IND vs SL: ಗಂಗೂಲಿ- ಡಿವಿಲಿಯರ್ಸ್ ದಾಖಲೆ ಮುರಿಯುವ ತವಕದಲ್ಲಿ ಜಡೇಜಾ- ರೋಹಿತ್! ಏನದು ಗೊತ್ತಾ?
IND vs SL: ಬೆಂಗಳೂರಿನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಕ್ರಿಕೆಟ್ ದಿಗ್ಗಜರ ದಾಖಲೆ ಮುರಿಯುವ ತವಕದಲ್ಲಿದ್ದಾರೆ.
1 / 5
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಈ ಪಂದ್ಯ ಗುಲಾಬಿ ಚೆಂಡಿನೊಂದಿಗೆ ಹಗಲು-ರಾತ್ರಿ ಪಂದ್ಯವಾಗಲಿದೆ. ಎರಡನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ ನಲ್ಲಿ ವಿಶೇಷ ಸಾಧನೆ ಮಾಡುವ ಅವಕಾಶ ಪಡೆದಿದ್ದಾರೆ. ಈ ಸಾಧನೆಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಪಟ್ಟಿಗೆ ಸಂಬಂಧಿಸಿವೆ. ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಬೆಂಗಳೂರಿನಲ್ಲಿ ಬ್ಯಾಟ್‌ನಿಂದ ಅದ್ಭುತಗಳನ್ನು ಮಾಡಿದರೆ, ಇಬ್ಬರೂ ಅನೇಕ ಕ್ರಿಕೆಟ್ ದಿಗ್ಗಜರನ್ನು ಹಿಂದಿಕ್ಕಲಿದ್ದಾರೆ. ಹಾಗಾದ್ರೆ ಏನೆಲ್ಲಾ ವಿಷಯ ಗೊತ್ತಾ.
2 / 5
ರೋಹಿತ್ ಶರ್ಮಾ ಇದುವರೆಗೆ 44 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 63 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರಲ್ಲಿ ಅವರು ಇನ್ನೂ ಬಹಳ ಹಿಂದೆ ಉಳಿದಿದ್ದಾರೆ. ಆದರೆ ಬೆಂಗಳೂರು ಟೆಸ್ಟ್ ನಲ್ಲಿ ಎರಡು ಸಿಕ್ಸರ್ ಬಾರಿಸಿದ ತಕ್ಷಣ ರೋಹಿತ್, ಖ್ಯಾತ ಬ್ಯಾಟರ್ನನ್ನು ಹಿಂದಿಕ್ಕಲಿದ್ದಾರೆ. ರೋಹಿತ್ ಶರ್ಮಾ 65 ಟೆಸ್ಟ್ ಸಿಕ್ಸರ್‌ಗಳನ್ನು ಬಾರಿಸಿದ ತಕ್ಷಣ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರನ್ನು ಹಿಂದಿಕ್ಕುತ್ತಾರೆ.
3 / 5
4 / 5
5 / 5
Published On - 4:37 pm, Wed, 9 March 22