IND vs SL: ಶ್ರೀಲಂಕಾ ತಲುಪಿದ ಭಾರತ ಏಕದಿನ ತಂಡದ ಆಟಗಾರರು; ಪ್ರತ್ಯೇಕ ಅಭ್ಯಾಸ ಆರಂಭ
IND vs SL: ಭಾರತ ಮತ್ತು ಶ್ರೀಲಂಕಾ ನಡುವಿನ 3 ಏಕದಿನ ಪಂದ್ಯಗಳ ಸರಣಿ ಆಗಸ್ಟ್ 2 ರಿಂದ ಪ್ರಾರಂಭವಾಗಲಿದ್ದು, ಇದಕ್ಕಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಏಕದಿನ ತಂಡದ ಎಲ್ಲಾ ಸದಸ್ಯರು ಕೊಲಂಬೊ ತಲುಪಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಪಲ್ಲೆಕೆಲೆಯಿಂದ 152 ಕಿಲೋಮೀಟರ್ ದೂರದಲ್ಲಿರುವ ಕೊಲಂಬೊದಲ್ಲಿ ಈ ಏಕದಿನ ತಂಡದ ಆಟಗಾರರ ಅಭ್ಯಾಸ ಆರಂಭವಾಗಿದೆ.
1 / 8
ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ನಿರತವಾಗಿದೆ. ಈಗಾಗಲೇ ಎರಡು ಪಂದ್ಯಗಳು ಮುಗಿದಿದ್ದು, ಎರಡಕ್ಕೆ ಎರಡೂ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಈಗಾಗಲೇ ಸರಣಿ ಕೈವಶ ಮಾಡಿಕೊಂಡಿದೆ. ಇದೀಗ ಸರಣಿಯ ಕೊನೆಯ ಪಂದ್ಯ ಜುಲೈ 30ರಂದು ನಡೆಯಲಿದೆ.
2 / 8
ಆ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲ್ಲಿದ್ದು, ಈ ಸರಣಿಗೂ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಅದರಂತೆ, ಟಿ20 ಸರಣಿಗೆ ಆಯ್ಕೆಯಾಗದ 6 ಆಟಗಾರರು ಏಕದಿನ ಸರಣಿಗಾಗಿ ಶ್ರೀಲಂಕಾಗೆ ಪ್ರಯಾಣ ಬೆಳೆಸಿದ್ದು, ಪ್ರತ್ಯೇಕವಾಗಿ ಅಭ್ಯಾಸ ಶುರು ಮಾಡಲಿದ್ದಾರೆ.
3 / 8
ಭಾರತ ಮತ್ತು ಶ್ರೀಲಂಕಾ ನಡುವಿನ 3 ಏಕದಿನ ಪಂದ್ಯಗಳ ಸರಣಿ ಆಗಸ್ಟ್ 2 ರಿಂದ ಪ್ರಾರಂಭವಾಗಲಿದ್ದು, ಇದಕ್ಕಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಏಕದಿನ ತಂಡದ ಎಲ್ಲಾ ಸದಸ್ಯರು ಕೊಲಂಬೊ ತಲುಪಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಪಲ್ಲೆಕೆಲೆಯಿಂದ 152 ಕಿಲೋಮೀಟರ್ ದೂರದಲ್ಲಿರುವ ಕೊಲಂಬೊದಲ್ಲಿ ಈ ಏಕದಿನ ತಂಡದ ಆಟಗಾರರ ಅಭ್ಯಾಸ ಆರಂಭವಾಗಿದೆ.
4 / 8
ಏಕದಿನ ಸರಣಿಗಾಗಿ ಆಯ್ಕೆಯಾಗಿರುವ ಈ 6 ಆಟಗಾರರ ಪೈಕಿ ರೋಹಿತ್, ವಿರಾಟ್ ಹೊರತುಪಡಿಸಿ ಶ್ರೇಯಸ್ ಅಯ್ಯರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ ಮತ್ತು ಕೆಎಲ್ ರಾಹುಲ್ ಸೇರಿದ್ದಾರೆ. ಈ ಎಲ್ಲಾ ಆಟಗಾರರು ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ಮೊದಲ ಬಾರಿಗೆ ಪಂದ್ಯವನ್ನಾಡಲಿದ್ದಾರೆ. ಇವರಲ್ಲಿ ಶ್ರೇಯಸ್ ಅಯ್ಯರ್ ಮತ್ತು ಹರ್ಷಿತ್ ರಾಣಾ ಐಪಿಎಲ್‌ನಲ್ಲಿ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ಜೊತೆ ಆಡಿದ ಅನುಭವ ಹೊಂದಿದ್ದಾರೆ.
5 / 8
ಈ ಆರು ಆಟಗಾರರು ಈಗಾಗಲೇ ಶ್ರೀಲಂಕಾಗೆ ತಲುಪಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪ್ರಮುಖವಾಗಿ ಟಿ20 ವಿಶ್ವಕಪ್ ಬಳಿಕ ಮೊದಲ ಸರಣಿ ಆಡುತ್ತಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಈ ಸರಣಿ ಬಹು ಮುಖ್ಯವಾಗಿದೆ. ವರದಿ ಪ್ರಕಾರ ಟಿ20 ವಿಶ್ವಕಪ್ ಮುಗಿದ ಬಳಿಕ ಈ ಇಬ್ಬರು ಲಂಡನ್ನಲ್ಲಿ ಕುಟುಂಬದೊಂದಿಗೆ ಕಾಲ ಕಳೆದಿದ್ದು, ಇದೀಗ ನೇರವಾಗಿ ಕೊಲಂಬೊಕ್ಕೆ ಬಂದಿಳಿದ್ದಾರೆ.
6 / 8
ಟಿ20 ಸರಣಿಯ ನಂತರ, ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯು ಗೌತಮ್ ಗಂಭೀರ್ ಅವರ ಎರಡನೇ ದೊಡ್ಡ ಕೋಚಿಂಗ್ ಮಿಷನ್ ಆಗಿರುತ್ತದೆ. ಈಗಾಗಲೇ ಟಿ20 ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಇದೀಗ ಏಕದಿನ ಸರಣಿಯ ಸರದಿಯಾಗಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.
7 / 8
ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಆಗಸ್ಟ್ 2 ರಂದು ನಡೆಯಲಿದೆ. ಹಾಗೆಯೇ ಎರಡನೇ ಏಕದಿನ ಪಂದ್ಯ ಆಗಸ್ಟ್ 4 ರಂದು ನಡೆಯಲಿದೆ. ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ. ಈ ಮೂರು ಪಂದ್ಯಗಳು ಕೊಲಂಬೊದಲ್ಲಿ ಮಾತ್ರ ನಡೆಯಲಿವೆ.
8 / 8
ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.