AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಮಯಾಂಕ್ ಯಾದವ್​​ಗೆ ಬರೋಬ್ಬರಿ 14 ಕೋಟಿ ರೂ.

IPL 2025 Mayank Yadav: ಮಯಾಂಕ್ ಯಾದವ್ ಕಳೆದ ಸೀಸನ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕೇವಲ 4 ಪಂದ್ಯಗಳನ್ನು ಮಾತ್ರ ಆಡಿದ್ದರು. ಈ ವೇಳೆ 150 ಕಿ.ಮೀ ಅಸುಪಾಸಿನಲ್ಲಿ ಚೆಂಡೆಸೆದಿದ್ದ ಮಯಾಂಕ್ 73 ಎಸೆತಗಳಲ್ಲಿ ಕೇವಲ 85 ರನ್ ನೀಡಿ ಒಟ್ಟು 7 ವಿಕೆಟ್​ ಕಬಳಿಸಿದ್ದರು.

ಝಾಹಿರ್ ಯೂಸುಫ್
|

Updated on: Oct 23, 2024 | 1:04 PM

Share
IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಯುವ ವೇಗಿ ಮಯಾಂಕ್ ಯಾದವ್ ಅವರನ್ನು ರಿಟೈನ್ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ. ಅದು ಕೂಡ ಬರೋಬ್ಬರಿ 14 ಕೋಟಿ ರೂ. ನೀಡುವ ಮೂಲಕ..!

1 / 6
ಹೌದು, ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಸ್ಪೀಡ್ ಸ್ಟರ್ ಮಯಾಂಕ್​ರನ್ನು ಎರಡನೇ ಆಯ್ಕೆಯಾಗಿ ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ಅದರಂತೆ ಯುವ ವೇಗಿಗೆ 14 ಕೋಟಿ ರೂ. ಪಾವತಿಸಲಿದ್ದಾರೆ ಎಂದು ತಿಳಿದು ಬಂದಿದೆ.

2 / 6
ಇದಕ್ಕೂ ಮುನ್ನ ಅವರನ್ನು ಅನ್​ಕ್ಯಾಪ್ಡ್ ಪಟ್ಟಿಯಲ್ಲಿ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಯ ಮೂಲಕ ಮಯಾಂಕ್ ಯಾದವ್ ಟೀಮ್ ಇಂಡಿಯಾ ಪರ ಪಾದರ್ಪಣೆ ಮಾಡಿದ್ದಾರೆ. ಹೀಗಾಗಿ ಅವರ ಕನಿಷ್ಠ ರಿಟೈನ್ ಮೊತ್ತವು 11 ಕೋಟಿ ರೂ.ಗೆ ಏರಿಕೆಯಾಗಿದೆ.

3 / 6
ಅದರಂತೆ ಇದೀಗ ರಾಷ್ಟ್ರೀಯ ತಂಡದ ಆಟಗಾರನಾಗಿ ಆಯ್ಕೆಯಾಗಿರುವ ಮಯಾಂಕ್ ಯಾದವ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ನಿರ್ಧರಿಸಿದ್ದು, ಇದಕ್ಕಾಗಿ 14 ಕೋಟಿ ರೂ. ಪಾವತಿಸಲಿದೆ ಎಂದು ಎಲ್​ಎಸ್​ಜಿ ಫ್ರಾಂಚೈಸಿ ಮೂಲಗಳು ತಿಳಿಸಿವೆ.

4 / 6
ಮಯಾಂಕ್ ಯಾದವ್ ಕಳೆದ ಸೀಸನ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕೇವಲ 4 ಪಂದ್ಯಗಳನ್ನು ಮಾತ್ರ ಆಡಿದ್ದರು. ಈ ವೇಳೆ 150 ಕಿ.ಮೀ ಅಸುಪಾಸಿನಲ್ಲಿ ಚೆಂಡೆಸೆದಿದ್ದ ಮಯಾಂಕ್ 73 ಎಸೆತಗಳಲ್ಲಿ ಕೇವಲ 85 ರನ್ ನೀಡಿ ಒಟ್ಟು 7 ವಿಕೆಟ್​ ಕಬಳಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಯುವ ವೇಗಿಯನ್ನು ರಿಟೈನ್ ಮಾಡಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮುಂದಾಗಿದೆ.

5 / 6
ಇನ್ನು ಮಯಾಂಕ್ ಯಾದವ್ ಅವರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಸ್ಪೋಟಕ ದಾಂಡಿಗ ನಿಕೋಲಸ್ ಪೂರನ್ ಹಾಗೂ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಸಹ ರಿಟೈನ್ ಮಾಡಿಕೊಳ್ಳುವುದು ಕೂಡ ಬಹುತೇಕ ಖಚಿತವಾಗಿದೆ. ಹೀಗಾಗಿ ಪೂರನ್ ಸಹ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನಬಹುದು.

6 / 6