ಭಾರತ ತಂಡ 3 ಏಕದಿನ ಸರಣಿಗಾಗಿ ಜಿಂಬಾಬ್ವೆ ಪ್ರವಾಸದಲ್ಲಿದೆ. ಎರಡು ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಆಗಸ್ಟ್ 18 ರಂದು ನಡೆಯಲಿದೆ. ಇದರ ನಂತರ ಉಳಿದ ಎರಡೂ ಪಂದ್ಯಗಳು ಆಗಸ್ಟ್ 20 ರಂದು ಮತ್ತು ನಂತರ ಆಗಸ್ಟ್ 22 ರಂದು ನಡೆಯಲಿವೆ.
ಜಿಂಬಾಬ್ವೆಯಲ್ಲಿ, ಟೀಂ ಇಂಡಿಯಾ ಎಲ್ಲಾ ಸ್ವರೂಪಗಳಲ್ಲಿ ಒಟ್ಟು 44 ಪಂದ್ಯಗಳನ್ನು ಆಡಿದೆ. ಇದರಲ್ಲಿ 43 ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ, ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಜಿಂಬಾಬ್ವೆಯಲ್ಲಿ ಭಾರತೀಯ ಆಟಗಾರರ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಇಲ್ಲಿ ಪ್ರಾಬಲ್ಯ ಹೊಂದಿದ್ದಾರೆ.
ಸಚಿನ್ ತೆಂಡೂಲ್ಕರ್ ಜಿಂಬಾಬ್ವೆಯಲ್ಲಿ ಅತ್ಯಂತ ಯಶಸ್ವಿ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅವರು ಇಲ್ಲಿ 15 ಪಂದ್ಯಗಳ 18 ಇನ್ನಿಂಗ್ಸ್‌ಗಳಲ್ಲಿ 813 ರನ್ ಗಳಿಸಿದ್ದಾರೆ. ಅಜೇಯ 127 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಸೇರಿದಂತೆ. ರಾಹುಲ್ ದ್ರಾವಿಡ್ 795 ರನ್ ಗಳಿಸಿ ತೆಂಡೂಲ್ಕರ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ.
ಜಿಂಬಾಬ್ವೆಯಲ್ಲಿ ಭಾರತದ 5ನೇ ಯಶಸ್ವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಆರನೇ ಆಟಗಾರ ರೋಹಿತ್ ಶರ್ಮಾ. ಇಲ್ಲಿ 11 ಪಂದ್ಯಗಳ 8 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 391 ರನ್ ಗಳಿಸಿದ್ದರೆ, ರೋಹಿತ್ 10 ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ 369 ರನ್ ಗಳಿಸಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ ಪ್ರಸ್ತುತ ತಂಡದಲ್ಲಿ ಸ್ಥಾನ ಪಡೆದಿರುವ ಕೆಎಲ್ ರಾಹುಲ್ 11ನೇ ಸ್ಥಾನದಲ್ಲಿದ್ದು, ಅವರು 6 ಪಂದ್ಯಗಳಲ್ಲಿ 265 ರನ್ ಗಳಿಸಿದ್ದಾರೆ.
ಹರ್ಭಜನ್ ಸಿಂಗ್ ಜಿಂಬಾಬ್ವೆಯಲ್ಲಿ ಅತ್ಯಂತ ಯಶಸ್ವಿ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಅವರು 22 ಪಂದ್ಯಗಳ 27 ಇನ್ನಿಂಗ್ಸ್‌ಗಳಲ್ಲಿ ಗರಿಷ್ಠ 36 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇತರ ಯಶಸ್ವಿ ಬೌಲರ್ಗಳ ಪಟ್ಟಿಯಲ್ಲಿ ಇರ್ಫಾನ್ ಪಠಾಣ್ ಕೂಡ ಸೇರಿದ್ದು, ಅವರು 6 ಪಂದ್ಯಗಳಲ್ಲಿ 31 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ತಂಡದಲ್ಲಿರುವ ಅಕ್ಷರ್ ಪಟೇಲ್ ಜಿಂಬಾಬ್ವೆಯಲ್ಲಿ 10 ನೇ ಅತ್ಯಂತ ಯಶಸ್ವಿ ಭಾರತೀಯ ಬೌಲರ್ ಆಗಿದ್ದಾರೆ. ಅವರು 11 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ.