IND vs AUS: ಟೀಂ ಇಂಡಿಯಾಗೆ ಸಿಹಿ ಸುದ್ದಿ; ರೋಹಿತ್ ಜೊತೆ ಶಮಿಯೂ ಆಸ್ಟ್ರೇಲಿಯಾಕ್ಕೆ
India's Test Squad Update: ರೋಹಿತ್ ಶರ್ಮಾ ಜೊತೆಗೆ ಮೊಹಮ್ಮದ್ ಶಮಿ ಅವರು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ. ರಣಜಿ ಟ್ರೋಫಿಯಲ್ಲಿ ಅವರ ಅದ್ಭುತ ಪ್ರದರ್ಶನದ ನಂತರ, ಶಮಿಯ ಫಿಟ್‌ನೆಸ್ ವರದಿಯನ್ನು ಭಾರತ ತಂಡ ನಿರೀಕ್ಷಿಸುತ್ತಿದೆ. ರೋಹಿತ್ ಎರಡನೇ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾದರೆ, ಶಮಿ ಅವರ ಆಟ ಮೊದಲ ಪಂದ್ಯದಲ್ಲಿ ಅನುಮಾನಾಸ್ಪದವಾಗಿದೆ.
1 / 8
ಆಸ್ಟ್ರೇಲಿಯಾದಲ್ಲಿ ನಡೆಯಲ್ಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಈ ಐದು ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಪರ್ತ್‌ನಲ್ಲಿ ಆರಂಭವಾಗಲಿದೆ. ರೋಹಿತ್ ಶರ್ಮಾ ಹೊರತುಪಡಿಸಿ ಎಲ್ಲರೂ ಆಸ್ಟ್ರೇಲಿಯಾದಲ್ಲಿದ್ದು, ಈ ಸರಣಿಗಾಗಿ ತಯಾರಿ ನಡೆಸುತ್ತಿದ್ದಾರೆ.
2 / 8
ವಾಸ್ತವವಾಗಿ, ರೋಹಿತ್ ತನ್ನ ಎರಡನೇ ಮಗುವಿನ ಜನನಕ್ಕಾಗಿ ಟೀಂ ಇಂಡಿಯಾದಿಂದ ವಿರಾಮ ತೆಗೆದುಕೊಂಡಿದ್ದರು. ಇದೀಗ ಅವರ ಪತ್ನಿ ರಿತಿಕಾ ಸಜ್ದೆ ಅವರು ನವೆಂಬರ್ 15 ರ ತಡರಾತ್ರಿ ಮಗನಿಗೆ ಜನ್ಮ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ಹಾರಲಿದ್ದಾರೆ. ಆದರೆ ವಿಶೇಷವೆಂದರೆ ರೋಹಿತ್ ಜೊತೆಗೆ ತಂಡದಲ್ಲಿಲ್ಲದ ಮತ್ತೊಬ್ಬ ಆಟಗಾರ ಕೂಡ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.
3 / 8
ಆಸ್ಟ್ರೇಲಿಯಾಕ್ಕೆ ಹೊರಡಲು ಸಿದ್ದರಾಗಿರುವ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಆಡುತ್ತಾರೋ, ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಎರಡನೇ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ರೋಹಿತ್ ಶರ್ಮಾ ಅವರೊಂದಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.
4 / 8
ಒಂದು ವರ್ಷದ ನಂತರ ಅಖಾಡಕ್ಕಿಳಿದಿರುವ ಮೊಹಮ್ಮದ್ ಶಮಿ, ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ಮಾತುಕತೆ ಶುರುವಾಗಿದೆ. ಹೀಗಾಗಿ ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ ಶಮಿಯನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
5 / 8
ಮೊಹಮ್ಮದ್ ಶಮಿ 2023ರ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಅಂದಿನಿಂದ ಗಾಯದ ಸಮಸ್ಯೆಯಿಂದ ಮೈದಾನದಿಂದ ಹೊರಗುಳಿದಿದ್ದರು. ಈ ವರ್ಷದ ಆರಂಭದಲ್ಲಿ ಅವರು ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಶಿಬಿರದಲ್ಲಿದ್ದರು.
6 / 8
ಇತ್ತೀಚೆಗಷ್ಟೇ ಬಂಗಾಳ ತಂಡದ ಪರ ಆಡುತ್ತಿದ್ದ ಅವರು ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ವಿರುದ್ಧ ಆಡಿದ್ದರು. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 19 ಓವರ್ಗಳಲ್ಲಿ 54 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಇದಾದ ಬಳಿಕ ಎರಡನೇ ಇನಿಂಗ್ಸ್ನಲ್ಲೂ ಶಮಿ 18 ಓವರ್ಗಳಲ್ಲಿ 74 ರನ್ ನೀಡಿ 2 ವಿಕೆಟ್ ಪಡೆದರು. ಇದಲ್ಲದೇ ಬ್ಯಾಟಿಂಗ್ನಲ್ಲೂ ಅದ್ಭುತ ಪ್ರದರ್ಶನ ತೋರಿದರು. ಹೀಗಾಗಿ ಶಮಿಯನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುವುದು ಭಾಗಶಃ ಖಚಿತವಾಗಿದೆ.
7 / 8
ಮತ್ತೊಂದೆಡೆ, ಶಮಿ ಅವರ ಫಿಟ್‌ನೆಸ್ ಕುರಿತು ಹೇಳಿಕೆ ನೀಡಿರುವ ಬಂಗಾಳದ ಕೋಚ್ ಲಕ್ಷ್ಮಿ ರತನ್ ಶುಕ್ಲಾ, ‘ಮೊಹಮ್ಮದ್ ಶಮಿ ಆಟಕ್ಕೆ ಸಿದ್ಧರಾಗಿದ್ದಾರೆ. ಬೌಲಿಂಗ್ ಮಾಡುವಾಗ ಅವರು ಸಂಪೂರ್ಣವಾಗಿ ಫಿಟ್ ಆಗಿ ಕಾಣುತ್ತಿದ್ದರು. ಅವರು ಎರಡು ಇನ್ನಿಂಗ್ಸ್‌ಗಳಲ್ಲಿ 44 ಓವರ್‌ಗಳನ್ನು ಬೌಲ್ ಮಾಡಿದರು ಮತ್ತು ಎಂದಿಗೂ ಲಯ ಕಳೆದುಕೊಳ್ಳಲಿಲ್ಲ ಅಥವಾ ಯಾವುದೇ ಫಿಟ್‌ನೆಸ್ ಸಮಸ್ಯೆಗಳನ್ನು ಎದುರಿಸಲಿಲ್ಲ ಎಂದಿದ್ದಾರೆ.
8 / 8
ಇದೀಗ ಶಮಿಯ ಭವಿಷ್ಯ ಎನ್ಸಿಎ ನೀಡುವ ಫಿಟ್ನೆಸ್ ವರದಿಯ ಮೇಲೆ ನಿರ್ಧಾರವಾಗಲಿದೆ. ಒಂದು ವೇಳೆ ಶಮಿ ಪೂರ್ಣ ಫಿಟ್ ಆಗಿದ್ದಾರೆ ಎಂಬ ವರದಿ ಬಂದರೆ, ಅವರು ರೋಹಿತ್ ಶರ್ಮಾ ಜೊತೆಗೆ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಮೊದಲ ಪಂದ್ಯದಲ್ಲಿ ಶಮಿ ಆಡುವುದು ಅನುಮಾನವಾಗಿದ್ದರೂ, ಎರಡನೇ ಪಂದ್ಯದಿಂದ ಅವರು ತಂಡದಲ್ಲಿ ಆಡುವುದನ್ನು ಕಾಣಬಹುದಾಗಿದೆ.