ಅವಮಾನ… ಟೆಸ್ಟ್ ಇತಿಹಾಸದಲ್ಲೇ ಅವಮಾನಕರ ಸೋಲುಂಡ ಟೀಮ್ ಇಂಡಿಯಾ
India vs New Zealand, 3rd Test: ಭಾರತದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಝಿಲೆಂಡ್ 3-0 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ 8 ವಿಕೆಟ್ಗಳ ಜಯ ಸಾಧಿಸಿದ್ದ ನ್ಯೂಝಿಲೆಂಡ್, 2ನೇ ಪಂದ್ಯವನ್ನು 113 ರನ್ಗಳಿಂದ ಗೆದ್ದುಕೊಂಡಿತ್ತು. ಇದೀಗ 3ನೇ ಪಂದ್ಯದಲ್ಲಿ 25 ರನ್ಗಳ ರೋಚಕ ಜಯ ಸಾಧಿಸಿದೆ.
1 / 5
ಭಾರತ ತಂಡವು ಟೆಸ್ಟ್ ಕ್ರಿಕೆಟ್ ಆಡಲು ಶುರುವಾಗಿ ಬರೋಬ್ಬರಿ 92 ವರ್ಷಗಳು ಕಳೆದಿವೆ. ಆದರೆ ತವರಿನಲ್ಲಿ ಒಮ್ಮೆಯೂ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಸೋತಿರಲಿಲ್ಲ. ಆದರೆ ಈ ಬಾರಿ ಭಾರತ ತಂಡವನ್ನು ತವರಿನಲ್ಲಿ ಬಗ್ಗು ಬಡಿದು ನ್ಯೂಝಿಲೆಂಡ್ ಹೊಸ ಇತಿಹಾಸ ರಚಿಸಿದೆ.
2 / 5
ಈ ಮೂಲಕ ಭಾರತ ತಂಡವನ್ನು ತವರಿನಲ್ಲಿ 3-0 ಅಂತರದಿಂದ ಸೋಲಿಸಿದ ಮೊದಲ ತಂಡವೆಂಬ ವಿಶೇಷ ದಾಖಲೆಯೊಂದನ್ನು ನ್ಯೂಝಿಲೆಂಡ್ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ 1958 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡವು 3-0 ಅಂತರದಿಂದ ಸರಣಿ ಸೋತಿದ್ದರೂ, ಅದು 5 ಪಂದ್ಯಗಳ ಸರಣಿಯಾಗಿತ್ತು. ಅಲ್ಲದೆ ಆ ಸರಣಿಯ ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು.
3 / 5
ಆದರೆ ಇದೇ ಮೊದಲ ಬಾರಿಗೆ ಭಾರತ ತಂಡವು ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕಳೆದುಕೊಂಡಿದೆ. ಈ ಮೂಲಕ 92 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ ಅವಮಾನಕರ ಸೋಲಿಗೆ ಕೊರೊಳೊಡ್ಡಿದೆ. ಅಷ್ಟೇ ಅಲ್ಲದೆ 24 ವರ್ಷಗಳ ಬಳಿಕ ತವರಿನಲ್ಲಿ ವೈಟ್ ವಾಶ್ ಆಗಿದೆ.
4 / 5
ಭಾರತ ತಂಡವು ತವರಿನಲ್ಲಿ ಕೊನೆಯ ಬಾರಿ ವೈಟ್ ವಾಶ್ ಸೋಲು ಎದುರಿಸಿದ್ದು 2000 ರಲ್ಲಿ. ಅಂದು ಸೌತ್ ಆಫ್ರಿಕಾ ತಂಡವು ಭಾರತವನ್ನು 2-0 ಅಂತರದಿಂದ ಮಣಿಸಿ ಇತಿಹಾಸ ಬರೆದಿತ್ತು. ಇದೀಗ 24 ವರ್ಷಗಳ ಬಳಿಕ ಕಿವೀಸ್ ಪಡೆ ಭಾರತ ತಂಡಕ್ಕೆ ಮತ್ತೆ ವೈಟ್ ವಾಶ್ ಸೋಲಿನ ರುಚಿ ತೋರಿಸಿದೆ.
5 / 5
ಇದೀಗ ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿಯೇ ಅವಮಾನಕರ ರೀತಿಯಲ್ಲಿ ಸೋಲುಂಡಿರುವ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಸಜ್ಜಾಗಬೇಕಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದ್ದು, ಈ ಸರಣಿಯ ಮೂಲಕ ಟೀಮ್ ಇಂಡಿಯಾ ಕಂಬ್ಯಾಕ್ ಮಾಡಲಿದೆಯಾ ಕಾದು ನೋಡಬೇಕಿದೆ.