IND vs WI: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾದ ಈ ನಾಲ್ವರು ಆಟಗಾರರು ಅಲಭ್ಯ..!

|

Updated on: Jun 16, 2023 | 6:37 PM

IND vs WI: ವಿಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾದ ಪ್ರಮುಖ 4 ಆಟಗಾರರು ಅಲಭ್ಯರಾಗಲಿದ್ದು, ಯಾವ ಕಾರಣಕ್ಕಾಗಿ ಈ ಆಟಗಾರರು ತಂಡದಿಂದ ಹೊರಗುಳಿಯಲ್ಲಿದ್ದಾರೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.

1 / 7
ಡಬ್ಲ್ಯುಟಿಸಿ ಆಡಿ ಮುಗಿಸಿದ ಬಳಿಕ ಇದೀಗ ಟೀಂ ಇಂಡಿಯಾ ಬರೋಬ್ಬರಿ 1 ತಿಂಗಳ ವಿಶ್ರಾಂತಿ ಪಡೆಯಲಿದೆ. ಆ ಬಳಿಕ ಪೂರ್ಣ ಪ್ರಮಾಣದ ಸರಣಿಗಾಗಿ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ಭಾರತ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ.

2 / 7
ಸತತ ಎರಡನೇ ಬಾರಿಗೆ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾದ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಹಿರಿಯ ಮುಖಗಳಿಗೆ ವಿಶ್ರಾಂತಿ ನೀಡಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಲು ಬಿಸಿಸಿಐ ಚಿಂತಿಸಿದೆ. ಇದು ಭವಿಷ್ಯದ ಟೀಂ ಇಂಡಿಯಾವನ್ನು ಕಟ್ಟುವ ಮೊದಲ ಹೆಜ್ಜೆಯಾಗಲಿದೆ.

3 / 7
ಆದರೆ ಈ ನಡುವೆ ಈ ವಿಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾದ ಪ್ರಮುಖ 4 ಆಟಗಾರರು ಅಲಭ್ಯರಾಗಲಿದ್ದು, ಯಾವ ಕಾರಣಕ್ಕಾಗಿ ಈ ಆಟಗಾರರು ತಂಡದಿಂದ ಹೊರಗುಳಿಯಲ್ಲಿದ್ದಾರೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.

4 / 7
ಕೆಎಲ್ ರಾಹುಲ್: 16ನೇ ಆವೃತ್ತಿಯ ಐಪಿಎಲ್​ ವೇಳೆ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದ ರಾಹುಲ್, ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಚೇತರಿಸಿಕೊಂಡಿರುವ ರಾಹುಲ್, ಪುನರ್ವಸತಿ ಆರಂಭಿಸಿದ್ದು, ಫಿಟ್ ಆಗಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ ಸಿಎ) ಸ್ವಲ್ಪ ಸಮಯ ಕಳೆಯಲಿದ್ದಾರೆ. ಸದ್ಯ ಫಿಟ್ನೇಸ್ ಮೇಲೆ ಕೆಲಸ ಮಾಡುತ್ತಿರುವ ರಾಹುಲ್ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

5 / 7
ಜಸ್ಪ್ರೀತ್ ಬುಮ್ರಾ: ಬೆನ್ನುನೋವಿನಿಂದಾಗಿ ಕಳೆದ ಸೆಪ್ಟೆಂಬರ್​ನಿಂದಲೂ ತಂಡದಿಂದ ಹೊರಗಿರುವ ಬುಮ್ರಾ ತಂಡಕ್ಕೆ ಮರಳುವುದು ಇನ್ನೂ ಎರಡು ತಿಂಗಳು ತಡವಾಗಬಹುದು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕಾಮೆಂಟ್ ಮಾಡುವ ವೇಳೆ ಬುಮ್ರಾ ಎಂಟ್ರಿಯ ಬಗ್ಗೆ ಮಾಹಿತಿ ನೀಡಿದ್ದ ದಿನೇಶ್ ಕಾರ್ತಿಕ್, ಬುಮ್ರಾ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದಿದ್ದರು

6 / 7
ಶ್ರೇಯಸ್ ಅಯ್ಯರ್: ಜಸ್ಪ್ರೀತ್ ಬುಮ್ರಾ ಅವರಂತೆ, ಶ್ರೇಯಸ್ ಅಯ್ಯರ್ ಕೂಡ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಂದರ್ಭದಲ್ಲಿ ಇಂಜುರಿಗೊಳಗಾಗಿದ್ದರು. ಆ ಬಳಿಕ ಏಪ್ರಿಲ್‌ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಯ. ಹೀಗಾಗಿ ಅಯ್ಯರ್ ಈ ಬಾರಿಯ ಐಪಿಎಲ್​ನಿಂದಲೂ ಹೊರಗುಳಿದಿದ್ದರು. ಸದ್ಯ ಚೇತರಿಕೆಯ ಹಾದಿಯಲ್ಲಿರುವ ಅಯ್ಯರ್, ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್​ಗೆ ತಂಡ ಸೇರಿಕೊಳ್ಳುವ ಸಾಧ್ಯತೆಗಳಿವೆ.

7 / 7
ರಿಷಬ್ ಪಂತ್: ಭೀಕರ ಕಾರು ಅಪಘಾತಕ್ಕೊಳಗಾಗಿ ಚೇತರಿಸಿಕೊಳ್ಳುತ್ತಿರುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಸದ್ಯ ಎನ್​ಸಿಎಯಲ್ಲಿದ್ದಾರೆ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಪಂತ್ ಏಕದಿನ ವಿಶ್ವಕಪ್​ ಮೂಲಕ ಟೀಂ ಇಂಡಿಯಾಕ್ಕೆ ಎಂಟ್ರಿಕೊಡಲು ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಪಂತ್ ಆ ವೇಳೆಗೆ ಫಿಟ್ ಆಗುತ್ತಾರಾ ಎಂಬುದು ಪ್ರಶ್ನೆಯಾಗಿದೆ.

Published On - 6:35 pm, Fri, 16 June 23