IND vs WI: ಅರ್ಧಶತಕ ಸಿಡಿಸಿ ಸೂರ್ಯಕುಮಾರ್ ದಾಖಲೆ ಮುರಿದ ತಿಲಕ್ ವರ್ಮಾ
Tilak Varma: 20ರ ಹರೆಯದ ವರ್ಮಾ ತಮ್ಮ ಚೊಚ್ಚಲ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ 39 ರನ್ ಸಿಡಿಸಿದ್ದರು. ಇದೀಗ ಎರಡನೇ ಪಂದ್ಯದಲ್ಲಿ 41 ಎಸೆತಗಳ ಸಹಾಯದಿಂದ 51 ರನ್ ಸಿಡಿಸಿ, ಮೊದಲ ಎರಡು ಪಂದ್ಯಗಳಿಂದ 90 ರನ್ ಕಲೆ ಹಾಕಿದ್ದಾರೆ.
1 / 9
ಆಗಸ್ಟ್ 6 ರಂದು ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾ ಸೋಲು ಕಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೇವಲ 152 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ಪಡೆ ಇನ್ನು 7 ವಿಕೆಟ್ ಇರುವಂತೆಯೇ 8ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
2 / 9
ಇನ್ನು ಈ ಪಂದ್ಯದಲ್ಲೂ ಮತ್ತೊಮ್ಮೆ ತಂಡದ ಬ್ಯಾಟಿಂಗ್ ವಿಭಾಗ ಮುಗ್ಗರಿಸಿತು. ಆದರೆ ಟೀಂ ಇಂಡಿಯಾ ಪರ ಚೊಚ್ಚಲ ಟಿ20 ಸರಣಿ ಆಡುತ್ತಿರುವ ಯುವ ಬ್ಯಾಟರ್ ತಿಲಕ್ ವರ್ಮಾ ಸತತ ಎರಡನೇ ಪಂದ್ಯದಲ್ಲೂ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇದರೊಂದಿಗೆ ಪ್ರಮುಖ ದಾಖಲೆಗಳನ್ನು ತನ್ನದಾಗಿಸಿಕೊಂಡರು.
3 / 9
20ರ ಹರೆಯದ ವರ್ಮಾ ತಮ್ಮ ಚೊಚ್ಚಲ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ 39 ರನ್ ಸಿಡಿಸಿದ್ದರು. ಇದೀಗ ಎರಡನೇ ಪಂದ್ಯದಲ್ಲಿ 41 ಎಸೆತಗಳ ಸಹಾಯದಿಂದ 51 ರನ್ ಸಿಡಿಸಿ, ಮೊದಲ ಎರಡು ಪಂದ್ಯಗಳಿಂದ 90 ರನ್ ಕಲೆ ಹಾಕಿದ್ದಾರೆ.
4 / 9
ಇದರೊಂದಿಗೆ ಈ ಮೊದಲು ಭಾರತೀಯ ಕ್ರಿಕೆಟಿಗರಿಂದ ಮೊದಲ ಎರಡು ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ್ದ ಸೂರ್ಯಕುಮಾರ್ ಯಾದವ್ ಅವರ 89 ರನ್‌ಗಳ ದಾಖಲೆಯನ್ನು ಮೀರಿಸಿದರು. ಪ್ರಸ್ತುತ ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಅವರು ಮಾರ್ಚ್ 2021 ರಲ್ಲಿ ತಾವು ಆಡಿದ ಮೊದಲ ಎರಡು ಟಿ20 ಪಂದ್ಯಗಳಲ್ಲಿ 89 ರನ್ ಸಿಡಿಸಿ ಈ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದರು.
5 / 9
ಇನ್ನು ಈ ಪಟ್ಟಿಯಲ್ಲಿ ಈ ಇಬ್ಬರನ್ನು ಹೊರತುಪಡಿಸಿ, ಮೊದಲೆರಡು ಟಿ20 ಪಂದ್ಯಗಳಲ್ಲಿ 83 ರನ್ ಸಿಡಿಸಿದ್ದ ಮಂದೀಪ್ ಸಿಂಗ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
6 / 9
ಈ ದಾಖಲೆಯೊಂದಿಗೆ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದ ತಿಲಕ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅರ್ಧಶತಕ ದಾಖಲಿಸಿದ ಭಾರತದ ಎರಡನೇ ಕಿರಿಯ ಬ್ಯಾಟರ್ ಎನಿಸಿಕೊಂಡರು.
7 / 9
ಈ ಮೊದಲು ನಾಯಕ ರೋಹಿತ್ ಶರ್ಮಾ ಅವರು 20 ವರ್ಷ, 143 ದಿನಗಳಲ್ಲಿ ತಮ್ಮ ಚೊಚ್ಚಲ ಟಿ20 ಅರ್ಧಶತಕ ಸಿಡಿಸಿ ಈ ದಾಖಲೆ ಬರೆದಿದ್ದರು.
8 / 9
ಇದೀಗ 20 ವರ್ಷ, 143 ದಿನಗಳಲ್ಲಿ ತಮ್ಮ ಮೊದಲ ಅರ್ಧಶತಕ ಸಿಡಿಸಿರುವ ತಿಲಕ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
9 / 9
ಹಾಗೆಯೇ 21 ವರ್ಷ, 38 ದಿನಗಳಲ್ಲಿ ಮೊದಲ ಟಿ20 ಅರ್ಧಶತಕ ಸಿಡಿಸಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.