IND vs NZ: ವಿಶ್ವಕಪ್​ನಲ್ಲಿ ಕಪಿಲ್ ದೇವ್ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ..!

Jasprit Bumrah, ICC World Cup 2023: ಈ ಪಂದ್ಯದಲ್ಲಿ ಮಾರ್ಕ್ ಚಾಪ್‌ಮನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ ಬುಮ್ರಾ ಏಕದಿನ ವಿಶ್ವಕಪ್‌ನಲ್ಲಿ ಲೆಜೆಂಡರಿ ಆಲ್‌ರೌಂಡರ್ ಮತ್ತು ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರ 28 ವಿಕೆಟ್‌ಗಳ ದಾಖಲೆಯನ್ನು ಮುರಿದರು.

ಪೃಥ್ವಿಶಂಕರ
|

Updated on: Oct 23, 2023 | 9:44 AM

ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ 20 ವರ್ಷಗಳ ಗೆಲುವಿನ ಬರವನ್ನು ನೀಗಿಸಿಕೊಂಡಿದೆ.

1 / 9
ಈ ಪಂದ್ಯದಲ್ಲಿ ಮಾರ್ಕ್ ಚಾಪ್‌ಮನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ ಬುಮ್ರಾ ಏಕದಿನ ವಿಶ್ವಕಪ್‌ನಲ್ಲಿ ಲೆಜೆಂಡರಿ ಆಲ್‌ರೌಂಡರ್ ಮತ್ತು ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರ 28 ವಿಕೆಟ್‌ಗಳ ದಾಖಲೆಯನ್ನು ಮುರಿದರು.

2 / 9
1983 ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ಭಾರತದ ಪರ ನಾಲ್ಕು ವಿಶ್ವಕಪ್​ ಆವೃತ್ತಿಗಳಲ್ಲಿ ಒಟ್ಟು 26 ಪಂದ್ಯಗಳಲ್ಲಿ ಆಡಿ 28 ವಿಕೆಟ್​ಗಳನ್ನು ಪಡೆದಿದ್ದರು.

3 / 9
ಆದರೆ ಕೇವಲ 14 ಪಂದ್ಯಗಳನ್ನಾಡಿರುವ ಬುಮ್ರಾ ಅವರ ಹೆಸರಿನಲ್ಲಿ ಇದೀಗ 29 ವಿಕೆಟ್​ಗಳು ದಾಖಲಾಗಿವೆ.

4 / 9
ಈ ಮೂಲಕ ಬುಮ್ರಾ ಏಕದಿನ ವಿಶ್ವಕಪ್​ನಲ್ಲಿ ಅಧಿಕ ವಿಕೆಟ್ ಪಡೆದಿರುವ ಭಾರತದ ಐದನೇ ಬೌಲರ್ ಎನಿಸಿಕೊಂಡರು.

5 / 9
ಈ ಪಟ್ಟಿಯಲ್ಲಿ ತಲಾ 44 ವಿಕೆಟ್‌ ಪಡೆದಿರುವ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅಗ್ರಸ್ಥಾನದಲ್ಲಿದ್ದಾರೆ.

6 / 9
ಆ ನಂತರ 12 ಪಂದ್ಯಗಳಲ್ಲಿ 36 ವಿಕೆಟ್‌ಗಳನ್ನು ಪಡೆದಿರುವ ಮೊಹಮ್ಮದ್ ಶಮಿ ಎರಡನೇ ಸ್ಥಾನದಲ್ಲಿದ್ದಾರೆ.

7 / 9
ಮಾಜಿ ಟೆಸ್ಟ್ ನಾಯಕ ಅನಿಲ್ ಕುಂಬ್ಳೆ 18 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ 31 ಬ್ಯಾಟರ್‌ಗಳನ್ನು ಔಟ್ ಮಾಡುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

8 / 9
ಪ್ರಸ್ತುತ 14 ಪಂದ್ಯಗಳಲ್ಲಿ 29 ವಿಕೆಟ್ ಪಡೆದಿರುವ ಜಸ್ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನದಲ್ಲಿದ್ದಾರೆ.

9 / 9
Follow us