- Kannada News Photo gallery Cricket photos IPL 2025: Mayank Yadav is likely to get 14 Crores from LSG
IPL 2025: ಮಯಾಂಕ್ ಯಾದವ್ಗೆ ಬರೋಬ್ಬರಿ 14 ಕೋಟಿ ರೂ.
IPL 2025 Mayank Yadav: ಮಯಾಂಕ್ ಯಾದವ್ ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕೇವಲ 4 ಪಂದ್ಯಗಳನ್ನು ಮಾತ್ರ ಆಡಿದ್ದರು. ಈ ವೇಳೆ 150 ಕಿ.ಮೀ ಅಸುಪಾಸಿನಲ್ಲಿ ಚೆಂಡೆಸೆದಿದ್ದ ಮಯಾಂಕ್ 73 ಎಸೆತಗಳಲ್ಲಿ ಕೇವಲ 85 ರನ್ ನೀಡಿ ಒಟ್ಟು 7 ವಿಕೆಟ್ ಕಬಳಿಸಿದ್ದರು.
Updated on: Oct 23, 2024 | 1:04 PM

IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಯುವ ವೇಗಿ ಮಯಾಂಕ್ ಯಾದವ್ ಅವರನ್ನು ರಿಟೈನ್ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ. ಅದು ಕೂಡ ಬರೋಬ್ಬರಿ 14 ಕೋಟಿ ರೂ. ನೀಡುವ ಮೂಲಕ..!

ಹೌದು, ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಸ್ಪೀಡ್ ಸ್ಟರ್ ಮಯಾಂಕ್ರನ್ನು ಎರಡನೇ ಆಯ್ಕೆಯಾಗಿ ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ಅದರಂತೆ ಯುವ ವೇಗಿಗೆ 14 ಕೋಟಿ ರೂ. ಪಾವತಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೂ ಮುನ್ನ ಅವರನ್ನು ಅನ್ಕ್ಯಾಪ್ಡ್ ಪಟ್ಟಿಯಲ್ಲಿ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಯ ಮೂಲಕ ಮಯಾಂಕ್ ಯಾದವ್ ಟೀಮ್ ಇಂಡಿಯಾ ಪರ ಪಾದರ್ಪಣೆ ಮಾಡಿದ್ದಾರೆ. ಹೀಗಾಗಿ ಅವರ ಕನಿಷ್ಠ ರಿಟೈನ್ ಮೊತ್ತವು 11 ಕೋಟಿ ರೂ.ಗೆ ಏರಿಕೆಯಾಗಿದೆ.

ಅದರಂತೆ ಇದೀಗ ರಾಷ್ಟ್ರೀಯ ತಂಡದ ಆಟಗಾರನಾಗಿ ಆಯ್ಕೆಯಾಗಿರುವ ಮಯಾಂಕ್ ಯಾದವ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ನಿರ್ಧರಿಸಿದ್ದು, ಇದಕ್ಕಾಗಿ 14 ಕೋಟಿ ರೂ. ಪಾವತಿಸಲಿದೆ ಎಂದು ಎಲ್ಎಸ್ಜಿ ಫ್ರಾಂಚೈಸಿ ಮೂಲಗಳು ತಿಳಿಸಿವೆ.

ಮಯಾಂಕ್ ಯಾದವ್ ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕೇವಲ 4 ಪಂದ್ಯಗಳನ್ನು ಮಾತ್ರ ಆಡಿದ್ದರು. ಈ ವೇಳೆ 150 ಕಿ.ಮೀ ಅಸುಪಾಸಿನಲ್ಲಿ ಚೆಂಡೆಸೆದಿದ್ದ ಮಯಾಂಕ್ 73 ಎಸೆತಗಳಲ್ಲಿ ಕೇವಲ 85 ರನ್ ನೀಡಿ ಒಟ್ಟು 7 ವಿಕೆಟ್ ಕಬಳಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಯುವ ವೇಗಿಯನ್ನು ರಿಟೈನ್ ಮಾಡಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮುಂದಾಗಿದೆ.

ಇನ್ನು ಮಯಾಂಕ್ ಯಾದವ್ ಅವರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಸ್ಪೋಟಕ ದಾಂಡಿಗ ನಿಕೋಲಸ್ ಪೂರನ್ ಹಾಗೂ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಸಹ ರಿಟೈನ್ ಮಾಡಿಕೊಳ್ಳುವುದು ಕೂಡ ಬಹುತೇಕ ಖಚಿತವಾಗಿದೆ. ಹೀಗಾಗಿ ಪೂರನ್ ಸಹ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನಬಹುದು.
