ ದಶಕದ ನಂತರ ಶತಕ ಸಿಡಿಸಿದ ನ್ಯೂಜಿಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ರಚಿನ್ ಬರೆದಿದ್ದಾರೆ. ವಾಸ್ತವವಾಗಿ ಕಳೆದ ದಶಕದಲ್ಲಿ ಭಾರತದ ನೆಲದಲ್ಲಿ ನ್ಯೂಜಿಲೆಂಡ್ ತಂಡದ ಯಾವುದೇ ಆಟಗಾರನಿಗೆ ಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೀಗ ರಚಿನ್ ರವೀಂದ್ರ ಈ ಸಾಧನೆ ಮಾಡಿದ್ದಾರೆ.
5 / 6
ಕಿವೀಸ್ ತಂಡದ ಶ್ರೇಷ್ಠ ಬ್ಯಾಟ್ಸ್‌ಮನ್ ರಾಸ್ ಟೇಲರ್ ನಂತರ ರಚಿನ್ ರವೀಂದ್ರ 12 ವರ್ಷಗಳ ನಂತರ ಭಾರತದಲ್ಲಿ ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. 2012ರಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ಆಟಗಾರ ಭಾರತದಲ್ಲಿ ಶತಕ ಬಾರಿಸಿದ್ದರು.
6 / 6
ರಾಸ್ ಟೇಲರ್ 2012 ರಲ್ಲಿ ಇದೇ ಬೆಂಗಳೂರಿನಲ್ಲಿ 113 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ 12 ವರ್ಷಗಳ ನಂತರ ರಚಿನ್ ರವೀಂದ್ರ ಶತಕ ಬಾರಿಸಿದ್ದಾರೆ. 88 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು 50ರಿಂದ 100 ರನ್ ಗಳಿಸಲು ಕೇವಲ 36 ಎಸೆತಗಳನ್ನು ತೆಗೆದುಕೊಂಡರು. ರಚಿನ್ ಅವರ ಈ ಇನ್ನಿಂಗ್ಸ್ನಿಂದಾಗಿ ನ್ಯೂಜಿಲೆಂಡ್ ತಂಡ ಮೂರನೇ ದಿನದಾಟದ ಭೋಜನ ವಿರಾಮದ ಹೊತ್ತಿಗೆ 7 ವಿಕೆಟ್ ನಷ್ಟಕ್ಕೆ 345 ರನ್ ಗಳಿಸಿದೆ.
Published On - 11:46 am, Fri, 18 October 24