Virat Kohli Records: ಕಿವೀಸ್ ವಿರುದ್ಧ 95 ರನ್ ಸಿಡಿಸಿ ಹಲವು ದಾಖಲೆ ಮುರಿದ ವಿರಾಟ್ ಕೊಹ್ಲಿ..!
Virat Kohli Records, World Cup 2023: ಕಿವೀಸ್ ವಿರುದ್ಧ 95 ರನ್ ಸಿಡಿಸಿದ ವಿರಾಟ್, ಏಕದಿನ, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಒಳಗೊಂಡಿಂತೆ ಎಲ್ಲಾ ಐಸಿಸಿ ವೈಟ್-ಬಾಲ್ ಪಂದ್ಯಾವಳಿಗಳಲ್ಲಿ 3,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎನಿಉಸಿಕೊಂಡಿದ್ದಾರೆ.
1 / 9
ವಿರಾಟ್ ಕೊಹ್ಲಿ ಸಿಡಿಸಿದ 95 ರನ್‌ಗಳ ಏಕಾಂಗಿ ಹೋರಾಟದ ಇನ್ನಿಂಗ್ಸ್ ನೆರವಿನಿಂದಾಗಿ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್‌ಗಳ ಐತಿಹಾಸಿಕ ಗೆಲುವು ದಾಖಲಿಸಿದೆ.
2 / 9
ಕೇವಲ 5 ರನ್ಗಳಿಂದ ಶತಕ ವಂಚಿತರಾದ ಕೊಹ್ಲಿ, ಇದರೊಂದಿಗೆ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಅಂತರಾಷ್ಟ್ರೀಯ ಶತಕಗಳ ದಾಖಲೆಯನ್ನು ಸರಿಗಟ್ಟುವ ಅವಕಾಶವನ್ನು ಕಳೆದುಕೊಂಡರು.
3 / 9
ಕಿವೀಸ್ ವಿರುದ್ಧ 95 ರನ್ ಸಿಡಿಸಿದ ವಿರಾಟ್, ಏಕದಿನ, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಒಳಗೊಂಡಿಂತೆ ಎಲ್ಲಾ ಐಸಿಸಿ ವೈಟ್-ಬಾಲ್ ಪಂದ್ಯಾವಳಿಗಳಲ್ಲಿ 3,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎನಿಉಸಿಕೊಂಡಿದ್ದಾರೆ.
4 / 9
ಹಾಗೆಯೇ 31 ವಿಶ್ವಕಪ್ ಪಂದ್ಯಗಳಲ್ಲಿ 55.36 ರ ಸರಾಸರಿಯಲ್ಲಿ 1,384 ರನ್ ಸಿಡಿಸಿರುವ ಕೊಹ್ಲಿ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ಭಾರತದ ಎರಡನೇ ಆಟಗಾರನೆಂಬ ದಾಖಲೆ ಬರೆದಿದ್ದಾರೆ.
5 / 9
ಇದಲ್ಲದೆ ಕೊಹ್ಲಿ, ಶ್ರೀಲಂಕಾದ ಲೆಜೆಂಡರಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರನ್ನು (13,430 ರನ್ ಗಳಿಸಿ) ಹಿಂದಿಕ್ಕಿ ಏಕದಿನದಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
6 / 9
ಏಕದಿನ ವೃತ್ತಿಜೀವನದಲ್ಲಿ 286 ಪಂದ್ಯಗಳನ್ನಾಡಿರುವ ಕೊಹ್ಲಿ 93.69 ಸ್ಟ್ರೈಕ್ ರೇಟ್‌ನೊಂದಿಗೆ 13,437 ರನ್ ಗಳಿಸಿದ್ದಾರೆ. ಇದರಲ್ಲಿ 48 ಶತಕಗಳು ಮತ್ತು 69 ಅರ್ಧ ಶತಕಗಳು ಸೇರಿವೆ. ಈ ಮಾದರಿಯಲ್ಲಿ 183 ಅವರ ಗರಿಷ್ಠ ಸ್ಕೋರ್ ಆಗಿದೆ.
7 / 9
ಏಕದಿನದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರು 18,426 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಅವರ ಹೆಸರಿನಲ್ಲಿ ದಾಖಲೆಯ 49 ಶತಕಗಳು ಸೇರಿವೆ.
8 / 9
ಹಾಗೆಯೇ ಕೊಹ್ಲಿ ವಿಶ್ವಕಪ್ ಇತಿಹಾಸದಲ್ಲಿ ಜಂಟಿ ಎರಡನೇ ಅತಿ ಹೆಚ್ಚು 50+ (12) ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
9 / 9
ಈ ಮೂಲಕ ಕೊಹ್ಲಿ, 11 ಬಾರಿ 50ಕ್ಕೂ ಅಧಿಕ ರನ್ ಸಿಡಿಸಿದ ರಿಕಿ ಪಾಂಟಿಂಗ್ ಮತ್ತು ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರೆ, ಕುಮಾರ ಸಂಗಕ್ಕಾರ ಮತ್ತು ಶಾಕಿಬ್ ಅಲ್ ಹಸನ್ ಅವರನ್ನು ಸರಿಗಟ್ಟಿದರು. 21 ಬಾರಿ 50ಕ್ಕೂ ಅಧಿಕ ರನ್ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.