IND vs NZ: ಪುಣೆ ಟೆಸ್ಟ್​ನಿಂದ ರಾಹುಲ್​ಗೆ ಗೇಟ್​ಪಾಸ್? ಗಂಭೀರ್ ಒಲವು ಯಾರ ಪರ?

|

Updated on: Oct 23, 2024 | 4:33 PM

IND vs NZ: ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಸಾಮಾಜಿಕ ಜಾಲತಾಣಗಳಲ್ಲಿ ಏನೇನು ನಡೆಯುತ್ತಿದೆ ಎಂಬುದು ಮುಖ್ಯವಲ್ಲ. ತಂಡದ ನಿರ್ವಹಣೆ ಏನು ಯೋಚಿಸುತ್ತದೆ ಎಂಬುದು ಮುಖ್ಯ. ಕೆಎಲ್ ರಾಹುಲ್ ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್‌ನಲ್ಲಿ ಕಠಿಣ ಪಿಚ್‌ನಲ್ಲಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡಿ 68 ರನ್ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು ಎಂದಿದ್ದಾರೆ.

1 / 6
ಕನ್ನಡಿಗ ಕೆಎಲ್ ರಾಹುಲ್ ಅತ್ಯಂತ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಆದರೆ ಕಳೆದ ಕೆಲವು ದಿನಗಳಿಂದ ರಾಹುಲ್ ಅವರ ಬ್ಯಾಟ್ ಮೌನಕ್ಕೆ ಶರಣಾಗಿದೆ. ಅಲ್ಲದೆ ಅವಶ್ಯಕ ಸಮಯದಲ್ಲಿ ರಾಹುಲ್ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಎಡವುತ್ತಿದ್ದಾರೆ. ಕಳೆದ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಇದೇ ಸಮಸ್ಯೆಗೆ ಸಿಲುಕಿದ್ದ ರಾಹುಲ್, ಇದೀಗ ನ್ಯೂಜಿಲೆಂಡ್ ವಿರುದ್ಧವೂ ಲಯ ಕಂಡುಕೊಳ್ಳುವಲ್ಲಿ ಎಡವುತ್ತಿದ್ದಾರೆ.

2 / 6
ಹೀಗಾಗಿ ರಾಹುಲ್​​ರನ್ನು ತಂಡದಿಂದ ಕೈಬಿಡಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಇದಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ರಾಹುಲ್​ಗೆ ಅವಕಾಶ ನೀಡುತ್ತಿರುವ ಬಗ್ಗೆ ವ್ಯಂಗ್ಯ ಮಾಡಲಾಗುತ್ತಿದೆ. ಅಲ್ಲದೆ ರಾಹುಲ್​ಗೆ ಅವಕಾಶ ನೀಡುವ ಸಲುವಾಗಿ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸರ್ಫರಾಜ್ ಖಾನ್ ಅವರನ್ನು ಪುಣೆ ಟೆಸ್ಟ್‌ನ ಪ್ಲೇಯಿಂಗ್ ಹನ್ನೊಂದರಿಂದ ಕೈಬಿಡಬಹುದು ಎಂಬ ವರದಿಗಳಿವೆ. ಇದೀಗ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

3 / 6
ಈ ಬಗ್ಗೆ ಮಾತನಾಡಿರುವ ಗಂಭೀರ್, ಕಳಪೆ ಫಾರ್ಮ್‌ನಲ್ಲಿರುವ ಕೆಎಲ್ ರಾಹುಲ್ ಅವರನ್ನು ಬೆಂಬಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುವ ಟೀಕೆಗಿಂತ ಟೀಮ್ ಮ್ಯಾನೇಜ್‌ಮೆಂಟ್‌ನ ಅಭಿಪ್ರಾಯವೇ ಮುಖ್ಯ ಎಂದು ಗಂಭೀರ್ ಹೇಳಿದ್ದಾರೆ.

4 / 6
ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಸಾಮಾಜಿಕ ಜಾಲತಾಣಗಳಲ್ಲಿ ಏನೇನು ನಡೆಯುತ್ತಿದೆ ಎಂಬುದು ಮುಖ್ಯವಲ್ಲ. ತಂಡದ ನಿರ್ವಹಣೆ ಏನು ಯೋಚಿಸುತ್ತದೆ ಎಂಬುದು ಮುಖ್ಯ. ಕೆಎಲ್ ರಾಹುಲ್ ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್‌ನಲ್ಲಿ ಕಠಿಣ ಪಿಚ್‌ನಲ್ಲಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡಿ  68 ರನ್ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು.

5 / 6
ರಾಹುಲ್ ದೊಡ್ಡ ಸ್ಕೋರ್ ಮಾಡುವ ಸಾಮರ್ಥ್ಯವಿದೆ. ಅಲ್ಲದೆ ನಾನೊಂದು ಬಿಗ್ ಇನ್ನಿಂಗ್ಸ್ ಆಡಬೇಕು ಎಂಬುದು ಸಹ ರಾಹುಲ್ ಅವರಿಗೆ ತಿಳಿದಿದೆ. ಅಲ್ಲದೆ ರಾಹುಲ್​ಗೆ ಬಿಗ್ ಇನ್ನಿಂಗ್ಸ್ ಆಡುವ ಸಾಮರ್ಥ್ಯವಿದೆ ಎಂದು ನನಗೆ ಖಚಿತವಾಗಿದೆ. ಹೀಗಾಗಿ ರಾಹುಲ್​ಗೆ ತಂಡದ ಬೆಂಬಲವಿದೆ ಎಂದು ಗಂಭೀರ್ ಹೇಳಿದ್ದಾರೆ.

6 / 6
ಗಂಭೀರ್ ಈ ರೀತಿಯಾಗಿ ಹೇಳಿದ್ದನ್ನು ಗಮನಿಸಿದರೆ, ರಾಹುಲ್​ಗೆ ಪುಣೆ ಟೆಸ್ಟ್​ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಸಮಸ್ಯೆಯೆಂದರೆ ಉತ್ತಮ ಫಾರ್ಮ್​ನಲ್ಲಿರುವ ಶುಭ್​ಮನ್ ಗಿಲ್ ಕೂಡ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಗಿಲ್ ಅವರಿಗೆ ಅವಕಾಶ ನೀಡಬೇಕೆಂದರೆ ತಂಡದಿಂದ ಒಬ್ಬರನ್ನು ಕೈಬಿಡಬೇಕಾಗಿದೆ. ಆದ್ದರಿಂದ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.