IND vs WI: ಮೊದಲ ಟೆಸ್ಟ್‌ಗೆ ಯಾರು ಇನ್, ಯಾರು ಔಟ್? ಇಲ್ಲಿದೆ ಭಾರತ ಸಂಭಾವ್ಯ ತಂಡ
IND vs WI: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿ ಜುಲೈ 12 ರಿಂದ ಆರಂಭವಾಗಲಿದೆ. ಜುಲೈ 12 ರಂದು ವೆಸ್ಟ್ ಇಂಡೀಸ್‌ನ ಡೊಮಿನಿಕಾದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.
1 / 8
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿ ಜುಲೈ 12 ರಿಂದ ಆರಂಭವಾಗಲಿದೆ. ಜುಲೈ 12 ರಂದು ವೆಸ್ಟ್ ಇಂಡೀಸ್‌ನ ಡೊಮಿನಿಕಾದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಟೆಸ್ಟ್ ಪಂದ್ಯವು ಭಾರತದ ಕಾಲಮಾನ ಸಂಜೆ 7.30ಕ್ಕೆ ಪ್ರಾರಂಭವಾಗುತ್ತದೆ.
2 / 8
ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ಆಡುವ ಹನ್ನೊ.ಂದರ ಬಳಗವನ್ನು ಆಯ್ಕೆ ಮಾಡುವುದು ನಾಯಕ ರೋಹಿತ್ ಶರ್ಮಾಗೆ ಸುಲಭವಲ್ಲ. ಏಕೆಂದರೆ ಎರಡು ಡಬ್ಲ್ಯುಟಿಸಿ ಫೈನಲ್ ಸೋತಿರುವ ಭಾರತಕ್ಕೆ ಮುಂದಿನ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಗೆಲ್ಲಬೇಕೆಂದರೆ ಈಗಿನಿಂದಲೇ ಬಲಿಷ್ಠ ತಂಡವನ್ನು ಕಟ್ಟುವ ಕೆಲಸವನ್ನು ರೋಹಿತ್ ಹಾಗೂ ದ್ರಾವಿಡ್ ಮಾಡಬೇಕಿದೆ.
3 / 8
ತಂಡದ ಬ್ಯಾಟಿಂಗ್ ವಿಭಾಗವನ್ನು ನೋಡುವುದಾದರೆ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಆಡುವುದು ಪಕ್ಕಾ ಎನ್ನಬಹುದಾಗಿದೆ.
4 / 8
ವಿಕೆಟ್ ಕೀಪಿಂಗ್ ವಿಭಾಗದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆಎಸ್ ಭರತ್ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಇಶಾನ್ ಕಿಶನ್ ಈ ಟೆಸ್ಟ್ನಲ್ಲಿ ಪದಾರ್ಪಣೆ ಮಾಡುವ ಅವಕಾಶ ಪಡೆಯಲಿದ್ದು, ಕೀಪಿಂಗ್ ಜೊತೆಗೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
5 / 8
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಸ್ಪಿನ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಅವರಿಗೆ ರವೀಂದ್ರ ಜಡೇಜಾ ಸಾಥ್ ನೀಡುವ ಸಾಧ್ಯತೆಗಳಿವೆ. ಒಂದು ವೇಳೆ ಜಡೇಜಾಗೆ ತಂಡದಲ್ಲಿ ಅವಕಾಶ ನೀಡಿದರೆ, ಅಕ್ಷರ್ ಪಟೇಲ್ ಬೆಂಚ್ ಕಾಯಬೇಕಾಗುತ್ತದೆ.
6 / 8
ಹಾಗೆಯೇ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ಮತ್ತು ಜಯದೇವ್ ಉನದ್ಕಟ್ಗೆ ನಾಯಕ ರೋಹಿತ್ ಅವಕಾಶ ನೀಡಿದರೆ, ಶಾರ್ದೂಲ್ ಠಾಕೂರ್ ಆಡುವ ಹನ್ನೊಂದರಿಂದ ಹೊರಗುಳಿಯಲಿದ್ದಾರೆ.
7 / 8
ಮೊದಲ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಜಯದೇವ್ ಉನದ್ಕಟ್.
8 / 8
ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ.