GAM vs ZIM: ಅತಿ ವೇಗದ ಟಿ20 ಶತಕ; ರೋಹಿತ್ ದಾಖಲೆ ಮುರಿದ ಸಿಕಂದರ್ ರಾಝಾ
Sikandar Raza: ಜಿಂಬಾಬ್ವೆಯ ಆಲ್ ರೌಂಡರ್ ಸಿಕಂದರ್ ರಜಾ ಮತ್ತೊಮ್ಮೆ ತಮ್ಮ ಬಿರುಸಿನ ಬ್ಯಾಟಿಂಗ್‌ನ ಆಧಾರದ ಮೇಲೆ ಅನೇಕ ದಾಖಲೆಗಳನ್ನು ಮುರಿದಿದ್ದಾರೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಆಫ್ರಿಕಾ ಕ್ವಾಲಿಫೈಯರ್ ಪಂದ್ಯದಲ್ಲಿ ಗ್ಯಾಂಬಿಯಾ ವಿರುದ್ಧ ಸಿಕಂದರ್ ರಾಝಾ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ್ದರು. ರಾಝಾ ಈ ಶತಕದ ಮೂಲಕ ದೊಡ್ಡ ದಾಖಲೆ ಬರೆದಿದ್ದು, ಐಸಿಸಿ ಪೂರ್ಣ ಸದಸ್ಯ ತಂಡಗಳ ಪೈಕಿ ಅತಿ ವೇಗದ ಟಿ20 ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.