WIW vs INDW: ವಿಂಡೀಸ್ ವಿರುದ್ಧ ಭಾರತಕ್ಕೆ 8 ವಿಕೆಟ್​ಗಳ ಜಯ: ಫೆ. 2ಕ್ಕೆ ಆಫ್ರಿಕಾ ವಿರುದ್ಧ ಫೈನಲ್ ಫೈಟ್

|

Updated on: Jan 31, 2023 | 9:51 AM

India Women vs West Indies Women: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳೆಯರ ತ್ರಿಕೋನ ಟಿ20 ಸರಣಿಯ ಅಂತಿಮ ರೌಂಡ್ ರಾಬಿನ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ಗೆ ಸೋಲುಣಿಸಿರುವ ಭಾರತ ಮಹಿಳಾ ತಂಡ ಫೈನಲ್​ಗೆ ಪ್ರವೇಶ ಪಡೆದಿದೆ. ಇತ್ತ ಕೆರಿಬಿಯನ್ ಮಹಿಳೆಯರು ಸೋತು ಸರಣಿಯಿಂದ ಹೊರಬಿದ್ದಿದ್ದಾರೆ.

1 / 9
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳೆಯರ ತ್ರಿಕೋನ ಟಿ20 ಸರಣಿಯ ಅಂತಿಮ ರೌಂಡ್ ರಾಬಿನ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ಗೆ ಸೋಲುಣಿಸಿರುವ ಭಾರತ ಮಹಿಳಾ ತಂಡ ಫೈನಲ್​ಗೆ ಪ್ರವೇಶ ಪಡೆದಿದೆ. ಇತ್ತ ಕೆರಿಬಿಯನ್ ಮಹಿಳೆಯರು ಸೋತು ಸರಣಿಯಿಂದ ಹೊರಬಿದ್ದಿದ್ದಾರೆ.

2 / 9
ಫೆಬ್ರವರಿ 2 ರಂದು ಹರ್ಮನ್​ಪ್ರೀತ್ ಪಡೆ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತೀಯ ವನಿತೆಯರು ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದರು.

3 / 9
ಈಸ್ಟ್‌ ಲಂಡನ್​ನ ಬಫೆಲೊ ಪಾರ್ಕ್​ನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್​ಗಳ ಅಮೋಘ ಜಯ ಸಾಧಿಸಿದರು. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ವೆಸ್ಟ್ ಇಂಡೀಸ್ ನಿಧಾನಗತಿಯ ಆರಂಭ ಪಡೆದುಕೊಳ್ಳುವ ಜೊತೆಗೆ ವಿಕೆಟ್ ಕೂಡ ಕಳೆದುಕೊಂಡಿತು.

4 / 9
ರಶ್ಚಡಾ ವಿಲಿಯಮ್ಸ್ (8), ಎಸ್ ಕ್ಯಾಂಪ್​ಬೆಲ್ (0) ಹಾಗೂ ಡೆನಬಾ ಜೋಸೆಫ್ (3) ಬೇಗನೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ನಾಯಕಿ ಹೇಲೆ ಮ್ಯಾಥ್ಯೂಸ್ 34 ಎಸೆತಗಳಲ್ಲಿ 34 ರನ್​ಗಳ ಕೊಡುಗೆ ನೀಡಿದರು.

5 / 9
ಜೈದಾ ಜೇಮ್ಸ್ 31 ಎಸೆತಗಳಲ್ಲಿ ಅಜೇಯ 21 ರನ್ ಬಾರಿಸಿದರು. ಶಬಿಕಾ ಗಜ್ನಬಿ 12 ಹಾಗೂ ಅಲಿಯಾ ಅಲ್ನೆನಿ 9 ರನ್ ಗಳಿಸಿದರು. ವೆಸ್ಟ್ ಇಂಡೀಸ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತಷ್ಟೆ.

6 / 9
ಭಾರತ ಪರ ದೀಪ್ತಿ ಶರ್ಮಾ 3 ವಿಕೆಟ್ ಕಿತ್ತರೆ, ಪೂಜಾ ವಸ್ತ್ರಾಕರ್ 2 ಹಾಗೂ ಗಾಯಕ್ವಾಡ್ 1 ವಿಕೆಟ್ ಪಡೆದರು.

7 / 9
ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತೀಯ ವನಿತೆಯರು ಸ್ಮೃತಿ ಮಂದಾನ (5) ಹಾಗೂ ಹರ್ಲಿನ್ ಡಿಯೊನ್ (13) ವಿಕೆಟ್ ಬೇಗನೆ ಕಳೆದುಕೊಂಡಿತಾದರೂ ತಂಡಕ್ಕೆ ಯಾವುದೇ ಹೊಡೆತ ಬೀಳಲಿಲ್ಲ.

8 / 9
ಜೆಮಿಯ ರೋಡ್ರಿಗಸ್ 39 ಎಸೆತಗಳಲ್ಲಿ 5 ಫೋರ್​ನೊಂದಿಗೆ ಅಜೇಯ 42 ರನ್ ಸಿಡಿಸಿದರೆ, ನಾಯಕಿ ಹರ್ಮನ್​ಪ್ರೀತ್ ಕೌರ್ 23 ಎಸೆತಗಳಲ್ಲಿ 4 ಫೋರ್​ನೊಂದಿಗೆ ಅಜೇಯ 32 ರನ್ ಬಾರಿಸಿದರು.

9 / 9
ಭಾರತ 13.5 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿ 8 ವಿಕೆಟ್​ಗಳ ಜಯ ಸಾಧಿಸಿತು. ವಿಂಡೀಸ್ ಪರ ಶಮಿಲಾ ಕೊನೆಲ್ ಹಾಗೂ ಹೇಲೆ ಮ್ಯಾಥ್ಯೂಸ್ ತಲಾ 1 ವಿಕೆಟ್ ಪಡೆದರು.