
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೈದಾನಕ್ಕೆ ಬಂದಾಗಲೆಲ್ಲಾ ಅವರ ಮುಂದೆ ನಿಲ್ಲುವುದು ಬ್ಯಾಟ್ಸ್‌ಮನ್‌ಗಳಿಗೆ ಸುಲಭವಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಭಾರತದ ಅತಿದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿರುವ ಅಶ್ವಿನ್, ಪ್ರತಿ ಪಂದ್ಯದಲ್ಲೂ ಅಂಕಿಅಂಶ ಮತ್ತು ದಾಖಲೆಯನ್ನು ಸುಧಾರಿಸುತ್ತಲೇ ಇದ್ದಾರೆ ಮತ್ತು ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನದಲ್ಲಿ ಅಶ್ವಿನ್ ಮತ್ತೊಂದು ಸಾಧನೆ ಮಾಡಿದರು.

ಭಾರತದ ಅನುಭವಿ ಸ್ಪಿನ್ನರ್ ಅಶ್ವಿನ್ ಮಾರ್ಚ್ 5 ರ ಶನಿವಾರದಂದು ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರು. ಇದರಲ್ಲಿ ಎರಡನೇ ವಿಕೆಟ್ ಧನಂಜಯ ಡಿ ಸಿಲ್ವಾ ಅವರದ್ದು, ಅವರನ್ನು ಅಶ್ವಿನ್ ಎಲ್ ಬಿಡಬ್ಲ್ಯು ಮಾಡಿದರು. ಇದರೊಂದಿಗೆ ಅಶ್ವಿನ್ ನ್ಯೂಜಿಲೆಂಡ್‌ನ ಶ್ರೇಷ್ಠ ವೇಗದ ಬೌಲರ್ ರಿಚರ್ಡ್ ಹ್ಯಾಡ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ.



Published On - 7:04 pm, Sat, 5 March 22