Updated on: Jun 22, 2023 | 7:30 AM
ಭಾರತ ತಂಡದ ಆಟಗಾರರು ಸದ್ಯ ಕ್ರಿಕೆಟ್ನಿಂದ ವಿರಾಮ ಪಡೆದುಕೊಂಡಿದ್ದು, ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋಲುಂಡು ತವರಿಗೆ ಹಿಂತಿರುಗಿದ ಬಳಿಕ ಒಂದು ತಿಂಗಳ ವಿಶ್ರಾಂತಿಯಲ್ಲಿದ್ದಾರೆ.
ಟೀಮ್ ಇಂಡಿಯಾ ತನ್ನ ಮುಂದಿನ ಸರಣಿಯನ್ನು ಕೆರಿಬಿಯನ್ನರ ವಿರುದ್ಧ ಆಡಲಿದೆ. ವೆಸ್ಟ್ ಇಂಡೀಸ್ ನಾಡಿಗೆ ಪ್ರವಾಸ ಬೆಳೆಸಲಿರುವ ಭಾರತ ಇಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿ ಟೆಸ್ಟ್ ಪಂದ್ಯದ ಮೂಲಕ ಜುಲೈ 12ಕ್ಕೆ ಶುರುವಾಗಲಿದೆ. ಆದರೆ, ಈ ಸರಣಿ ಆರಂಭವಾಗುವುದು ಅನುನಾನ ಎನ್ನಲಾಗುತ್ತಿದೆ.
ಯಾಕೆಂದರೆ ಜಿಂಬಾಬ್ವೆಯಲ್ಲಿ ಐಸಿಸಿ ಏಕದಿನ ವಿಶ್ವಕಪ್ಗೆ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡುತ್ತಿದೆ. ಇದರಲ್ಲಿ ವೆಸ್ಟ್ ಇಂಡೀಸ್ ತಂಡ ಕೂಡ ಪಾಲ್ಗೊಂಡಿದ್ದು ಜುಲೈ 9 ರಂದು ಕೊನೆಯ ಪಂದ್ಯ ಆಡಲಿದೆ.
ಎರಡು ದಿನಗಳ ಅಂತರದಲ್ಲಿ ವಿಂಡೀಸ್ ಜಿಂಬಾಬ್ವೆ ಯಿಂದ ತವರಿಗೆ ಮರಳಿ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಬೇಕು. ಇದು ಕಷ್ಟ ಆಗಿರುವುದರಿಂದ ಜುಲೈ 12 ರಂದು ಶುರುವಾಗಲಿರುವ ಟೆಸ್ಟ್ ತಡವಾಗಿ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡವನ್ನು ಇದೇ ಜೂನ್ 27 ರಂದು ಪ್ರಕಟ ಮಾಡಲಿದೆ. ಸದ್ಯಕ್ಕೆ ಮೊದಲ ಟೆಸ್ಟ್ ಜುಲೈ 12 ರಿಂದ 16 ರವರೆಗೆ ಆಯೋಜಿಸಲಾಗಿದೆ. ಜುಲೈ 20 ರಿಂದ 24 ರವರೆಗೆ ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಎರಡನೇ ಟೆಸ್ಟ್ ನಡೆಯಲಿದೆ.
ನಂತರ ಮೂರು ಏಕದಿನ ಪಂದ್ಯಗಳ ಸರಣಿಯು ನಡೆಯಲಿದೆ. ಜುಲೈ 27, 29 ಹಾಗೂ ಆಗಸ್ಟ್ 1 ರಂದು ಈ ಪಂದ್ಯವನ್ನು ಆಯೋಜಿಸಲಾಗಿದೆ. ಕೊನೆಯದಾಗಿ ಟಿ20 ಸರಣಿಯು ಆರಂಭಗೊಳ್ಳಲಿದ್ದು, ಆಗಸ್ಟ್ 3 ರಂದು ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ಮೊದಲ ಪಂದ್ಯವಿದೆ. ನಂತರ ಆಗಸ್ಟ್ 6 ಮತ್ತು 8 ರಂದು ಎರಡು ಮತ್ತು ಮೂರನೇ ಟಿ20, ಆಗಸ್ಟ್ 12 ರಂದು 4ನೇ ಪಂದ್ಯ, 5 ನೇ ಹಾಗೂ ಅಂತಿಮ ಪಂದ್ಯದ ಆ. 13 ರಂದು ಆಡಲಿದೆ.