IND vs SA: ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ಯಶಸ್ವಿ ಭಾರತೀಯ ಬೌಲರ್ ಯಾರು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Dec 21, 2021 | 2:43 PM

India vs South Africa: ಪ್ರಸ್ತುತ ಬಲವನ್ನು ಅಳೆಯುವ ಮೊದಲು, ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ಯಶಸ್ವಿ ಭಾರತೀಯ ಬೌಲರ್‌ಗಳನ್ನು ನೋಡುವುದು ಅವಶ್ಯಕ. ಹಾಗಾದರೆ ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳನ್ನು ನೋಡೋಣ...

1 / 7
ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ದದ 3 ಪಂದ್ಯಗಳ ಟೆಸ್ಟ್​ ಸರಣಿಗೆ ಸಜ್ಜಾಗಿ ನಿಂತಿದೆ. ಈ ಬಾರಿ ಟೀಮ್ ಇಂಡಿಯಾ ಟೆಸ್ಟ್ ಸರಣಿ ಗೆದ್ದು ಮರಳುವ ನಿರೀಕ್ಷೆ ಇದೆ. ಏಕೆಂದರೆ ಈ ಬಾರಿ ಭಾರತೀಯ ಬೌಲಿಂಗ್ ಲೈನಪ್ ಉತ್ತಮವಾಗಿದ್ದು, ಹೀಗಾಗಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಸರಣಿ ಗೆಲ್ಲುವ ವಿಶ್ವಾಸ ಮೂಡಿಸಿದೆ. ಆದಾಗ್ಯೂ, ಪ್ರಸ್ತುತ ಬಲವನ್ನು ಅಳೆಯುವ ಮೊದಲು, ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ಯಶಸ್ವಿ ಭಾರತೀಯ ಬೌಲರ್‌ಗಳನ್ನು ನೋಡುವುದು ಅವಶ್ಯಕ. ಹಾಗಾದರೆ ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳನ್ನು ನೋಡೋಣ...

2 / 7
 ಅನಿಲ್ ಕುಂಬ್ಳೆ: ದಕ್ಷಿಣ ಆಫ್ರಿಕಾದ ಅತ್ಯಂತ ಯಶಸ್ವಿ ಬೌಲರ್ ಎಂಬ ಬಿರುದು ಭಾರತದ ಮಾಜಿ ನಾಯಕ ಮತ್ತು ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಅನಿಲ್ ಕುಂಬ್ಳೆ ಅವರಿಗೆ ಸಲ್ಲುತ್ತದೆ. ಕುಂಬ್ಳೆ 1992 ಮತ್ತು 2007 ರ ನಡುವೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಒಟ್ಟು 12 ಪಂದ್ಯಗಳನ್ನು ಆಡಿದ್ದರು. ಈ ವೇಳೆ 32.02 ರ ಸರಾಸರಿಯಲ್ಲಿ 45 ವಿಕೆಟ್​ಗಳನ್ನು ಪಡೆದಿದ್ದಾರೆ.

3 / 7
ಜಾವಗಲ್ ಶ್ರೀನಾಥ್: ಕರ್ನಾಟಕದ ಬೌಲರ್‌ಗಳು ದಕ್ಷಿಣ ಆಫ್ರಿಕಾದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಏಕೆಂದರೆ ಅನಿಲ್ ಕುಂಬ್ಳೆ ನಂತರ ಅತಿ ಹೆಚ್ಚು ವಿಕೆಟ್ ಪಡೆದವರು ಜಾವಗಲ್ ಶ್ರೀನಾಥ್.  1992 ಮತ್ತು 2001 ರ ನಡುವೆ ಶ್ರೀನಾಥ್ 8 ಟೆಸ್ಟ್‌ಗಳಲ್ಲಿ 25.27 ಸರಾಸರಿಯಲ್ಲಿ 43 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ ಅವರು 3 ಬಾರಿ 5 ವಿಕೆಟ್ ಕಬಳಿಸಿರುವುದು ವಿಶೇಷ.

4 / 7
ಝಹೀರ್ ಖಾನ್: ಇನ್ನು ಈ ಪಟ್ಟಿಯಲ್ಲಿರುವ ಎಡಗೈ ಬೌಲರ್ ಎಂದರೆ ಝಹೀರ್ ಖಾನ್. ಝಾಕ್ ದಕ್ಷಿಣ ಆಫ್ರಿಕಾದಲ್ಲಿ ಮೂರನೇ ಅತ್ಯಂತ ಯಶಸ್ವಿ ಬೌಲರ್. ಝಹೀರ್ ಖಾನ್ 2001 ಮತ್ತು 2013 ರ ನಡುವೆ  ಆಡಿದ 8 ಟೆಸ್ಟ್‌ಗಳಲ್ಲಿ 35.60 ರ ಸರಾಸರಿಯಲ್ಲಿ 30 ವಿಕೆಟ್‌ಗಳನ್ನು ಪಡೆದಿದ್ದಾರೆ.

5 / 7
ಶ್ರೀಶಾಂತ್:  ದಕ್ಷಿಣ ಆಫ್ರಿಕಾದಲ್ಲಿ ನಾಲ್ಕನೇ ಅತ್ಯಂತ ಯಶಸ್ವಿ ಭಾರತೀಯ ಟೆಸ್ಟ್ ಬೌಲರ್ ಶ್ರೀಶಾಂತ್. 2006 ಮತ್ತು 2011 ರ ನಡುವೆ ಶ್ರೀ ಆಡಿದ 6 ಟೆಸ್ಟ್‌ಗಳಲ್ಲಿ 28.55 ಸರಾಸರಿಯಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ.

6 / 7
ಮೊಹಮ್ಮದ್ ಶಮಿ: ಮೊಹಮ್ಮದ್ ಶಮಿ ಕೂಡ ದಕ್ಷಿಣ ಆಫ್ರಿಕಾದಲ್ಲಿ ಯಶಸ್ಸು ಸಾಧಿಸಿದ್ದಾರೆ. ಪ್ರಸಕ್ತ ಪ್ರವಾಸದಲ್ಲೂ ಟೀಮ್ ಇಂಡಿಯಾದಲ್ಲಿ ಶಮಿ ಇರುವುದು ವಿಶೇಷ. ಶಮಿ 2013 ಮತ್ತು 2018 ರ ನಡುವೆ ಅಲ್ಲಿ ಆಡಿದ 5 ಟೆಸ್ಟ್‌ಗಳಲ್ಲಿ 21 ವಿಕೆಟ್‌ಗಳನ್ನು ಪಡೆದು 5ನೇ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.

7 / 7
ಇಶಾಂತ್ ಶರ್ಮಾ: ದಕ್ಷಿಣ ಆಫ್ರಿಕಾ ನೆಲದಲ್ಲಿ ಇಶಾಂತ್ ಶರ್ಮಾ ಆರನೇ ಯಶಸ್ವಿ ಭಾರತೀಯ ಬೌಲರ್ ಆಗಿದ್ದಾರೆ. ಇಶಾಂತ್ 2010 ಮತ್ತು 2018 ರ ನಡುವೆ ಆಡಿದ 7 ಟೆಸ್ಟ್‌ಗಳಲ್ಲಿ 20 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾದಲ್ಲಿನ ಯಶಸ್ವಿ ಬೌಲರುಗಳ ಪೈಕಿ ಟೀಮ್ ಇಂಡಿಯಾದಲ್ಲಿ ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಇರುವುದರಿಂದ ಬೌಲಿಂಗ್ ಲೈನಪ್ ಕೂಡ ಬಲಿಷ್ಠವಾಗಿದೆ.