IND vs SA: ವಿರಾಟ್ ಕೊಹ್ಲಿ ಅಥವಾ ಕೆಎಲ್ ರಾಹುಲ್…ಯಾರು ಮುರಿಯಲಿದ್ದಾರೆ ಸಚಿನ್ರ 10 ವರ್ಷಗಳ ಹಳೆಯ ದಾಖಲೆ
TV9 Web | Updated By: ಝಾಹಿರ್ ಯೂಸುಫ್
Updated on:
Dec 20, 2021 | 5:18 PM
India vs South Africa: ಈ ಬಾರಿ ಕೂಡ ಟೀಮ್ ಇಂಡಿಯಾ ಟೆಸ್ಟ್ ತಂಡದ ಅನುಭವಿ ಆಟಗಾರರಾಗಿ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಇಬ್ಬರಲ್ಲಿ ಯಾರು ಸಚಿನ್ ದಾಖಲೆ ಮುರಿಯುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.
1 / 6
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಅನೇಕ ದಾಖಲೆಗಳಿವೆ. ಅವುಗಳಲ್ಲೊಂದು ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ಯಶಸ್ವಿ ಬ್ಯಾಟರ್ ಎಂಬ ದಾಖಲೆ. ಏಕೆಂದರೆ ಭಾರತದ ಪರ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಅತೀ ಹೆಚ್ಚು ರನ್ ದಾಖಲಿಸಿದ ದಾಖಲೆ ಇನ್ನೂ ಕೂಡ ಸಚಿನ್ ಅವರ ಹೆಸರಿನಲ್ಲಿದೆ.
2 / 6
ಇದೀಗ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಸಹಜವಾಗಿಯೇ ಈ ಬಾರಿಯಾದರೂ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಯಾರು ಮುರಿಯಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ತಂಡದಲ್ಲಿ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರಾ, ಮಯಾಂಕ್ ಅಗರ್ವಾಲ್ರಂತಹ ಬ್ಯಾಟರ್ಗಳಿದ್ದಾರೆ. ಹೀಗಾಗಿ ಇವರಲ್ಲಿ ಯಾರು 10 ವರ್ಷಗಳ ಹಳೆಯ ದಾಖಲೆ ಮುರಿಯುತ್ತಾರೆ ಎಂಬ ಕೂತೂಹಲ ಎಲ್ಲರಲ್ಲಿ ಮನೆ ಮಾಡಿದೆ.
3 / 6
2010-11ರಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಸಚಿನ್ 3 ಪಂದ್ಯಗಳಲ್ಲಿ 81.50 ಸರಾಸರಿಯಲ್ಲಿ 326 ರನ್ ಗಳಿಸಿದ್ದರು. ಇದರೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯಲ್ಲಿ 300 ಕ್ಕೂ ಅಧಿಕ ರನ್ ಕಲೆಹಾಕಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಪಾಲಾಗಿತ್ತು.
4 / 6
ಇದಾಗ್ಯೂ 2017-18 ರ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವಿರಾಟ್ ಕೊಹ್ಲಿ ಈ ದಾಖಲೆಯ ಸಮೀಪಕ್ಕೆ ತಲುಪಿದ್ದರು ಎಂಬುದು ವಿಶೇಷ. ಏಕೆಂದರೆ 3 ಟೆಸ್ಟ್ ಪಂದ್ಯಗಳಿಂದ ಅಂದು ಕೊಹ್ಲಿ 47.66 ಸರಾಸರಿಯಲ್ಲಿ 286 ರನ್ ಕಲೆಹಾಕಿದ್ದರು. ಇದಾಗ್ಯೂ ಕ್ರಿಕೆಟ್ ದೇವರ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.
5 / 6
ಇನ್ನು ಕೊಹ್ಲಿಗೂ ಮುನ್ನ ಚೇತೇಶ್ವರ ಪೂಜಾರ ಕೂಡ 2013-14ರ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಭರ್ಜರಿ ಪ್ರದರ್ಶನ ನೀಡಿದ್ದರು. ಅಂದು ಕೇವಲ 2 ಟೆಸ್ಟ್‌ಗಳ 4 ಇನ್ನಿಂಗ್ಸ್‌ಗಳಲ್ಲಿ ಪೂಜಾರ ಕಲೆಹಾಕಿದ್ದು ಬರೋಬ್ಬರಿ 280 ರನ್ಗಳು. ಅಂದರೆ ಸಚಿನ್ ದಾಖಲೆಯಿಂದ ಕೇವಲ 46 ರನ್ಗಳಿಂದ ಹಿಂದೆ ಉಳಿದಿದ್ದರು.
6 / 6
ಈ ಬಾರಿ ಕೂಡ ಟೀಮ್ ಇಂಡಿಯಾ ಟೆಸ್ಟ್ ತಂಡದ ಅನುಭವಿ ಆಟಗಾರರಾಗಿ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಇಬ್ಬರಲ್ಲಿ ಯಾರು ಸಚಿನ್ ದಾಖಲೆ ಮುರಿಯುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ವಿರುದ್ದ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಮಯಾಂಕ್, ಶ್ರೇಯಸ್ ಅಯ್ಯರ್ ಕೂಡ ತಂಡದಲ್ಲಿದ್ದಾರೆ. ಜೊತೆಗೆ ಇಂಗ್ಲೆಂಡ್ ಅಂಗಳದಲ್ಲಿ ಅಬ್ಬರಿಸಿದ್ದ ಕೆಎಲ್ ರಾಹುಲ್ ಕೂಡ ಈ ಬಾರಿ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಬಲಿಷ್ಠ ದಾಂಡಿಗರನ್ನೇ ಹೊಂದಿರುವ ಟೀಮ್ ಇಂಡಿಯಾ ಯಾವ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ 326 ರನ್ಗಳ ದಾಖಲೆಯನ್ನು ಅಳಿಸಿ ಹಾಕುತ್ತಾರೆ ಕಾದು ನೋಡಬೇಕಿದೆ.