IND vs SL: ಗಂಗೂಲಿ- ಡಿವಿಲಿಯರ್ಸ್​ ದಾಖಲೆ ಮುರಿಯುವ ತವಕದಲ್ಲಿ ಜಡೇಜಾ- ರೋಹಿತ್! ಏನದು ಗೊತ್ತಾ?

IND vs SL: ಬೆಂಗಳೂರಿನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಕ್ರಿಕೆಟ್ ದಿಗ್ಗಜರ ದಾಖಲೆ ಮುರಿಯುವ ತವಕದಲ್ಲಿದ್ದಾರೆ.

ಪೃಥ್ವಿಶಂಕರ
|

Updated on:Mar 09, 2022 | 5:26 PM

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಈ ಪಂದ್ಯ ಗುಲಾಬಿ ಚೆಂಡಿನೊಂದಿಗೆ ಹಗಲು-ರಾತ್ರಿ ಪಂದ್ಯವಾಗಲಿದೆ. ಎರಡನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ ನಲ್ಲಿ ವಿಶೇಷ ಸಾಧನೆ ಮಾಡುವ ಅವಕಾಶ ಪಡೆದಿದ್ದಾರೆ. ಈ ಸಾಧನೆಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಪಟ್ಟಿಗೆ ಸಂಬಂಧಿಸಿವೆ. ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಬೆಂಗಳೂರಿನಲ್ಲಿ ಬ್ಯಾಟ್‌ನಿಂದ ಅದ್ಭುತಗಳನ್ನು ಮಾಡಿದರೆ, ಇಬ್ಬರೂ ಅನೇಕ ಕ್ರಿಕೆಟ್ ದಿಗ್ಗಜರನ್ನು ಹಿಂದಿಕ್ಕಲಿದ್ದಾರೆ. ಹಾಗಾದ್ರೆ ಏನೆಲ್ಲಾ ವಿಷಯ ಗೊತ್ತಾ.

1 / 5
ರೋಹಿತ್ ಶರ್ಮಾ ಇದುವರೆಗೆ 44 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 63 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರಲ್ಲಿ ಅವರು ಇನ್ನೂ ಬಹಳ ಹಿಂದೆ ಉಳಿದಿದ್ದಾರೆ. ಆದರೆ ಬೆಂಗಳೂರು ಟೆಸ್ಟ್ ನಲ್ಲಿ ಎರಡು ಸಿಕ್ಸರ್ ಬಾರಿಸಿದ ತಕ್ಷಣ ರೋಹಿತ್, ಖ್ಯಾತ ಬ್ಯಾಟರ್​ನನ್ನು ಹಿಂದಿಕ್ಕಲಿದ್ದಾರೆ. ರೋಹಿತ್ ಶರ್ಮಾ 65 ಟೆಸ್ಟ್ ಸಿಕ್ಸರ್‌ಗಳನ್ನು ಬಾರಿಸಿದ ತಕ್ಷಣ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರನ್ನು ಹಿಂದಿಕ್ಕುತ್ತಾರೆ.

2 / 5
IND vs SL: ಗಂಗೂಲಿ- ಡಿವಿಲಿಯರ್ಸ್​ ದಾಖಲೆ ಮುರಿಯುವ ತವಕದಲ್ಲಿ ಜಡೇಜಾ- ರೋಹಿತ್! ಏನದು ಗೊತ್ತಾ?

ಎಬಿ ಡಿವಿಲಿಯರ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ 64 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದಕ್ಕಾಗಿ ಅವರು 114 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಡಿವಿಲಿಯರ್ಸ್ 64 ಸಿಕ್ಸರ್‌ಗಳನ್ನು ಬಾರಿಸಲು ರೋಹಿತ್‌ಗಿಂತ 70 ಹೆಚ್ಚು ಟೆಸ್ಟ್‌ಗಳನ್ನು ಆಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡದ ನಾಯಕನಿಗೆ ಉತ್ತಮ ಸಾಧನೆ ಮಾಡುವ ಅವಕಾಶ ದೊರೆಯಲಿದೆ.

3 / 5
IND vs SL: ಗಂಗೂಲಿ- ಡಿವಿಲಿಯರ್ಸ್​ ದಾಖಲೆ ಮುರಿಯುವ ತವಕದಲ್ಲಿ ಜಡೇಜಾ- ರೋಹಿತ್! ಏನದು ಗೊತ್ತಾ?

ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಎಡಗೈ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಮಿಂಚುವ ಅವಕಾಶ ಹೊಂದಿದ್ದಾರೆ. ಅವರು ಇಲ್ಲಿಯವರೆಗೆ 58 ಟೆಸ್ಟ್ ಪಂದ್ಯಗಳನ್ನು ಆಡಿ, 55 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಇನ್ನು ಮೂರು ಸಿಕ್ಸರ್‌ಗಳೊಂದಿಗೆ ಅವರು ಭಾರತದ ಸೌರವ್ ಗಂಗೂಲಿ ಮತ್ತು ಪಾಕಿಸ್ತಾನದ ವಾಸಿಂ ಅಕ್ರಮ್ ಅವರನ್ನು ಹಿಂದಿಕ್ಕಲಿದ್ದಾರೆ.

4 / 5
IND vs SL: ಗಂಗೂಲಿ- ಡಿವಿಲಿಯರ್ಸ್​ ದಾಖಲೆ ಮುರಿಯುವ ತವಕದಲ್ಲಿ ಜಡೇಜಾ- ರೋಹಿತ್! ಏನದು ಗೊತ್ತಾ?

ಸೌರವ್ ಗಂಗೂಲಿ 113 ಟೆಸ್ಟ್ ಪಂದ್ಯಗಳಲ್ಲಿ 57 ಸಿಕ್ಸರ್ ಬಾರಿಸಿದ್ದಾರೆ. ಅದೇ ಸಮಯದಲ್ಲಿ, ವಾಸಿಂ ಅಕ್ರಮ್ 104 ಟೆಸ್ಟ್‌ಗಳಲ್ಲಿ ಒಂದೇ ಸಂಖ್ಯೆಯ ಸಿಕ್ಸರ್‌ಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 92 ಟೆಸ್ಟ್‌ಗಳಲ್ಲಿ 58 ಮತ್ತು ಶ್ರೀಲಂಕಾದ ಸನತ್ ಜಯಸೂರ್ಯ 110 ಟೆಸ್ಟ್‌ಗಳಲ್ಲಿ 59 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

5 / 5

Published On - 4:37 pm, Wed, 9 March 22

Follow us
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ