
ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ ಜೋಡಿಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಇದುವರೆಗೆ ಜೊತೆಯಾಗಿ 5 ವಿಕೆಟ್ ಉರುಳಿಸಿದು, ಟೆಸ್ಟ್ ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ.

ಭಾರತದ ಈ ಸ್ಟಾರ್ ಸ್ಪಿನ್ ಜೋಡಿ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಿಗೆ ಆಡುವ ಮೂಲಕ 500 ವಿಕೆಟ್‌ಗಳನ್ನು ಉರುಳಿಸಿದ ಟೀಂ ಇಂಡಿಯಾದ ಎರಡನೇ ಜೋಡಿ ಎನಿಸಿಕೊಂಡಿದೆ. ಟ್ರಿನಿಡಾಡ್ ಟೆಸ್ಟ್‌ನ 4 ನೇ ದಿನದಂದು ವೆಸ್ಟ್ ಇಂಡೀಸ್ ತಂಡದ ಎರಡು ವಿಕೆಟ್ ಪಡೆದ ಅಶ್ವಿನ್ ಈ ದಾಖಲೆ ಬರೆಯಲು ನೆರವಾದರು.

ಈ ಹಿಂದೆ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಜೋಡಿ ಒಟ್ಟಿಗೆ ಆಡುವಾಗ 500 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಏಕೈಕ ಭಾರತೀಯ ಜೋಡಿಯಾಗಿತ್ತು. 1990 ಮತ್ತು 2000 ರ ದಶಕದಲ್ಲಿ ಎದುರಾಳಿ ಬ್ಯಾಟಿಂಗ್ ವಿಭಾಗದ ಬೆನ್ನೇಲುಬು ಮುರಿಯುತ್ತಿದ್ದ ಈ ಜೋಡಿ ಜೊತೆಯಾಗಿ 501 ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾಗುತ್ತು.

ಜೊತೆಯಾಗಿ54 ಟೆಸ್ಟ್ ಪಂದ್ಯಗಳನ್ನಾಡಿರುವ ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಒಟ್ಟು 501 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಇದರಲ್ಲಿ ಕುಂಬ್ಳೆ ಪಾಲು 281 ವಿಕೆಟ್‌ಗಳಾಗಿದ್ದರೆ, ಹರ್ಭಜನ್ ಸಿಂಗ್ ಪಾಲ್ 220 ವಿಕೆಟ್ಗಳಾಗಿವೆ.

ಇದೀಗ ಈ ದಾಖಲೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿರುವ ಅಶ್ವಿನ್ ಹಾಗೂ ಜಡೇಜಾ ಜೋಡಿ 49 ಟೆಸ್ಟ್‌ಗಳಲ್ಲಿ 500 ವಿಕೆಟ್ ಉರುಳಿಸಿದೆ. ಈ ಜೊತೆ ಪಯಣದಲ್ಲಿ ಅಶ್ವಿನ್ 274 ವಿಕೆಟ್‌ಗಳನ್ನು ಪಡೆದ್ದರೆ, ಎಡಗೈ ಸ್ಪಿನ್ನರ್ ಜಡೇಜಾ 226 ವಿಕೆಟ್ ಉರುಳಿಸಿದ್ದಾರೆ.

ಇನ್ನು ಭಾರತದ ಪರ ಜೊತೆಯಾಗಿ ಅತಿ ಹೆಚ್ಚು ವಿಕೆಟ್ ಉರುಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಬಿಶನ್ ಬೇಡಿ ಮತ್ತು ಬಿಎಸ್ ಚಂದ್ರಶೇಖರ್ ಜೊತೆಯಾಗಿ 42 ಟೆಸ್ಟ್‌ಗಳಲ್ಲಿ ಆಡಿದ್ದು, 368 ವಿಕೆಟ್ ಉರುಳಿಸಿದ್ದಾರೆ. ಇದರಲ್ಲಿ 184 ವಿಕೆಟ್ಗಳು ಬಿಶನ್ ಬೇಡಿಯವರದ್ದಾಗಿದ್ದರೆ, 184 ವಿಕೆಟ್ಗಳು ಬಿಎಸ್ ಚಂದ್ರಶೇಖರ್ದವರದ್ದಾಗಿವೆ.