ಭಾರತ ಏಷ್ಯಾಕಪ್ ತಂಡದಲ್ಲಿರುವ ಆಟಗಾರರ ಪಾಕ್ ವಿರುದ್ಧದ ಪ್ರದರ್ಶನ ಹೇಗಿದೆ ಗೊತ್ತಾ?

|

Updated on: Sep 02, 2023 | 1:29 PM

IND vs PAK: ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯವು ಪಲ್ಲೆಕೆಲೆಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಭಾರತ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿರರುವ ಅಷ್ಟೂ ಆಟಗಾರರು ಪಾಕಿಸ್ತಾನ ವಿರುದ್ಧ ಏಕದಿನ ಮಾದರಿಯಲ್ಲಿ ಯಾವ ರೀತಿ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.

1 / 13
ಟೀಂ ಇಂಡಿಯಾ ತನ್ನ ಏಷ್ಯಾಕಪ್ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ. ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯವು ಪಲ್ಲೆಕೆಲೆಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಭಾರತ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿರರುವ ಅಷ್ಟೂ ಆಟಗಾರರು ಪಾಕಿಸ್ತಾನ ವಿರುದ್ಧ ಏಕದಿನ ಮಾದರಿಯಲ್ಲಿ ಯಾವ ರೀತಿ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.

2 / 13
ರೋಹಿತ್ ಶರ್ಮಾ: ನಾಯಕ ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಪಾಕಿಸ್ತಾನದ ವಿರುದ್ಧ 16 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ  ಎರಡು ಶತಕ ಮತ್ತು ಆರು ಅರ್ಧಶತಕಗಳ ಸಹಾಯದಿಂದ 51.42 ಸರಾಸರಿಯಲ್ಲಿ ಒಟ್ಟು 720 ರನ್ ಬಾರಿಸಿದ್ದಾರೆ. ಅದರಲ್ಲೂ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ರೋಹಿತ್ ಬ್ಯಾಕ್-ಟು-ಬ್ಯಾಕ್ ಶತಕ ಬಾರಿಸಿರುವುದು ವಿಶೇಷ.

3 / 13
ಶುಭ್​ಮನ್ ಗಿಲ್: ಶುಭ್​ಮನ್ ಗಿಲ್ ಇದೇ ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ. ಆದಾಗ್ಯೂ, ಅಂಡರ್-19 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗಿಲ್ ಆಡಿದ್ದಾರೆ. 2018 ರಲ್ಲಿ ನಡೆದ ಈ ಪಂದ್ಯದಲ್ಲಿ ಗಿಲ್, 94 ಎಸೆತಗಳಲ್ಲಿ ಅಜೇಯ 102 ರನ್ ಸಿಡಿಸಿದ್ದರು.

4 / 13
ವಿರಾಟ್ ಕೊಹ್ಲಿ: ಎರಡು ಅರ್ಧಶತಕ ಮತ್ತು ಎರಡು ಶತಕಗಳ ನೆರವಿನಿಂದ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಪಾಕಿಸ್ತಾನ ವಿರುದ್ಧ ಇದುವರೆಗೆ 13 ಏಕದಿನ ಪಂದ್ಯಗಳಲ್ಲಿ ಒಟ್ಟು 536 ರನ್ ಬಾರಿಸಿದ್ದಾರೆ.

5 / 13
ಶ್ರೇಯಸ್ ಅಯ್ಯರ್: ಗಿಲ್ ಅವರಂತೆಯೇ, ಶ್ರೇಯಸ್ ಅಯ್ಯರ್ ಕೂಡ ಇದೇ ಮೊದಲ ಬಾರಿಗೆ ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ.

6 / 13
ಇಶಾನ್ ಕಿಶನ್: ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ, ಇಶಾನ್ ಕಿಶನ್ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ. ಇದು ಪಾಕಿಸ್ತಾನದ ವಿರುದ್ಧ ಅವರ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವಾಗಿದೆ.

7 / 13
ಹಾರ್ದಿಕ್ ಪಾಂಡ್ಯ: ಸ್ಟಾರ್ ಆಲ್‌ರೌಂಡರ್ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಪಾಕಿಸ್ತಾನದ ವಿರುದ್ಧ ನಾಲ್ಕು ಏಕದಿನ ಪಂದ್ಯಗಳನ್ನಾಡಿದ್ದು, ಇದರಲ್ಲಿ ಅವರು 122 ರನ್ ಮತ್ತು ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

8 / 13
ಸೂರ್ಯಕುಮಾರ್ ಯಾದವ್: ಸೂರ್ಯಕುಮಾರ್ ಯಾದವ್ ಪಾಕಿಸ್ತಾನದ ವಿರುದ್ಧ ನಾಲ್ಕು ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಈ ತಂಡದ ವಿರುದ್ಧ ಇನ್ನೂ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ.

9 / 13
ರವೀಂದ್ರ ಜಡೇಜಾ: ಪಾಕಿಸ್ತಾನ ವಿರುದ್ಧದ ಒಂಬತ್ತು ಏಕದಿನ ಪಂದ್ಯಗಳ ಆರು ಇನ್ನಿಂಗ್ಸ್‌ಗಳಲ್ಲಿ, ಜಡೇಜಾ 10 ವಿಕೆಟ್ ಜೊತೆಗೆ 116 ರನ್ ಬಾರಿಸಿದ್ದಾರೆ.

10 / 13
ಕುಲ್ದೀಪ್ ಯಾದವ್: ಕುಲ್ದೀಪ್ ಪಾಕಿಸ್ತಾನ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಐದು ವಿಕೆಟ್ ಉರುಳಿಸಿದ್ದಾರೆ.

11 / 13
ಮೊಹಮ್ಮದ್ ಶಮಿ: ಮೊಹಮ್ಮದ್ ಶಮಿ ಅವರು ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಪಾಕಿಸ್ತಾನದ ವಿರುದ್ಧ ಮೂರು 50 ಓವರ್‌ಗಳ ಪಂದ್ಯಗಳಲ್ಲಿ ಮಾತ್ರ ಆಡಿದ್ದು, ಅದರಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

12 / 13
ಜಸ್ಪ್ರೀತ್ ಬುಮ್ರಾ: ಪಾಕಿಸ್ತಾನ ವಿರುದ್ಧದ ಐದು ಏಕದಿನ ಪಂದ್ಯಗಳಲ್ಲಿ ಬುಮ್ರಾ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ.

13 / 13
ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ, ಅಕ್ಷರ್ ಪಟೇಲ್ ಈ ಮಾದರಿಯಲ್ಲಿ ಪಾಕಿಸ್ತಾನದ ವಿರುದ್ಧ ಇನ್ನು ಯಾವುದೇ ಪಂದ್ಯವನ್ನು ಆಡಿಲ್ಲ.