IND vs SA: ಜನ್ಮದಿನದಂದು ಈ ದಾಖಲೆ ಬರೆದ ಮೊದಲ ಬೌಲರ್ ಕುಲ್ದೀಪ್ ಯಾದವ್..!
IND vs SA: ಮ್ಮ 29ನೇ ಹುಟ್ಟುಹಬದಂದು ಕುಲ್ದೀಪ್ ಐದು ವಿಕೆಟ್ ಕಬಳಿಸಿದ್ದು ವಿಶೇಷವಾಗಿತ್ತು. ಈ ಮೂಲಕ ಕುಲ್ದೀಪ್ ಜನ್ಮದಿನದಂದು 3 ವಿಕೆಟ್ ಪಡೆದು ದಾಖಲೆ ಬರೆದಿದ್ದ ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ದಾಖಲೆ ಮುರಿದರು.
1 / 8
ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯವನ್ನು 106 ರನ್‌ಗಳಿಂದ ಗೆದ್ದು ಸರಣಿಯನ್ನು 1-1 ರಲ್ಲಿ ಕೊನೆಗೊಳಿಸಿತು. ಟೀಂ ಇಂಡಿಯಾ ಪರ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ನಲ್ಲಿ ಮಿಂಚಿದರೆ ಬೌಲಿಂಗ್‌ನಲ್ಲಿ ಮಿಂಚಿದ ಕುಲ್ದೀಪ್ ಯಾದವ್ 5 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು.
2 / 8
ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ 2.5 ಓವರ್ ಬೌಲ್ ಮಾಡಿ 17 ರನ್ ನೀಡಿ 5 ವಿಕೆಟ್ ಪಡೆದರು. ಇದರೊಂದಿಗೆ, ಅಂತಾರಾಷ್ಟ್ರೀಯ ಟಿ20 ಯಲ್ಲಿ 2 ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದರು.
3 / 8
ಹಾಗೆಯೇ ಭಾರತದ ಪರ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಐದು ವಿಕೆಟ್ ಗಳಿಸಿದ ಭುವನೇಶ್ವರ್ ಕುಮಾರ್ ಅವರ ದಾಖಲೆನ್ನು ಸರಿಗಟ್ಟಿದ್ದಾರೆ.
4 / 8
ಈ ಇಬ್ಬರಲ್ಲದೆ ಭಾರತದ ಪರ ಯುಜ್ವೇಂದ್ರ ಚಹಾಲ್ ಮತ್ತು ದೀಪಕ್ ಚಹಾರ್ ಕೂಡ ಟಿ20 ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಒಮ್ಮೆ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
5 / 8
ಈ ಪಂದ್ಯದಲ್ಲಿ ಕುಲ್ದೀಪ್ ಡೇವಿಡ್ ಮಿಲ್ಲರ್, ಡೊನೊವನ್ ಫೆರೇರಾ, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್ ಮತ್ತು ಲಿಜಾದ್ ವಿಲಿಯಮ್ಸ್ ಅವರ ವಿಕೆಟ್‌ಗಳನ್ನು ಪಡೆದರು.
6 / 8
ಅದರಲ್ಲೂ ತಮ್ಮ 29ನೇ ಹುಟ್ಟುಹಬದಂದು ಕುಲ್ದೀಪ್ ಐದು ವಿಕೆಟ್ ಕಬಳಿಸಿದ್ದು ವಿಶೇಷವಾಗಿತ್ತು. ಈ ಮೂಲಕ ಕುಲ್ದೀಪ್ ಜನ್ಮದಿನದಂದು 3 ವಿಕೆಟ್ ಪಡೆದು ದಾಖಲೆ ಬರೆದಿದ್ದ ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ದಾಖಲೆ ಮುರಿದರು.
7 / 8
ಯುವರಾಜ್ ಸಿಂಗ್ ತಮ್ಮ ಜನ್ಮದಿನದಂದು ಅಂದರೆ 12 ಡಿಸೆಂಬರ್ 2009 ರಂದು ಮೊಹಾಲಿಯಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 23 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು.
8 / 8
ಇಲ್ಲಿಯವರೆಗೆ ಭಾರತದ ಪರ 34 ಟಿ20 ಪಂದ್ಯಗಳನ್ನಾಡಿರುವ ಕುಲ್ದೀಪ್ 6.68 ರ ಅದ್ಭುತ ಎಕಾನಮಿಯಲ್ಲಿ 58 ವಿಕೆಟ್ಗಳನ್ನು ಪಡೆದಿದ್ದಾರೆ.