IND vs SL: ಕೊಹ್ಲಿ ಶತಕದ ಬಳಿಕ ಕ್ರೀಡಾಂಗಣ ಭರ್ತಿ! ಎರಡನೇ ಏಕದಿನ ಪಂದ್ಯದ ಟಿಕೆಟ್ಗೆ ಭಾರಿ ಬೇಡಿಕೆ
TV9 Web | Updated By: ಪೃಥ್ವಿಶಂಕರ
Updated on:
Jan 11, 2023 | 12:23 PM
Virat Kohli: ತಮ್ಮ ಬಿರುಸಿನ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಬಾರಿಸಿದ ಕೊಹ್ಲಿ, ಈ ಅದ್ಭುತ ಇನ್ನಿಂಗ್ಸ್‌ಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.
1 / 6
ಗುವಾಹ ಟಿಯಲ್ಲಿ ನಡೆದ ಭಾರತ- ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 67 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
2 / 6
ತಂಡದ ಪರ ವಿರಾಟ್ ಕೊಹ್ಲಿ 113 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡುವುದರೊಂದಿಗೆ ಬರೋಬ್ಬರಿ 4 ವರ್ಷಗಳ ನಂತರ ತವರಿನಲ್ಲಿ ಶತಕ ಬಾರಿಸಿದರು. ಇದು ಅವರ ವೃತ್ತಿ ಜೀವನದ 73ನೇ ಶತಕ ಮತ್ತು 45ನೇ ಏಕದಿನ ಶತಕವೂ ಆಗಿದೆ.
3 / 6
ತಮ್ಮ ಬಿರುಸಿನ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಬಾರಿಸಿದ ಕೊಹ್ಲಿ, ಈ ಅದ್ಭುತ ಇನ್ನಿಂಗ್ಸ್‌ಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.
4 / 6
ಇದೀಗ ಉಭಯ ತಂಡಗಳು ಎರಡನೇ ಪಂದ್ಯಕ್ಕೆ ತಯಾರಿ ಆರಂಭಿಸಿವೆ. ಎರಡನೇ ಏಕದಿನ ಪಂದ್ಯ ಜನವರಿ 12 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿದೆ. ವಾಸ್ತವವಾಗಿ ಮೊದಲ ಏಕದಿನ ಪಂದ್ಯ ಗೆದ್ದಿರುವ ಟೀಂ ಇಂಡಿಯಾ, ಈ ಪಂದ್ಯವನ್ನು ಗೆಲ್ಲುವುದರೊಂದಿಗೆ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.
5 / 6
ಈ ಪಂದ್ಯಕ್ಕೆ ಮತ್ತಷ್ಟು ರೋಚಕತೆ ಹೆಚ್ಚಿಸುವ ಸುದ್ದಿಯೊಂದು ಇದೀಗ ಈಡನ್ ಗಾರ್ಡನ್ನಿಂದ ಹೊರಬಿದ್ದಿದೆ. ವಾಸ್ತವವಾಗಿ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಎರಡನೇ ಪಂದ್ಯಕ್ಕಾಗಿ ಟಿಕೆಟ್ ಮಾರಾಟವನ್ನು ಆರಂಭಿಸಲಾಗಿತ್ತು. ಆದರೆ ಟಿಕೆಟ್ ಮಾರಟದ ವೇಗ ನಿಧಾನವಾಗಿತ್ತು.
6 / 6
ಆದರೆ ವಿರಾಟ್ ಕೊಹ್ಲಿ ದಾಖಲೆಯ ಶತಕ ಸಿಡಿಸಿದ ಫಲವಾಗಿ ಟಿಕೆಟ್ ಮಾರಾಟವೂ ಕೂಡ ವೇಗವನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಅಲ್ಲದೆ ಬಹುತೇಕ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ ಎಂಬ ಸುದ್ದಿ ಬಂದಿದೆ. ಅಂದರೆ ಪಂದ್ಯ ಹೌಸ್ ಫುಲ್ ಆಗಲಿದೆ.
Published On - 12:21 pm, Wed, 11 January 23