IND vs NZ: 5 ವಿಕೆಟ್ ಉರುಳಿಸಿ ಅನಿಲ್ ಕುಂಬ್ಳೆ ದಾಖಲೆ ಮುರಿದ ಮೊಹಮ್ಮದ್ ಶಮಿ..!
IND vs NZ, Mohammed Shami: ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ತಂಡದಲ್ಲಿ ಆಡುವ ಅವಕಾಶ ಪಡೆದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮೊದಲ ಎಸೆತದಲ್ಲೇ ವಿಕೆಟ್ ತೆಗೆದು ವಿಶೇಷ ದಾಖಲೆ ಮುರಿದಿದ್ದಾರೆ.
1 / 9
ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ತಂಡದಲ್ಲಿ ಆಡುವ ಅವಕಾಶ ಪಡೆದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮೊದಲ ಎಸೆತದಲ್ಲೇ ವಿಕೆಟ್ ತೆಗೆದು ವಿಶೇಷ ದಾಖಲೆ ಮುರಿದಿದ್ದಾರೆ.
2 / 9
ತಮ್ಮ ಮೊದಲ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಶಮಿ ಟೀಂ ಇಂಡಿಯಾದ ಮಾಜಿ ದಿಗ್ಗಜ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
3 / 9
ಒಂಬತ್ತನೇ ಓವರ್‌ನ ಮೊದಲ ಎಸೆತದಲ್ಲಿ ವಿಲ್ ಯಂಗ್ ವಿಕೆಟ್ ಪಡೆದ ಶಮಿ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದರು.
4 / 9
ಜಹೀರ್ ಖಾನ್ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಬೌಲರ್‌ಗಳಲ್ಲಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. ಅವರು 23 ಇನ್ನಿಂಗ್ಸ್‌ಗಳಲ್ಲಿ 44 ವಿಕೆಟ್‌ಗಳನ್ನು ಪಡೆದಿದ್ದಾರೆ.
5 / 9
ಈ ಪಟ್ಟಿಯಲ್ಲಿ ಜಹೀರ್ ನಂತರದ ಸ್ಥಾನದಲ್ಲಿ ಜಾವಗಲ್ ಶ್ರೀನಾಥ್ ಇದ್ದಾರೆ. ಅವರು 33 ಇನ್ನಿಂಗ್ಸ್‌ಗಳಲ್ಲಿ 44 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
6 / 9
ಜಹೀರ್ ಮತ್ತು ಶ್ರೀನಾಥ್ ಅವರು ಒಂದೇ ಸಂಖ್ಯೆಯ ವಿಕೆಟ್‌ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಶಮಿ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.
7 / 9
ವಿಲ್ ಯಂಗ್ ಸೇರಿದಂತೆ ಶಮಿ ಒಟ್ಟು ಐವರು ಬ್ಯಾಟರ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದರು. ಇದುವರೆಗೆ ಶಮಿ ಏಕದಿನ ವಿಶ್ವಕಪ್‌ನಲ್ಲಿ 37 ವಿಕೆಟ್‌ಗಳನ್ನು ಕಲೆಹಾಕಿದ್ದಾರೆ.
8 / 9
ಇದೀಗ ಅನಿಲ್ ಕುಂಬ್ಳೆ 31 ವಿಕೆಟ್‌ಗಳೊಂದಿಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
9 / 9
ಈ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ 5 ನೇ ಸ್ಥಾನದಲ್ಲಿದ್ದು, ಅವರು 14 ಇನ್ನಿಂಗ್ಸ್‌ಗಳಲ್ಲಿ 28 ವಿಕೆಟ್ ಪಡೆದಿದ್ದಾರೆ.
Published On - 6:09 pm, Sun, 22 October 23