- Kannada News Photo gallery Cricket photos Team Indias leg spinner Rahul Chahar gets married days ahead of IPL 2022 season
Rahul Chahar Wedding: ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಲೆಗ್ ಸ್ಪಿನ್ನರ್ ರಾಹುಲ್ ಚಹಾರ್; ಫೋಟೋ ನೋಡಿ
Rahul Chahar Wedding: ಕಳೆದ ತಿಂಗಳು ನಡೆದ ಐಪಿಎಲ್ 2022 ಹರಾಜಿನಲ್ಲಿ ಭಾರತೀಯ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ರಾಹುಲ್ ಅವರನ್ನು ಪಂಜಾಬ್ ಕಿಂಗ್ಸ್ ಹೆಚ್ಚಿನ ಮೊತ್ತಕ್ಕೆ ಖರೀದಿಸಿತ್ತು.
Updated on:Mar 09, 2022 | 10:26 PM



ರಾಹುಲ್ ಮತ್ತು ಇಶಾನಿ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಾಹುಲ್ ಅವರೇ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮದುವೆಗೆ ಸಂಬಂಧಿಸಿದ ಹಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಹಲ್ದಿ, ಸಂಗೀತ ಕಾರ್ಯಕ್ರಮವನ್ನು ಕಾಣಬಹುದಾಗಿದೆ.

ಸಹೋದರ ದೀಪಕ್ ಚಹಾರ್ ಮತ್ತು ಅವರ ಪ್ರೇಯಸಿ ಜಯಾ ಭಾರದ್ವಾಜ್ ಅವರಲ್ಲದೆ, ಅಂಡರ್-19 ವಿಶ್ವಕಪ್ ಪಾಲುದಾರ ಶಿವಂ ಮಾವಿ ಸೇರಿದಂತೆ ಅನೇಕ ಕ್ರಿಕೆಟಿಗರು ರಾಹುಲ್ ಅವರ ಮದುವೆಗೆ ಹಾಜರಿದ್ದರು.

ಕಳೆದ ತಿಂಗಳ ಐಪಿಎಲ್ ಹರಾಜಿನಲ್ಲಿ ಯುವ ಲೆಗ್ ಸ್ಪಿನ್ನರ್ ಅವರನ್ನು ಪಂಜಾಬ್ ಕಿಂಗ್ಸ್ 5.25 ಕೋಟಿ ರೂ.ಗೆ ಖರೀದಿಸಿತ್ತು. ರಾಹುಲ್ ಮೊದಲು ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದರು, ಅಲ್ಲಿಂದ ಅವರು ಮನ್ನಣೆ ಪಡೆದರು. ರಾಹುಲ್ ಭಾರತದ ಪರ 6 ಟಿ20 ಹಾಗೂ 1 ಏಕದಿನ ಪಂದ್ಯವನ್ನಾಡಿದ್ದು, 10 ವಿಕೆಟ್ ಪಡೆದಿದ್ದಾರೆ. ಅದೇ ಸಮಯದಲ್ಲಿ, ಅವರು ಐಪಿಎಲ್‌ನ 42 ಪಂದ್ಯಗಳಲ್ಲಿ 43 ವಿಕೆಟ್‌ಗಳನ್ನು ಪಡೆದಿದ್ದಾರೆ.
Published On - 10:17 pm, Wed, 9 March 22



















