IND vs SA 3rd T20I: ಇಂದು ತೃತೀಯ ಟಿ20: ಟೀಮ್ ಇಂಡಿಯಾ ಆಟಗಾರರಿಂದ ಭರ್ಜರಿ ಅಭ್ಯಾಸ
TV9 Web | Updated By: Vinay Bhat
Updated on:
Jun 14, 2022 | 9:06 AM
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯದಲ್ಲಿ ಸೋತು ಸರಣಿ ಕಳೆದುಕೊಳ್ಳುವ ಭೀತಿಯಲ್ಲಿರುವ ಭಾರತ ತಂಡ ಇಂದು ಮೂರನೇ ಟಿ20 ಪಂದ್ಯವನ್ನು ಆಡಲಿದೆ. ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಕದನ ನಡೆಯಲಿದೆ. ಇದಕ್ಕಾಗಿ ಭಾರತೀಯ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
1 / 8
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವೆ ಅಂತಿಮ ಐದನೇ ಟಿ20 ಪಂದ್ಯ ನಡೆಯಲಿದೆ. ಈಗಾಗಲೇ 2-2 ಅಂತರದಿಂದ ಸರಣಿ ಸಮಬಲಗೊಂಡಿರುವ ಕಾರಣ ಈ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದ್ದು ಬೆಂಗಳೂರಿನಲ್ಲಿ ಹೈವೋಲ್ಟೇಜ್ ಕದನ ನಿರೀಕ್ಷಿಸಲಾಗಿದೆ.
2 / 8
ನಾಯಕ ರಿಷಭ್ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಕೂಡ ಅಸ್ಥಿರ ಪ್ರದರ್ಶನ ನೀಡುತ್ತಿದ್ದು ಲಯಕ್ಕೆ ಮರಳಬೇಕಿದೆ.
3 / 8
ಸರಣಿಯಲ್ಲಿ ಎರಡು ಅರ್ಧಶತಕ ಹೊಡೆದಿರುವ ಇಶಾನ್ ಉತ್ತಮ ಲಯದಲ್ಲಿದ್ದರೆ ರುತುರಾಜ್ ಗಾಯಕ್ವಾಡ್ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಆರಂಭಿಕ ಜೋಡಿಯಲ್ಲಿ ಬದಲಾವಣೆ ಆಗುತ್ತಾ ಎಂಬುದು ಕುತೂಹಲ. ವೆಂಕಟೇಶ್ ಅಯ್ಯರ್ಗೆ ಅವಕಾಶ ನೀಡಿದರೆ ಅಚ್ಚರಿ ಪಡಬೇಕಿಲ್ಲ.
4 / 8
ಅಭ್ಯಾಸದಲ್ಲಿ ನಿರತರಾಗಿರುವ ಶ್ರೇಯಸ್ ಅಯ್ಯರ್.
5 / 8
ಇಂದಿನ ಪಂದ್ಯದಲ್ಲೂ ದಿನೇಶ್ ಕಾರ್ತಿಕ್ ಅವರೇ ಪ್ರಮುಖ ಹೈಲೇಟ್ ಆಗಿದ್ದಾರೆ. ಅಲ್ಲದೆ ಆರ್ಸಿಬಿ ಪರ ಆಡುತ್ತಿರುವ ಕಾರ್ತಿಕ್ಗೆ ಬೆಂಗಳೂರಿನಲ್ಲಿ ಅಭಿಮಾನಿಗಳ ಬಳಗ ಜೋರಾಗಿಯೇ ಇದೆ. ಹೀಗಾಗಿ ಡಿಕೆ ಘೋಷಣೆ ದೊಟ್ಟದಲ್ಲಿ ಕೇಳಿಬರಲಿದೆ. ನಾಲ್ಕನೇ ಪಂದ್ಯದಲ್ಲಿ ಮಿಂಚಿನ ಅರ್ಧಶತಕ ಹೊಡೆದಿದ್ದ ದಿನೇಶ್ ಗೆಲುವಿನ ರೂವಾರಿಯಾಗಿದ್ದರು.
6 / 8
ದಕ್ಷಿಣ ಆಫ್ರಿಕಾ ಸರಣಿಗೆ ಉಮ್ರಾನ್ ಮಲಿಕ್ ಮತ್ತು ಅರ್ಶ್‌ದೀಪ್ ಸಿಂಗ್ ಅವರಂತಹ ಯುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿದ್ದರೂ, ಅವರಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಅಂತಿಮ ಕದನದಲ್ಲಿ ಅವಕಾಶ ಅನುಮಾನ.
7 / 8
ವೇಗಿಗಳಾಗಿ ಹರ್ಷಲ್ ಪಟೇಲ್ ಮತ್ತು ಭುವನೇಶ್ವರ್ ಕುಮಾರ್ ಭಾರತಕ್ಕೆ ಅತ್ಯಂತ ಪ್ರಮುಖ ಅಸ್ತ್ರವಾಗಿದ್ದು, ಹರ್ಷಲ್ ಈ ಸರಣಿಯಲ್ಲಿ ಏಳು ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದರೆ, ಭುವನೇಶ್ವರ್ ಆರು ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಪವರ್‌ಪ್ಲೇ/ಡೆತ್ ಓವರ್‌ಗಳಲ್ಲಿ ಅವರ ಬೌಲಿಂಗ್ ಅತ್ಯಂತ ನಿರ್ಣಾಯಕವಾಗಿರುತ್ತದೆ.
8 / 8
ಸ್ಪಿನ್ನರ್‌ಗಳಾದ ಯುಜ್ವೇಂದ್ರ ಚಹಲ್ ಮತ್ತು ಅಕ್ಷರ್ ಪಟೇಲ್ ಕೂಡ ಉತ್ತಮ ಪ್ರದರ್ಶನ ನೀಡಬೇಕಾಗಿದೆ.
Published On - 9:06 am, Tue, 14 June 22