ಪಾಕ್ ವಿರುದ್ಧದ ಹಳೆಯ ದಾಖಲೆಗಳನ್ನು ಅಳಿಸಿ ಹಾಕಿದ ಟೀಮ್ ಇಂಡಿಯಾ

Updated on: Sep 22, 2025 | 12:53 PM

India vs Pakistan: ದುಬೈನಲ್ಲಿ ನಡೆದ ಏಷ್ಯಾಕಪ್ ಸೂಪರ್-4 ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಅದು ಸಹ ತನ್ನ ಬದ್ಧ ವೈರಿ ಪಾಕಿಸ್ತಾನ್ ತಂಡವನ್ನು ಹೀನಾಯವಾಗಿ ಸೋಲಿಸುವ ಮೂಲಕ. ಈ ಗೆಲುವಿನೊಂದಿಗೆ ಭಾರತ ತಂಡವು ಹಲವು ದಾಖಲೆಗಳನ್ನು ಸಹ ನಿರ್ಮಿಸಿದೆ. ಈ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

1 / 5
ಏಷ್ಯಾಕಪ್​ ಟಿ20 ಟೂರ್ನಿಯಲ್ಲಿ ಭಾರತ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಈ ನಾಗಾಲೋಟದ ಮುಂದೆ ಪಾಕಿಸ್ತಾನ್ ತಂಡ ಎರಡು ಬಾರಿ ಮುಗ್ಗರಿಸಿದೆ. ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ವಿರುದ್ಧ 7 ವಿಕೆಟ್​ಗಳ ಹೀನಾಯ ಸೋಲನುಭವಿಸಿದ್ದ ಪಾಕಿಸ್ತಾನ್ ಇದೀಗ ದ್ವಿತೀಯ ಪಂದ್ಯದಲ್ಲೂ 6 ವಿಕೆಟ್​ಗಳಿಂದ ಪರಾಜಯಗೊಂಡಿದೆ.

2 / 5
ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 18.5 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ 6 ವಿಕೆಟ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಪಾಕ್ ವಿರುದ್ಧದ ಹಳೆಯ ದಾಖಲೆಗಳನ್ನು ಅಳಿಸಿ ಹಾಕಿರುವುದು ವಿಶೇಷ.

3 / 5
ಅಂದರೆ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನ್ ವಿರುದ್ಧ 170+ ರನ್ ಚೇಸ್ ಮಾಡಿ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಪಾಕ್ ವಿರುದ್ಧ ಚೇಸ್ ಮಾಡಿದ ಗರಿಷ್ಠ ಸ್ಕೋರ್ 160 ರನ್​ಗಳು. 2022 ರಲ್ಲಿ 160 ರನ್ ಬೆನ್ನತ್ತಿ ಟೀಮ್ ಇಂಡಿಯಾ 4 ವಿಕೆಟ್​ಗಳ ಜಯ ಸಾಧಿಸಿತ್ತು. ಇದೀಗ 172 ರನ್​ಗಳ ಗುರಿ ಬೆನ್ನತ್ತುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

4 / 5
ಇನ್ನು ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಮೊದಲ ವಿಕೆಟ್​ಗೆ 105 ರನ್​ಗಳ ಜೊತೆಯಾಟವಾಡಿದ್ದರು. ಇದರೊಂದಿಗೆ ಪಾಕ್ ವಿರುದ್ಧ ಟಿ20 ಕ್ರಿಕೆಟ್​ನಲ್ಲಿ ಶತಕದ ಜೊತೆಯಾಟವಾಡಿದ ಭಾರತದ ಮೊದಲ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2012 ರಲ್ಲಿ ಗೌತಮ್ ಗಂಭೀರ್ ಹಾಗೂ ಅಜಿಂಕ್ಯ ರಹಾನೆ 77 ರನ್​ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ 105 ರನ್​ಗಳ ಪಾಲುದಾರಿಕೆಯೊಂದಿಗೆ ಅಭಿ-ಗಿಲ್ ಜೋಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

5 / 5
ಹಾಗೆಯೇ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಪಾಕಿಸ್ತಾನ್ ವಿರುದ್ಧ ಪವರ್​ಪ್ಲೇನಲ್ಲಿ 65 ಕ್ಕಿಂತ ಹೆಚ್ಚು ರನ್ ಕಲೆಹಾಕಿದೆ. ಇದಕ್ಕೂ ಮುನ್ನ 2022 ರಲ್ಲಿ 62 ರನ್​ಗಳಿಸಿದ್ದು ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ ಅಬ್ಬರಿಸಿದ ಅಭಿಷೇಕ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಮೊದಲ 6 ಓವರ್​ಗಳಲ್ಲಿ 69 ರನ್​ ಚಚ್ಚಿದ್ದಾರೆ. ಈ ಮೂಲಕ ಪಾಕ್ ವಿರುದ್ಧ ಟಿ20 ಕ್ರಿಕೆಟ್​ನಲ್ಲಿ ಮೊದಲ 6 ಓವರ್​ಗಳಲ್ಲಿ ಅತ್ಯಧಿಕ ರನ್​ಗಳಿಸಿದ ಜೋಡಿ ಎನಿಸಿಕೊಂಡಿದ್ದಾರೆ.